Breaking News

ಡ್ರಗ್ಸ್ ಜಾಲ ಪತ್ತೆ ಪ್ರಕರಣ, ಬೆಳಗಾವಿ ವಿಭಾಗದಲ್ಲಿ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ

Spread the love

ವಿಜಯಪುರ: ಮಾದಕ ದ್ರವ್ಯ ಮುಕ್ತ ಸಮಾಜಕ್ಕೆ ಸಂಕಲ್ಪ ಮಾಡಿರುವ ಆರಕ್ಷಕರ ಅಭಿಯಾನಕ್ಕೆ ಸಾರ್ವಜನಿಕರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ಕಳೆದ ವರ್ಷ ಹಾಗೂ ಪ್ರಸಕ್ತ ಸಾಲಿನಲ್ಲಿ ಜೂನ್ ಅಂತ್ಯದವರೆಗೆ 98,76,720 ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ಜಪ್ತು ಮಾಡಿ ಒಟ್ಟು 79 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ ಸಂದೀಪ ಪಾಟೀಲ ಮಾಹಿತಿ ತಿಳಿಸಿದರು.
ಬೆಳಗಾವಿ ವಿಭಾಗದಲ್ಲಿ ಡ್ರಗ್ಸ್ ಭೇದಿಸುವ ಪ್ರಕರಣದಲ್ಲಿ ವಿಜಯಪುರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಮಾದಕ ದ್ರವ್ಯ ಮಾರಾಟ ಜಾಲ ಭೇದಿಸಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಹೀಗಾಗಿ ಕಳೆದ ವರ್ಷ ನಡೆಸಿದ ಕಾರ್ಯಾಚರಣೆಯ ಫಲವಾಗಿ 73 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ, ಕಳೆದ 2025 ನೇ ವರ್ಷದಲ್ಲಿ 74,73,140 ರೂ. ಮೌಲ್ಯದ ಮಾದಕ ದ್ರವ್ಯವನ್ನು ಜಪ್ತು ಮಾಡಿ 36 ಜನರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದರಲ್ಲಿ 23 ಜನ ಗ್ರಾಹಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅದೇ ತೆರನಾಗಿ ಪ್ರಸಕ್ತ ವರ್ಷದ ಜೂನ್ ಮಾಸಾಂತ್ಯದವರೆಗೆ 24,03,580 ರೂ. ಮೌಲ್ಯದ ಮಾದಕ ದ್ರವ್ಯ ಜಪ್ತು ಮಾಡಿಕೊಂಡು, 37 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, 17 ಜನ ಗ್ರಾಹಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ, ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 98,76,720 ರೂ. ಮೌಲ್ಯದ ಮಾದಕ ದ್ರವ್ಯ ಜಪ್ತು ಮಾಡಿ ನಾಶಪಡಿಸಲಾಗಿದೆ ಎಂದು ವಿವರಣೆ ನೀಡಿದರು.
ಮಾದಕ ವಸ್ತುಗಳ ಬಗ್ಗೆ ಈಗಾಗಲೇ ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆಯಿಂದ ಸಾಕಷ್ಟು ಕ್ರಮಗಳಾಗಿದ್ದು ಸಾಕಷ್ಟು ಪ್ರಕರಣ ದಾಖಲು ಮಾಡಲಾಗಿದೆ, ಡ್ರಗ್ ಪೆಡ್ಲರ್ಗಳ ಮೇಲೆ ದಾಳಿ ನಡೆಸಲಾಗುತ್ತಿದೆ, ಗಾಂಜಾ ಬೆಳೆಯುವವರ ಮೇಲೆ ನಿಗಾ ಇರಿಸಿ ಅವರನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದರು.
ಈಗಾಗಲೇ ಅನೇಕ ಶಾಲೆ ಕಾಲೇಜುಗಳು ಸೇರಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಸಂಘಟಿಸಲಾಗುತ್ತಿದ್ದು ಆಪರೇಷನ್ ರೈಸ್ ಹಾಗೂ ಮಾದಕ ವಸ್ತುಗಳು ಬೇಡ ಎನ್ನುವ ಸಂದೇಶದ ತಾತ್ಪರ್ಯಯುಳ್ಳ ‘ಬೇಡ ಬ್ರೋ’ ಎಂಬ ಅಭಿಯಾನ ವಿಜಯಪುರ ಸೇರಿ ಎಲ್ಲ ಕಡೆ ನಡೆಸಲಾಗುತ್ತಿದೆ. ಆಪರೇಷನ್ ರೈಸ್ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅವರೇ ಮಾದಕ ವಸ್ತುಗಳ ನಿರಾಕರಿಸುವುದು ಸೇರಿ ಹಲವು ಕಾರ್ಯಕ್ರಮ ಮಾಡಲಾಗುತ್ತಿದೆ. ಅಲ್ಲದೇ ಈ ಕಾರ್ಯಕ್ರಮಕ್ಕೆ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳ ಸಹಯೋಗದಲ್ಲಿ ನಡೆಸಲಾಗುತ್ತಿದೆ, ಬೇಡ ಬ್ರೋ ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ಅರ್ಥವಾಗುವ ಹಾಗೆ ಜನಸ್ನೇಹಿ, ಯುವ ಸ್ನೇಹಿ ಸಂದೇಶ ನೀಡಿ ಮಾದಕ ದ್ರವ್ಯಗಳಿಂದ ದೂರವಿರುವ ಸಂದೇಶ ಸಾರುವ ಕಾರ್ಯ ಮಾಡಲಾಗುತ್ತಿದೆ ಎಂದು ಸಂದೀಪ ಪಾಟೀಲ ವಿವರಿಸಿದರು.
ಎಸ್‌ಪಿ ಲಕ್ಷ್ಮಣ ನಿಂಬರಗಿ ಇದ್ದರು.

Spread the love

About Laxminews 24x7

Check Also

ಚಾಮುಂಡಿ ಬೆಟ್ಟದಲ್ಲಿ ಜು.17 ರಿಂದ ಆಷಾಢ ಮಾಸದ ಪೂಜೆ – ಸಿದ್ಧತೆ ಪರಿಶೀಲಿಸಿದ ಯತೀಂದ್ರ ಸಿದ್ದರಾಮಯ್ಯ

Spread the loveಮೈಸೂರು: ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಸಂಭ್ರಮ ಕಳೆಗಟ್ಟಿದೆ, ವಿವಿಧ ಕಾರ್ಯಕ್ರಮಗಳಿಗೆ ಭರದ ಸಿದ್ಧತೆ ನಡೆಯುತ್ತಿದ್ದು, ಹಬ್ಬದ ವಾತಾವರಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ