Breaking News

ಲವ್ವರ್‌ಗೆ ಮೆಸೆಜ್‌ ಮಾಡಿ ಕರೆಸಿ ಮಾರಣಾಂತಿಕ ಹಲ್ಲೆ – ಯುವತಿಯ ಪೋಷಕರ ವಿರುದ್ಧ ಎಫ್‌ಐಆರ್‌

Spread the love

ತುಮಕೂರು: ಕಾಲೇಜು ಯುವತಿಯನ್ನು ಪ್ರೀತಿಸುತ್ತಿದ್ದ ಪೌರ ಕಾರ್ಮಿಕ ಯುವಕನಿಗೆ ಯುವತಿಯ ಪೋಷಕರು ಮನಸೋ ಇಚ್ಛೆ ಥಳಿಸಿದ ಘಟನೆ ತುಮಕೂರಿನ ಕುಣಿಗಲ್‌ನಲ್ಲಿ ನಡೆದಿದೆ.

ಗುಬ್ಬಿ ಪಟ್ಟಣದ ನಿವಾಸಿ ಮೋಹಿತ್ ಥಳಿತಕ್ಕೊಳಗಾದ ಯುವಕ. ಕುಣಿಗಲ್ ಮೂಲದ ಕಾಲೇಜು ಯುವತಿ ಗುಬ್ಬಿ ಜಾತ್ರೆಗೆ ಬಂದಾಗ ಮೋಹಿತ್‌ನ ಪರಿಚಯ ಆಗಿತ್ತು. ಬಳಿಕ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಚಾಟಿಂಗ್‌ನಲ್ಲಿ ತೊಡಗಿದ್ದರು. ಇದು ಯುವತಿಯ ಮನೆಯವರಿಗೆ ಗೊತ್ತಾಗಿತ್ತು.

ಇದರಿಂದ ಸಿಟ್ಟಿಗೆದ್ದ ಯುವತಿಯ ಪೋಷಕರು ಮಗಳ ಮೊಬೈಲ್‌ನಿಂದ ಮೋಹಿತ್‌ಗೆ ಮೆಸೆಜ್ ಮಾಡಿ ಕುಣಿಗಲ್‌ನ ತೋಟಕ್ಕೆ ಬರುವಂತೆ ಕರೆಸಿಕೊಂಡಿದ್ದರು. ಬಳಿಕ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪರಿಣಾಮ ಯುವಕನ ಕಾಲು, ಸೊಂಟದ ಮೂಳೆ ಮುರಿತವಾಗಿದೆ.

ಗಾಯಗೊಂಡ ಯುವಕನಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯುವತಿ ಪೋಷಕರ ವಿರುದ್ಧ ಕುಣಿಗಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ