Breaking News

ಎಲ್ಲರೂ ಒಟ್ಟಿಗೇ ಹೋಗೋಣ, 2028ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರೋಣ: ಸಿಎಂ ಡಿಕೆಶಿ

Spread the love

ಬೆಂಗಳೂರು: ಪಕ್ಷಬೇಧ ಮರೆತು ಎಲ್ಲರನ್ನೂ ಒಟ್ಟಿಗೇ ಕರೆದುಕೊಂಡು ಹೋಗಿ. 2028ರ ವಿಧಾನಸಭೆ ಚುನಾವಣೆ  ಗೆಲ್ಲುವುದು ನಿಮ್ಮ ಗುರಿಯಾಗಿರಲಿ ಎಂದು ಸಿಎಂ ಡಿಕೆ ಶಿವಕುಮಾರ್   ತಿಳಿಸಿದ್ದಾರೆ.

‎ಮಾಜಿ ಶಾಸಕ ಮಂಜುನಾಥ್ ಹಾಗೂ ಮೈಸೂರು ಮುಖಂಡ, ವಕ್ತಾರ ಲಕ್ಷ್ಮಣ್ ಅವರ ನೇತೃತ್ವದಲ್ಲಿ ಹುಣಸೂರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕುಮಾರಪಾರ್ಕ್ ಸರ್ಕಾರಿ ಅತಿಥಿ ಗೃಹದಲ್ಲಿ ತಮ್ಮನ್ನು ಅಭಿನಂದಿಸಿದ ಸಂದರ್ಭದಲ್ಲಿ ಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು.

‎ಹಿಂದೆ ಆಗಿದ್ದು, ದ್ವೇಷ, ಅಸೂಯೆ, ಪ್ರತೀಕಾರ ಎಂಬುದನ್ನು ಮರೆಯಿರಿ. ಕೆಲವೊಮ್ಮೆ ತಪ್ಪು ಮಾಹಿತಿ, ಅಭಿಪ್ರಾಯಗಳಿಂದ ಯಡವಟ್ಟು ಆಗಿರಬಹುದು. ಆದರೆ ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಭವಿಷ್ಯದ ಗುರಿ ಮರೆಯಬೇಡಿ ಎಂದರು.

‎ಇವತ್ತು ಬಂದಿರುವ ಸಿಎಂ ಹುದ್ದೆ ನನ್ನದಲ್ಲ, ನಿಮ್ಮದು, ರಾಜ್ಯದ ಜನರದು. ನೀವು ಇಲ್ಲ ಅಂದ್ರೆ ನಾನು ಇಲ್ಲ. ನನಗೆ ಬಂದಿರುವ ಈ ಹುದ್ದೆ ಹಿಂದೆ ನಿಮ್ಮ ಪರಿಶ್ರಮ, ಪ್ರೀತಿ, ವಿಶ್ವಾಸ, ಹೋರಾಟ ಕೆಲಸ ಮಾಡಿದೆ. ನಿಮ್ಮ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ ಎಂದು ನುಡಿದರು.

‎ಈಗ ಯಾವುದೇ ಕಾರಣಕ್ಕೂ ಮೈ ಮರೆಯಬೇಡಿ. ಎಸ್‌ಐಆರ್ ಸಂಚಿಗೆ ನಿಮ್ಮ ಮತ ಬಲಿ ಆಗಲು ಬಿಡಬೇಡಿ. ಎಚ್ಚರಿಕೆಯಿಂದ ಇರಿ. ನಿಮ್ಮ ಮತಗಳನ್ನು ಕಾಪಾಡಿಕೊಳ್ಳಿ ಎಂದು ಹೇಳಿದರು.

‎ಪರಿಷತ್ ಚುನಾವಣೆಯಲ್ಲಿ ವಿನಯ್ ಕಾರ್ತಿಕ್ ಸ್ಪರ್ಧೆ, ಜೆಡಿಎಸ್ ಹೆಚ್ಚುವರಿ ಅಭ್ಯರ್ಥಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ಚದುರಂಗದ ಆಟ ಆಡುವಾಗ ಯಾರಾದರು ಯಾವ ರೀತಿ ಕಾಯಿ ನಡೆಸುತ್ತಾರೆ ಎಂದು ಹೇಳುತ್ತಾರೆಯೇ? ಯಾರು ಹೇಳುವುದಿಲ್ಲ ಎಂದರು.

‎ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ತಪ್ಪಿಸಿ ಬಿಜೆಪಿ ಅನ್ಯಾಯ ಮಾಡಿದೆ ಎಂದು ಸುರ್ಜೆವಾಲ ಅವರು ಟೀಕೆ ಮಾಡಿರುವ ಬಗ್ಗೆ ಮಾತನಾಡಿ, ನಾನು ಸದ್ಯಕ್ಕೆ ಏನು ಮಾತನಾಡುವುದಿಲ್ಲ. ಅವರು ಮಾತಾಡಿದ್ದಾರೆ. ಆದರೆ ನಾನು ಮಾತಾಡಲು ಹೋಗುವುದಿಲ್ಲ. ನಮ್ಮ ಪಕ್ಷದ ಚಿಂತನೆಯನ್ನು ನಾನು ಪಾಲನೆ ಮಾಡುತ್ತೇನೆ ಎಂದು ತಿಳಿಸಿದರು


Spread the love

About Laxminews 24x7

Check Also

ಈಜಲು ಹಳ್ಳಕ್ಕೆ ಇಳಿದ ಸಹೋದರರಿಬ್ಬರು ನೀರುಪಾಲು – ಪೋಷಕರ ಆಕ್ರಂದನ

Spread the love ‎ಬೆಳಗಾವಿ: ಈಜಲು  ಹಳ್ಳಕ್ಕೆ ಇಳಿದಿದ್ದ ಅಣ್ಣ- ತಮ್ಮ ಇಬ್ಬರೂ ನೀರುಪಾಲಾದ ಘಟನೆ ಮೂಡಲಗಿ  ತಾಲೂಕಿನ ಧರ್ಮಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ