Breaking News

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ: 2.50 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ

Spread the love

ಚಿಕ್ಕೋಡಿ: ಗ್ರಾಮೀಣ ಭಾಗದ ಸಮಗ್ರ ಪ್ರಗತಿ ಮತ್ತು ಮೂಲಭೂತ ಸೌಕರ್ಯಗಳ ಬಲವರ್ಧನೆಗೆ ಮುಂಚೂಣಿ ಆದ್ಯತೆ ನೀಡಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಬುಧವಾರ ರಾಯಬಾಗ ಮತಕ್ಷೇತ್ರದಲ್ಲಿ ಮಹತ್ತರ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮೊರಬ ಗ್ರಾಮ ಸೇರಿದಂತೆ, ಕುಡಚಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ 2025-26ನೇ ಸಾಲಿನ ಎಸ್‌ಸಿಪಿ ಹಾಗೂ ಟಿಎಸ್ಪಿ ಯೋಜನೆಯಡಿ ಮಂಜೂರಾಗಿರುವ ಒಟ್ಟು ಅಂದಾಜು 2.50 ಕೋಟಿ ರೂ. ವೆಚ್ಚದ ವಿವಿಧ ಪ್ರಮುಖ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದರು ಶಾಸ್ತ್ರೋಕ್ತವಾಗಿ ಭೂಮಿ ಪೂಜೆ ನೆರವೇರಿಸಿದರು.

ಇದೇ ವೇಳೆ ಮಾತನಾಡಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು, “ಗ್ರಾಮೀಣ ಪ್ರದೇಶಗಳ ರಸ್ತೆ ಸಂಪರ್ಕ, ಚರಂಡಿ ವ್ಯವಸ್ಥೆ ಮತ್ತು ನೈರ್ಮಲ್ಯವನ್ನು ಸುಧಾರಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ದಲಿತ ಮತ್ತು ಹಿಂದುಳಿದ ವರ್ಗಗಳ ಕಾಲೋನಿಗಳ ಅಭಿವೃದ್ಧಿಗೆ ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದ್ದು, ಗುಣಮಟ್ಟದ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ,” ಎಂದು ತಿಳಿಸಿದರು.

2.50 ಕೋಟಿ ರೂ. ಅನುದಾನದಲ್ಲಿ ಕುಡಚಿ ಕ್ಷೇತ್ರದಾದ್ಯಂತ ಕೈಗೊಳ್ಳಲಿರುವ ಪ್ರಮುಖ ಕಾಮಗಾರಿಗಳ ಸಂಪೂರ್ಣ ವಿವರ ಇಲ್ಲಿದೆ: ಹಾರೂಗೇರಿ ಪಟ್ಟಣ ಪಟ್ಟಣದ ಪ್ರಮುಖ ಸಂಪರ್ಕ ರಸ್ತೆಗಳ ಸುಧಾರಣೆಗೆ ಒಟ್ಟು ₹30 ಲಕ್ಷ ವಿನಿಯೋಗಿಸಲಾಗುತ್ತಿದ್ದು, ತಲಾ ₹10 ಲಕ್ಷ ವೆಚ್ಚದಲ್ಲಿ ಮೂರು ಪ್ರತ್ಯೇಕ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಬಡಬ್ಯಾಕುಡ ರಸ್ತೆಯಿಂದ ವಿಠಲ ನಾಯ್ಕ ಅವರ ಮನೆವರೆಗೆ ಸಿಸಿ ರಸ್ತೆ ನಿರ್ಮಾಣ. ಕಿರಣ ಕಾಂಬಳೆ ಅವರ ಮನೆಯಿಂದ ಹಾರೂಗೇರಿ-ಮುಗಳಖೋಡ ರಸ್ತೆಯವರೆಗೆ ಸಿಸಿ ರಸ್ತೆ ನಿರ್ಮಾಣ. ರಾಜು ಲಗಳಿ ಅವರ ಮನೆಯಿಂದ ಹಾರೂಗೇರಿ-ಮುಗಳಖೋಡ ರಸ್ತೆಯವರೆಗೆ ಸಿಸಿ ರಸ್ತೆ ನಿರ್ಮಾಣ. ಮೊರಬ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಎಸ್‌ಸಿ ಕಾಲೋನಿಯಲ್ಲಿ ವ್ಯವಸ್ಥಿತ ಚರಂಡಿ ಹಾಗೂ ಸುಸಜ್ಜಿತ ಸಿಸಿ ರಸ್ತೆ ನಿರ್ಮಾಣ. ಕೋಳಿಗುಡ್ಡ ಗ್ರಾಮದಲ್ಲಿ 20 ಲಕ್ಷ ವೆಚ್ಚದಲ್ಲಿ ಎಸ್‌ಸಿ ಕಾಲೋನಿಯಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಹಾಗೂ ಪೇವರ್ ಬ್ಲಾಕ್ ಅಳವಡಿಕೆ. ಬನದಾಳ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಎಸ್‌ಸಿ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ. ಸವಸುದ್ದಿ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಎಸ್‌ಸಿ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು.

ಬಸ್ತವಾಡ ವಾಸೇಖಾನ ದೇವಸ್ಥಾನದಿಂದ ಖನದಾಳ-ಬಸ್ತವಾಡ ಮುಖ್ಯರಸ್ತೆಯವರೆಗೆ ಸಿಸಿ ರಸ್ತೆ. ಸಿದ್ದಾಪೂರ ಗಸ್ತಿ ತೋಟದ ಎಸ್‌ಸಿ ಕಾಲೋನಿಯಲ್ಲಿ ಸಿಸಿ ರಸ್ತೆ. ನಿಲಜಿ ಎಸ್‌ಸಿ ಸ್ಮಶಾನದಿಂದ ಮಚೇಂದ್ರ ಗಸ್ತಿ ಅವರ ಮನೆವರೆಗೆ ಸಿಸಿ ರಸ್ತೆ. ಬೆಕ್ಕೇರಿ ಎಸ್‌ಸಿ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ. ನಿಡಗುಂದಿ ವಾರ್ಡ್ ನಂ. 2ರ ಜೈ ಭೀಮ್ ನಗರದಲ್ಲಿ ಸಿಸಿ ರಸ್ತೆ. ಹಿಡಕಲ್ ಎಸ್‌ಸಿ ಕಾಲೋನಿಯ ಬಿದರಮಳಿ ತೋಟದಲ್ಲಿ ಸಿಸಿ ರಸ್ತೆ. ಕಪ್ಪಲಗುದ್ದಿ ಎಸ್‌ಸಿ ಕಾಲೋನಿಯಲ್ಲಿ ಸಿಸಿ ರಸ್ತೆ. ಮುಗಳಖೋಡ ಪಟ್ಟಣ ಗೋಳಸಂಗಿ ತೋಟದ ದಾಸರ ಕಾಲೋನಿಯಲ್ಲಿ ಸಿಸಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಮುಖ ರಾಜಕೀಯ ಮುಖಂಡರು, ವಿವಿಧ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ಗ್ರಾಮಸ್ಥರು ಉಪಸ್ಥಿತರಿದ್ದು, ಸಂಸದರಿಗೆ ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದರು.

ಈ ಸಂದರ್ಭದಲ್ಲಿಹಿರಿಯ ಮುಖಂಡ ಡಿ.ಎಸ್.ನಾಯಿಕ, ಸಂಜೀವಕುಮಾರ ಬಾನೆ, ನ್ಯಾಯವಾದಿ ರಾಜು ಶಿರಗಾಂವೆ, ಹಿಂದುಳಿದ ವರ್ಗಕಲ್ಯಾಣ ಇಲಾಖೆ ತಾಲೂಕಾಧಿಕಾರಿಕಲ್ಪನಾ ಕಾಂಬಳೆ, ಪಿಡಿಒರೂಪಾ ಸವದಿ,ಸಜ್ಜನರೋಹಿಲೆ, ಜಯದೇವ ಸನದಿ, ಸದಾಶಿವ ಗಡ್ಡೆ, ಶಂಬಾಜಿ ಶಿಂದೆ, ಉಮೇಶ್‍ಅಸೋದೆ, ಹನುಮಂತಅಸೋದೆ ಸೇರಿಅನೇಕರುಇದ್ದರು.


Spread the love

About Laxminews 24x7

Check Also

ಸಿಗರೇಟ್ ಸೇದಿರುವ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ – ಬಾಲಕನಿಂದ 120 ಗ್ರಾಂ ಚಿನ್ನ ಲೂಟಿ

Spread the loveಕೊಪ್ಪಳ: ಅಪ್ರಾಪ್ತ ಬಾಲಕನಿಗೆ ಸಿಗರೇಟ್ ಸೇದುವುದನ್ನು ಕಲಿಸಿ, ಅದರ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿ ಸುಮಾರು 120 ಗ್ರಾಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ