Breaking News

ಕ್ಯೂರಿಂಗ್ ಮಾಡುವಾಗ ವಿದ್ಯುತ್‌ ಶಾಕ್‌ – ಸ್ಥಳದಲ್ಲೇ ಆರ್‌ಎಫ್‌ಓ ಸಾವು

Spread the love

ಹಾಸನ: ಕ್ಯೂರಿಂಗ್ ಮಾಡುವಾಗ ವಿದ್ಯುತ್‌ ಶಾಕ್‌ನಿಂದ  ಅರಣ್ಯ ಇಲಾಖೆ  ಆರ್‌ಎಫ್‌ಓ ಸಾವನ್ನಪ್ಪಿರುವ ಘಟನೆ ಹಾಸನ  ನಗರದ ಸತ್ಯಮಂಗಲ ಬಡಾವಣೆಯಲ್ಲಿ ನಡೆದಿದೆ.

ಜಗದೀಶ್.ಪಿ (46) ಮೃತಪಟ್ಟ ಅರಣ್ಯಾಧಿಕಾರಿ.‌ ಕುಣಿಗಲ್‌ನಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಸತ್ಯಮಂಗಲ ಬಡಾವಣೆಯಲ್ಲಿ ನೂತನ ಮನೆ ನಿರ್ಮಿಸುತ್ತಿದ್ದರು. ಇಂದು (ಜೂ.21) ಮನೆಯ ಗೋಡೆಗೆ ನೀರು ಹಾಕುವಾಗ ವಿದ್ಯುತ್ ಶಾಕ್‌ನಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

2015 ರಿಂದ 2020 ರವರೆಗೆ ಹಾಸನ ಜಿಲ್ಲೆಯಲ್ಲಿ ಆರ್‌ಎಫ್‌ಓ ಆಗಿ ಕರ್ತವ್ಯ ನಿರ್ವಹಿಸಿದ್ದರು. ಜಗದೀಶ್.ಪಿ ಸಾವಿಗೆ ಅರಣ್ಯ‌ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Spread the love

About Laxminews 24x7

Check Also

ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ

Spread the love ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ – ಭಾವನೆಗಳಿಗೆ ಜೀವ ತುಂಬುವ ಶಕ್ತಿ ಸಂಗೀತಕ್ಕಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ