Breaking News

ಜೈಲಿನಿಂದಲೇ ಪತ್ನಿ ಕೊಲೆಗೆ ಸುಪಾರಿ – ಬುರ್ಖಾ ಧರಿಸಿ ಬಂದು ಧರ್ಮದೇಟು ತಿಂದ ಪತಿಯ ಸಹಚರರು

Spread the love

ಶಿವಮೊಗ್ಗ: ಬುರ್ಖಾ ಧರಿಸಿ ಮಹಿಳೆಯೊಬ್ಬಳ ಹತ್ಯೆಗೆ ಸಂಚು ರೂಪಿಸಿಕೊಂಡು ಬಂದಿದ್ದ ಮೂವರು ಯುವಕರನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶಿವಮೊಗ್ಗ ನಗರದ ಕೆ ಆರ್ ಪುರಂ ರಸ್ತೆಯಲ್ಲಿ ನಡೆದಿದೆ.

ಬೊಮ್ಮನಕಟ್ಟೆಯ ದರ್ಶನ್ (18), ಮಹೇಶ್ (20) ಮತ್ತು ಅಸ್ಲಾಂ (25) ಸಿಕ್ಕಿಬಿದ್ದ ಆರೋಪಿಗಳು. ರೌಡಿಶೀಟರ್ ಸಾತು ಪತ್ನಿ ತಬಸುಮ್ ಬಾನು ಕೊಲೆಗೆ ಆರೋಪಿಗಳು ಬಂದಿದ್ದರು. ತಬಸುಮ್ ಬಾನು ಮನೆಗೆ ನುಗ್ಗಿ, ಕೊಲೆಗೆ ಯತ್ನಿಸಿದ್ದರು. ಆಗ ಮಹಿಳೆ ಕೂಗಿದ್ದರಿಂದ ಪರಾರಿಯಾಗಲು ದುಷ್ಕರ್ಮಿಗಳು ಯತ್ನಿಸಿದ್ದರು. ಈ ವೇಳೆ ಸಾರ್ವಜನಿಕರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಶಿವಮೊಗ್ಗದ ಸೆಂಟ್ರಲ್ ಜೈಲಿನಲ್ಲಿರುವ ವಿಚಾರಣಾಧೀನ ಕೈದಿ ರೌಡಿಶೀಟರ್ ಸಾತು ಪ್ರಕರಣದ ಸೂತ್ರಧಾರನಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಜೈಲಿನಲ್ಲಿರುವ ತನ್ನನ್ನು ನೋಡಲು ಪತ್ನಿ ಬರುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದ ವ್ಯಕ್ತಿ, ಜೈಲಿನಿಂದಲೇ ಪತ್ನಿ ಕೊಲೆಗೆ ಸುಪಾರಿ ಕೊಟ್ಟು ಮಹಿಳೆಯ ಹತ್ಯೆ ಮಾಡುವಂತೆ ಕಳಿಸಿದ್ದ ಎಂಬುದು ಗೊತ್ತಾಗಿದೆ.

ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ