ದೇವನಹಳ್ಳಿ ತಾಲ್ಲೂಕಿನ ಸಬ್ ರಿಜಿಸ್ಟ್ರಾರ್ ಆದ ಶ್ರೀ ಪ್ರಸಾದ್ ಕುಮಾರ್ ರವರ ಅಣ್ಣ ಶಾಮಣ್ಣನವರ ಪುತ್ರ, ನಮ್ಮ ಐಬಸಾಪುರ ಗ್ರಾಮದ ನಿವಾಸಿ ಚಿ. ದೀಪಕ್ ಕುಮಾರ್ ಅವರು ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ಸುದ್ದಿ ತಿಳಿದು ತೀವ್ರ ಆಘಾತ ಮತ್ತು ಬೇಸರವಾಗಿದೆ.
ಇನ್ನೂ ಕೆಲವೇ ದಿನಗಳಲ್ಲಿ ವಿವಾಹ ನಿಶ್ಚಯವಾಗಿ, ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಬೇಕಾಗಿದ್ದ ಯುವಕನೊಬ್ಬ ಹೀಗೆ ವಿಧಿವಶನಾಗಿರುವುದು ಅತ್ಯಂತ ದುಃಖದ ಸಂಗತಿ. ಮಗನನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿರುವ ಕುಟುಂಬದವರು, ಈ ಕಠಿಣ ಪರಿಸ್ಥಿತಿಯಲ್ಲೂ ದೀಪಕ್ ಕುಮಾರ್ ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲಿಯೂ ಮಾನವೀಯತೆಯ ಸಾರ್ಥಕತೆಯನ್ನು ಮೆರೆದಿದ್ದಾರೆ. ಇವರ ಈ ನಿರ್ಧಾರ ಸಮಾಜಕ್ಕೆ ಅತ್ಯಂತ ಪ್ರೇರಣಾದಾಯಕ ಮತ್ತು ಗೌರವಾರ್ಹ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ಅಪಾರ ದುಃಖ ಮತ್ತು ಆಘಾತವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಸ್ಥರು, ಹಿತೈಷಿಗಳು ಹಾಗೂ ಸ್ನೇಹಿತರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Laxmi News 24×7