Breaking News

ಬಕ್ರೀದ್ ಸಂದರ್ಭದಲ್ಲಿ ಗೋ ಹತ್ಯೆ ತಡೆಯುವಂತೆ ಕಮಿಷನರ್ ಗೆ ಮನವಿ

Spread the love

ಮೇ 28ರಂದು ಬಕ್ರೀದ್ ಹಬ್ಬವಿದ್ದು ಅಂದು ಬೆಳಗಾವಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೋ ಹತ್ಯೆ ನಡೆಯುವ ಸಾಧ್ಯತೆ ಇದೆ. ಬೆಳಗಾವಿಯ ಕಂಜರಗಲ್ಲಿ, ಕ್ಯಾಂಪ್ ,ಕಸಾಯಿಗಲ್ಲಿ ಮುಂತಾದ ಕಡೆ ಇವು ಹೆಚ್ಚಾಗಿ ನಡೆಯುತ್ತದೆ. 33 ಕೋಟಿ ದೇವತೆಗಳಿವೆ ಎಂದು ನಂಬಿ ನಾವು ಗೋಮಾತೆಯನ್ನು ಪೂಜಿಸುತ್ತೇವೆ .ಭಾರತವು ಗೋ ಆಧಾರಿತ ಕೃಷಿ ದೇಶವಾಗಿದ್ದು ಗೋ ಹತ್ಯೆಯನ್ನು ತಡೆಯುವುದು ತಡೆಯುವುದು ನಮ್ಮ ಎಲ್ಲರ ಕರ್ತವ್ಯ ಆಗಿದೆ.

ಸುಪ್ರೀಮ್ ಕೋರ್ಟಿನ ಆದೇಶ ಸಹಿತ ಇದೆ. ತಮ್ಮ ಸರಹದ್ದಿನಲ್ಲಿ ಬರುವ ಈ ಎಲ್ಲ ಪ್ರದೇಶದಲ್ಲಿ ವಿಶೇಷ ನಿಗಾವಹಿಸಿ ಗೋ ಹತ್ಯೆಯನ್ನು ತಡೆಯಬೇಕೆಂದು ಹಿಂದೂ ಸಮಾಜದ ಆಗ್ರಹವಾಗಿದೆ .ಗೋ ಭಕ್ತರು ಸಮಗ್ರ ಬೆಳಗಾವಿ ನಾಗರಿಕರ ಪರವಾಗಿ ತಮಗೆ ಗೋ ಹತ್ಯೆಯನ್ನು ತಡೆಯುವಂತೆ ಕಾನೂನಾತ್ಮಕ ಕ್ರಮವನ್ನು ಕೈಕೊಳ್ಳುವಂತೆ ಒತ್ತಾಯಿಸುವುದಾಗಿ ಬೆಳಗಾವಿ ನಗರ ಪೊಲಿಸ್ ಕಮಿಷನರ್ ಭೂಷಣ್ ಭೋರಸೆ ಅವರಿಗೆ ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಈ ವೇಳೆ ಮುನಿಸ್ವಾಮಿ ಭಂಡಾರಿ,ಡಾ ಸುಭಾಷ ಪಾಟೀಲ,ಸಂದೀಪ ಓವಳಕರ,ನೇತ್ರಾವತಿ ಭಾಗವತ್,ವಿಜಯ ಜಾಧವ,ಆನಂದ ಕರಲಿಂಗಣ್ಣವರ, ಮಗನ್ ಭಾಯಿ ಪಾಟೀಲ,ಡಾ ಬಸವರಾಜ ರೇವಣ್ಣ ಮುಂತಾವರು ಉಪಸ್ಥಿತರಿದ್ದರು


Spread the love

About Laxminews 24x7

Check Also

3 ಲಕ್ಷದವರೆಗೆ ಆದಾಯ ಮಿತಿ ಹೆಚ್ಚಳ – ಸಿಎಂ ಜೊತೆ ಚರ್ಚಿಸಿ ತೀರ್ಮಾನ ಎಂದ ಸಚಿವ ಮುನಿಯಪ್ಪ

Spread the loveಬೆಂಗಳೂರು: ಬಿಪಿಎಲ್  ಕಾರ್ಡ್‌ಗೆ ನಿಗದಿಪಡಿಸಿರುವ ವಾರ್ಷಿಕ ಆದಾಯ ಮಿತಿಯನ್ನು 3 ಲಕ್ಷ ರೂ.ವರೆಗೆ ಹೆಚ್ಚಿಸುವ ಬಗ್ಗೆ ಸರ್ಕಾರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ