Breaking News

ಕಾರಿನಡಿ ಸಿಲುಕಿ ಮಗು ಸಾವು

Spread the love

ಖಾನಾಪುರ: ಕಾರು ಹಿಂತೆಗೆದುಕೊಳ್ಳುತ್ತಿದ್ದಾಗ ಕಾರಿನಡಿ ಸಿಲುಕಿ ಮಗು ಸಾವನ್ನಪ್ಪಿದ ಘಟನೆ ಖಾಅನಾಅಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ತನ್ವೀರ ಅಕ್ಬರ ಕಕ್ಕೇರಿ ಅವರ 19 ತಿಂಗಳ ಮಗು ತೌಹೀದ್ ಮೃತ ದುರ್ದೈವಿ. ತನ್ವೀರ ಅವರು ತಮ್ಮ ಮನೆಗೆ ದಿನಸಿ ತರುವಂತೆ ತಮ್ಮ ಸಹೋದರ ಮನ್ಸೂರ್ ಗೆ ಹೇಳಿದ್ದರಿಂದ ಆತ ಮನೆ ಮುಂದೆ‌ ನಿಲ್ಲಿಸಿದ್ದ ಸ್ವಿಫ್ಟ್ ಕಾರನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಮನೆಯ ಒಳಗಡೆಯಿಂದ ಅಂಬೆಗಾಲು ಹಾಕುತ್ತ ಹೊರಬಂದ ಮಗು ಕಾರಿನಡಿ ಸಿಲುಕಿ ಸಾಅವನ್ನಪ್ಪಿದೆ.

ಚಾಲಕ ಮಗುವಿನತ್ತ ಲಕ್ಷ್ಯ ಕೊಡದಿದ್ದರಿಂದ ಮಗುವಿನ ತಲೆಯ ಮೇಲೆ‌‌ ಕಾರಿನ ಚಕ್ರಗಳು ಹಾಯ್ದಿವೆ. ಘಟನೆಯಲ್ಲಿ ಗಾಯಗೊಂಡ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಮಗು ಮೃತಪಟ್ಟಿದೆ‌. ನಂದಗಡ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ