ಬೆಂಗಳೂರು: ನಾನು ರಾಜಕಾರಣಕ್ಕೆ ಮರಳಲು ಕಾಲ ಕೂಡಿಬರಬೇಕು ಎಂದು ನಟಿ ರಮ್ಯಾ ತಿಳಿಸಿದ್ದಾರೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಇಂದು ಗದ್ದುಗೆಗೇರುತ್ತಿದ್ದು, ಅವರ ಜೊತೆಗೆ ಒಟ್ಟು 13 ಮಂದಿ ಶಾಸಕರು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ಗಣ್ಯರು, ಸೆಲಬ್ರಿಟಿಗಳ ದಂಡೇ ಆಗಮಿಸಿದೆ.
ನಟಿ ರಮ್ಯಾ ಕೂಡ ಡಿಕೆ ಶಿವಕುಮಾರ್ ಅವರ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದಾರೆ. ಈ ವೇಳೆ ತಮ್ಮ ಮುಂದಿನ ರಾಜಕೀಯ ನಡೆ ಕುರಿತು ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ್ದಾರೆ.
ನಾನೀಗ ಬಂದಿರೋದು ಡಿಕೆ ಶಿವಕುಮಾರ್ ಅವರ ಫ್ಯಾಮಿಲಿಗೋಸ್ಕರ. ಇಷ್ಟು ವರ್ಷ ಕಷ್ಟಪಟ್ಟಿರುವುದರ ಫಲ ಅವರಿಗೆ ಸಿಕ್ಕಿದೆ. ಅದನ್ನ ನೋಡಿ ಸೆಲಬ್ರೇಟ್ ಮಾಡೋಕೆ ಬಂದಿದ್ದೇನೆ. ನಾನು ರಾಜಕಾರಣಕ್ಕೆ ಮರಳಲು ಕಾಲ ಕೂಡಿಬರಬೇಕು. ಎಲ್ಲದಕ್ಕೂ ಸಮಯ ಬೇಕಲ್ಲ ಅಂದಿದ್ದಾರೆ.
ಇನ್ನೂ ಡಿಕೆಶಿ ಪದಗ್ರಹಣ ವಿಚಾರ ಕುರಿತು ಮಾತನಾಡಿ, ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡ್ತಿರೋದು ಖುಷಿ ಆಗ್ತಿದೆ. ಬಹಳ ವರ್ಷದಿಂದ ಅವರು ಪಟ್ಟ ಕಷ್ಟಕ್ಕೆ ಫಲ ಸಿಕ್ಕಿದೆ ಎಂದು ಶ್ಲಾಘಿಸಿದ್ದಾರೆ.
Laxmi News 24×7