Breaking News

ಬಾಂಗ್ಲಾ ವಲಸಿಗರು ಎಂಬ ಶಂಕೆ: ತನಿಖೆ ನಡೆಸಿ 20 ಜನರನ್ನು ಬಿಟ್ಟು ಕಳುಹಿಸಿದ ಬೆಳಗಾವಿ ಪೊಲೀಸರು

Spread the love

ಬೆಳಗಾವಿ: ಬೆಳಗಾವಿ ನಗರದಲ್ಲಿ ಬಾಂಗ್ಲಾ ಅಕ್ರಮ ನಿವಾಸಿಗಳು ಬಂದಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು 20 ಜನರ ವಿಚಾರಣೆ ನಡೆಸಿದ್ದಾರೆ.

ಹುಬ್ಬಳ್ಳಿಯ ಮಾರ್ಗವಾಗಿ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ ಎಂಬ ಮಾಹಿತಿ ಮೇರೆಗೆ 20 ಜನರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ.

ಕಾರ್ಮಿಕರು ತಾವು ಬಾಂಗ್ಲಾದೇಶದವರಲ್ಲ ಎಂದು ಸ್ಪಷ್ಟಪಡಿಸಿದ್ದು, ಭಾರತದ ಪಶ್ಚಿಮ ಬಂಗಾಳದ ನಿವಾಸಿಗಳಾಗಿದ್ದು ಇಲ್ಲಿನ ಶಹಾಪುರದಲ್ಲಿ ಚಿನ್ನದ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಚುನಾವಣೆ ಮುಗಿಸಿ ಮರಳುತ್ತಿದ್ದ ಈ ಗುಂಪಿನ ಗುರುತಿನ ಚೀಟಿ, ಮೊಬೈಲ್ ಮತ್ತು ಮತದಾನದ ದಾಖಲೆಗಳನ್ನು ಡಿಸಿಸಿಬಿ ನಾರಾಯಣ ಭರಮನಿ ಅವರ ಸಮ್ಮುಖದಲ್ಲಿ ಕೂಲಂಕಷವಾಗಿ ಪರಿಶೀಲಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಇವೆಲ್ಲವೂ ನೈಜವಾಗಿ ಕಂಡಿದ್ದರಿಂದ ಸುಮಾರು 20ಕ್ಕೂ ಹೆಚ್ಚು ಕಾರ್ಮಿಕರ ಹೆಬ್ಬೆರಳ ಗುರುತುಗಳನ್ನು ಸಂಗ್ರಹಿಸಿ, ಆ ಬಳಿಕ ಅವರನ್ನು ಸ್ವಸ್ಥಾನಕ್ಕೆ ಕಳುಹಿಸಲಾಗಿದೆ. ಆದರೆ ಆಂತರಿಕವಾಗಿ ತಾಂತ್ರಿಕ ತನಿಖೆ ಇನ್ನೂ ಜಾರಿಯಲ್ಲಿದೆ.


Spread the love

About Laxminews 24x7

Check Also

ಬಾದಾಮಿ ಅಗಸ್ತ್ಯ ಹೊಂಡದಲ್ಲಿ ಈಜಲು ಹೋದ ಯುವಕ ನಾಪತ್ತೆ

Spread the loveಬಾಗಲಕೋಟೆ: ಜಿಲ್ಲೆಯ ಬಾದಾಮಿ ಪಟ್ಟಣದ ಐತಿಹಾಸಿಕ ಅಗಸ್ತ್ಯ ಹೊಂಡದಲ್ಲಿ ಈಜಲು ಹೋಗಿ 19 ವರ್ಷದ ಯುವಕ ನಾಪತ್ತೆಯಾಗಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ