Breaking News

ಕಾರಿನೊಳಗೆ ಉಸಿರುಗಟ್ಟಿ 3 ವರ್ಷದ ಮಗು ಸಾವು

Spread the love

ಕಲಬುರಗಿ: ಕಾರಿನಲ್ಲಿ  ಉಸಿರುಗಟ್ಟಿ ಮೂರು ವರ್ಷದ ಮಗು ಸಾವನಪ್ಪಿರುವ ಘಟನೆ, ಕಲಬುರಗಿ  ಜಿಲ್ಲೆಯ ಶಹಾಬಾದ್  ತಾಲೂಕಿನ ತೊನಸನಹಳ್ಳಿ (ಎಸ್) ಗ್ರಾಮದಲ್ಲಿ ನಡೆದಿದೆ.

ಕೊಟ್ಟುರೇಶ್ವರ ಎಂಬವರ ಮೂರು ವರ್ಷದ ಮಗು ಬಸವಪ್ರಭು ಮೃತ ದುರ್ದೈವಿ. ಮಗುವನ್ನ ಕರೆದುಕೊಂಡು ಶಾಲೆಗೆ ಕಾರಿನಲ್ಲಿ ಹೋಗಿದ್ದ ಪೋಷಕರು ಶಾಲೆ ಬಳಿ ಕಾರು ಪಾರ್ಕ್ ಮಾಡಿ ಲಾಕ್ ಮಾಡದೇ ಹೊಗಿದ್ದರು. ಈ ವೇಳೆ ಮಗು ಆಟವಾಡುತ್ತಾ ಕಾರಿನೊಳಗೆ ಹೋಗಿದೆ. ಈ ವೇಳೆ ಕಾರಿನ ಎಲ್ಲಾ ಡೋರ್‌ಗಳು ಲಾಕ್ ಆಗಿವೆ.

ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಗು ಎಲ್ಲಿ ಹೋಯಿತು ಅಂತ ಹುಡುಕಾಡಿದ್ದ ಪೋಷಕರು ಬಳಿಕ ಕಾರು ಓಪನ್ ಮಾಡಿದ್ದಾಗ ದುರಂತ ಬೆಳಕಿಗೆ ಬಂದಿದೆ. ಶಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

About Laxminews 24x7

Check Also

5 ಲಕ್ಷ ಜನರಿಗೆ ಉದ್ಯೋಗ, 1.5 ಕೋಟಿ ಮಾನವ ದಿನ ಸೃಷ್ಟಿಗೆ ಅವಕಾಶ: ಈಶ್ವರ್‌ ಖಂಡ್ರೆ

Spread the loveಬೆಂಗಳೂರು: ಜುಲೈ 1ರಿಂದ ಜಾರಿಗೆ ತರಲಾಗಿರುವ ಮನ್ರೇಗಾದ  ಬದಲಾದ ರೂಪ ವಿಬಿಜಿ ರಾಮ್ ಜಿ ಅಡಿಯಲ್ಲಿ  ಪ್ರತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ