Breaking News

ನನಗೆ ಕೊಟ್ಟಿರೋ ಖಾತೆ ಬಗ್ಗೆ ಅಸಮಾಧಾನ ಇಲ್ಲ: ಬೈರತಿ ಸುರೇಶ್

Spread the love

ಬೆಂಗಳೂರು: ಖಾತೆ ಬಗ್ಗೆ ನನಗೆ ಯಾವುದೇ ಅಸಮಾಧಾನ ಇಲ್ಲ. ನಾನು ಸಂತೋಷದಿಂದ ಕೆಲಸ ಮಾಡುತ್ತೇನೆ ಎಂದು ಸಚಿವ ಬೈರತಿ ಸುರೇಶ್  ತಿಳಿಸಿದ್ದಾರೆ.

‎ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್, ಸಿಎಂ ಡಿಕೆಶಿ, ಸಿದ್ದರಾಮಯ್ಯ ಆಶೀರ್ವಾದ ಮಾಡಿ ನನಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಸಮರ್ಥವಾಗಿ ನಿಭಾಯಿಸುವ ಶಕ್ತಿ ದೇವರು ಕೊಡುವ ವಿಶ್ವಾಸ ಇದೆ. ಹಿಂದೆ ನಗರಾಭಿವೃದ್ಧಿ ಇಲಾಖೆಯಲ್ಲಿ ಹೊಸ ಕಾರ್ಯಕ್ರಮ ಮಾಡಿ ಉತ್ತಮವಾಗಿ ಇಲಾಖೆ ನಡೆಸಿದ್ದೆ. ಇದೇ ರೀತಿ ಕೆಲಸ ಸಾರಿಗೆ ಇಲಾಖೆಯಲ್ಲಿ  ಮಾಡುತ್ತೇನೆ. ಹೈಕಮಾಂಡ್, ಕಾಂಗ್ರೆಸ್‌ಗೆ ಒಳ್ಳೆಯ ಹೆಸರು ತರುವ ಕೆಲಸ ಮಾಡುತ್ತೇನೆ ಎಂದರು.

‎ಜಮೀರ್‌ಗೆ ಮಂತ್ರಿ ಸ್ಥಾನ ಕೊಡುವ ವಿಚಾರವಾಗಿ ಮಾತನಾಡಿ, ಯಾರಿಗೆ ಮಂತ್ರಿ ಮಾಡಬೇಕು ಅಂತ ಹೈಕಮಾಂಡ್, ಸಿಎಂ ತೀರ್ಮಾನ ಮಾಡುತ್ತಾರೆ. ಎಲ್ಲರು ಕೂತು ಯಾರಿಗೆ ಮಂತ್ರಿ ಮಾಡಬೇಕು ಅಂತ ತೀರ್ಮಾನ ಮಾಡುತ್ತಾರೆ. ಶಾಸಕರು, ಮಾಜಿ ಮಂತ್ರಿಗಳು ಸಚಿವ ಸ್ಥಾನ ಕೇಳೋದು ತಪ್ಪಲ್ಲ. ಯಾರಿಗೆ ಕೊಡಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ನುಡಿದರು.


Spread the love

About Laxminews 24x7

Check Also

ಶಿವಮೊಗ್ಗದ ಲಾಡ್ಜ್‌ನಲ್ಲಿ ಕ್ರಷರ್ ಉದ್ಯಮಿ ಆತ್ಮಹತ್ಯೆ

Spread the loveಶಿವಮೊಗ್ಗ: ಕ್ರಷರ್ ಉದ್ಯಮಿಯೊಬ್ಬರು ನಗರದ ಲಾಡ್ಜ್‌ ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೋಪಾಳ ಬಡಾವಣೆಯ ನಿವಾಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ