Breaking News

ವಿಮಾನ ಟಿಕೆಟ್ ಬುಕ್ಕಿಂಗ್ ಶುಲ್ಕ ದುಪ್ಪಟ್ಟು – ತನಿಖೆಗೆ ಜೋಶಿ ಆದೇಶ

Spread the love

ನವದೆಹಲಿ: ವಿಮಾನ ಪ್ರಯಾಣಿಕರಿಗೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವೇದಿಕೆಗಳು ದುಪ್ಪಟ್ಟು ಶುಲ್ಕ ವಿಧಿಸುತ್ತಿದ್ದು, ತಕ್ಷಣವೇ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು CCPA (ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ) ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವೇದಿಕೆಗಳು ವಿಮಾನಯಾನ ಸಂಸ್ಥೆಗಳು ವಿಧಿಸುವುದಕ್ಕಿಂತ ದುಪ್ಪಟ್ಟು ಶುಲ್ಕ ಸುಲಿಗೆ ಮಾಡುತ್ತಿರುವುದನ್ನು ಗ್ರಾಹಕರೊಬ್ಬರು ಬಯಲಿಗೆಳೆದಿದ್ದಾರೆ. ಇದನ್ನು ಗಮನಿಸಿದ ಸಚಿವರು ತನಿಖೆ ನಡೆಸಿ ವಂಚನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವೇದಿಕೆಗಳು ವಿಮಾನ ಪ್ರಯಾಣಿಕರಿಗೆ ಟಿಕೆಟ್ ಬುಕ್ಕಿಂಗ್ ಅಥವಾ ರದ್ದುಪಡಿಸುವಾಗ ವಿಮಾನಯಾನ ಸಂಸ್ಥೆಗಳು ವಿಧಿಸುತ್ತಿದ್ದ ಶುಲ್ಕಕ್ಕಿಂತ 15ಪಟ್ಟು ಹೆಚ್ಚಿನ ಶುಲ್ಕ ಹೇರುತ್ತಿರುವುದು ಕಂಡುಬಂದಿದೆ. ಹೀಗಾಗಿ ಟಿಕೆಟ್ ಬುಕ್ಕಿಂಗ್ ಮತ್ತು ರದ್ದತಿ ವೇಳೆ ಮಿತಿ ಮೀರಿ ಅತಿಯಾದ ಶುಲ್ಕ ವಿಧಿಸುತ್ತಿವೆಯೇ? ಎಂಬುದನ್ನು ತನಿಖೆ ನಡೆಸಿ ಮತ್ತು ವ್ಯಾಪಕವಾಗಿ ಅದು ಕಂಡುಬಂದರೆ ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ.

ತೆಜಿಂದರ್ ಪಾಲ್ ಸಿಂಗ್ ಬಗ್ಗಾ ಎಂಬುವರು ಆಗೋಡಾ ಆನ್‌ಲೈನ್ ವೇದಿಕೆ ಮೂಲಕ ಮುಂಬೈ ಟಿಕೆಟ್ ಬುಕ್ ಮಾಡುವಾಗ ಆಕಸ್ಮಿಕವಾಗಿ ಮುಂಬೈ ಬದಲು “ನವಿ ಮುಂಬೈ” ಆಯ್ಕೆ ಮಾಡಿದ್ದರು. ಇದನ್ನು ರದ್ದುಪಡಿಸಲು ಆಗೋಡಾ ಬರೋಬ್ಬರಿ 4,764 ರೂ. ರದ್ದತಿ ಶುಲ್ಕ ಮತ್ತು ಕೇವಲ 1,571 ರೂ. ಮರುಪಾವತಿ ತೋರಿಸಿದೆ. ಹೀಗಾಗಿ ಈ ಗ್ರಾಹಕರು ಬಳಿಕ ಅಕಾಸಾ ಏರ್‌ನಲ್ಲಿ ನೇರವಾಗಿ ರದ್ದತಿ ಶುಲ್ಕದ ಪರಿಶೀಲನೆ ನಡೆಸಿದ್ದಾರೆ. ಆಗ ಕೇವಲ 299 ರೂ. ರದ್ದತಿ ಶುಲ್ಕ ವಿಧಿಸಿ, 6,076 ರೂ. ಮರುಪಾವತಿ ತೋರಿಸಿದೆ. ಆದರೆ ಅಗೋಡಾ 15ಪಟ್ಟು ಹೆಚ್ಚಿನ ಅಂದರೆ 4,764 ರೂ. ರದ್ದತಿ ಶುಲ್ಕ ಸುಲಿಗೆ ಮಾಡಿರುವುದು ಬಯಲಾಗಿದೆ.

ಹೀಗಾಗಿ ತೆಜಿಂದರ್ ಪಾಲ್ ಸಿಂಗ್ ಬಗ್ಗಾ, ವಿಮಾನಯಾನ ಸಂಸ್ಥೆ ಕೇವಲ 299ರೂ. ಕಡಿತಗೊಳಿಸುತ್ತಿದ್ದರೆ, ಅಗೋಡಾ ಏಕೆ 4,764 ರೂ. ವಿಧಿಸುತ್ತಿದೆ? ಯಾವುದಕ್ಕೆ ಈ ಹೆಚ್ಚುವರಿ ಶುಲ್ಕ? ಇದು ಸಂಪೂರ್ಣ ಅನೈತಿಕವೆಂದು ಗ್ರಾಹಕ ಇಲಾಖೆ ಗಮನ ಸೆಳೆದಿದ್ದರು


Spread the love

About Laxminews 24x7

Check Also

3 ಲಕ್ಷದವರೆಗೆ ಆದಾಯ ಮಿತಿ ಹೆಚ್ಚಳ – ಸಿಎಂ ಜೊತೆ ಚರ್ಚಿಸಿ ತೀರ್ಮಾನ ಎಂದ ಸಚಿವ ಮುನಿಯಪ್ಪ

Spread the loveಬೆಂಗಳೂರು: ಬಿಪಿಎಲ್  ಕಾರ್ಡ್‌ಗೆ ನಿಗದಿಪಡಿಸಿರುವ ವಾರ್ಷಿಕ ಆದಾಯ ಮಿತಿಯನ್ನು 3 ಲಕ್ಷ ರೂ.ವರೆಗೆ ಹೆಚ್ಚಿಸುವ ಬಗ್ಗೆ ಸರ್ಕಾರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ