ಬೆಂಗಳೂರು: ಎಲ್ಲಾ ಹೊರೆಯನ್ನು ಜನರ ಮೇಲೆ ಹಾಕುತ್ತಿದ್ದರೆ ಮೋದಿ ಯಾವಾಗ ಜವಾಬ್ದಾರಿ ತೆಗೆದುಕೊಳ್ತಾರೆ ಅಂತ ಕೇಂದ್ರ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 10 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ 5 ರೂ. ಹೆಚ್ಚಿಸಿರುವ ಕೇಂದ್ರದ ನಡೆಯನ್ನು ತೀವ್ರವಾಗಿ ಖಂಡಿಸಿದರು.
ಬೆಲೆ ಏರಿಕೆಗೆ ಉತ್ತರ ನೀಡಬೇಕಾದವರು ಕೇಂದ್ರ ಸರ್ಕಾರ. ಉಳಿದ ಎಲ್ಲ ಕಡೆ ಬಿಜೆಪಿ ನಾಯಕರು ಮಾತನಾಡ್ತಾರೆ ಇದಕ್ಕೆ ಯಾಕೆ ಯಾರು ಮಾತನಾಡುತ್ತಿಲ್ಲ? ಮೊನ್ನೆ ಯಾವುದೇ ರೀತಿ ತೊಂದರೆ ಆಗಿಲ್ಲ ಅಂದ್ರು ರಷ್ಯಾದಿಂದ ಬಹಳ ಕಡಿಮೆ ಬೆಲೆಯಲ್ಲಿ ತೈಲ ತಗೊಂಡ್ವಿ ಅಂದ್ರು, ಮೋದಿ ಅವರು ಇರೋ ಬರೋ ದೇಶವೆಲ್ಲ ಸುತ್ತಿದ್ದಾರೆ. ಹಾಗದರೆ ದೇಶಕ್ಕೆ ಒಳ್ಳೆದಾಗಿದೆ ಅಂತಾ ಯಾಕೆ ಹೇಳಿದ್ರು? ಇದಕ್ಕೆಲ್ಲಾ ಯಾರು ಕಾರಣ? ಅಂತ ಪ್ರಶ್ನಿಸಿದರು.
ವಾರಕ್ಕೆ ಮೂರು ಮೂರು ಬಾರಿ ಬೆಲೆ ಏರಿಕೆ ಮಾಡ್ತಾರೆ. ಯಾವ ರೀತಿ ಇವರ ನೀತಿಗಳು ವಿಫಲ ಆಗಿವೆ ಅಂತ ಎಲ್ಲರಿಗೂ ಗೊತ್ತಾಗಿದೆ. ಬೆಲೆ ಏರಿಕೆಯಿಂದ ತರಕಾರಿ ಬೆಲೆ ಜಾಸ್ತಿ ಆಗ್ತಿದೆ. ಆರ್ಥಿಕತೆ ಸಂಪೂರ್ಣ ಕುಸಿದಿದೆ. ನಮ್ಮ ಸರ್ಕಾರ ಇದ್ದಾಗ ಯುದ್ದಗಳು ಆಗಿಲ್ಲವಾ? ಈ ಪ್ರಶ್ನೆ ಮೊದಲು ಮೋಹನ್ ಭಗವತ್ ಅವರಿಗೆ ಕೇಳಬೇಕು ಎಂದು ಕುಟುಕಿದರು.
ಇಡೀ ವಿಶ್ವ ಮೋದಿ ಕಡೆ ನೋಡ್ತಿದೆ ಅಂತಿದ್ರು, ಈಗ ಅವರೆಲ್ಲ ಎಲ್ಲಿದ್ದಾರೆ? ನಿಮ್ಮ ಉಪದೇಶ ಎಲ್ಲಿದೆ ಹೇಳಿ. ಮೋದಿ, ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡಿದ್ರೆ ಸಾಕು ಮೈಮೇಲೆ ಬರ್ತಾರೆ ಮೆಟ್ರೋ ಬೆಲೆ ಜಾಸ್ತಿ ಆದಾಗ ಸೂಟ್ ಹಾಕಿಕೊಂಡು ಬರ್ತಾರೆ. ಈಗ ಅವರು ಎಲ್ಲಿ ಹೋದ್ರು? ಇನ್ನೆಷ್ಟು ತೆರಿಗೆ ಕನ್ನಡಿಗರ ಮೇಲೆ ಹಾಕ್ತೀರಾ? ತೆರಿಗೆ ಸಂಗ್ರಹದಲ್ಲಿ ನಾವು ಮೊದಲು ಇದ್ದೇವೆ ಮೊದಲು ಕೇಂದ್ರದವರಿಗೆ ಹೇಳಿ ಅಚ್ಚೇ ದಿನ್ ಅಂತಾರೆ ಅಲ್ವ ಅವರು ಕಡಿಮೆ ಮಾಡಲಿ ಎಂದು ಆಗ್ರಹಿಸಿದರು.
ಕೆಂಪು ಕೋಟೆಯಿಂದ ಮೋದಿ ಉಪದೇಶ ಮಾಡ್ತಾರೆ ಅಲ್ವ, ಹಾಗಾದರೆ ಮೊದಲು ತೆರಿಗೆ ವಿನಾಯಿತಿ ಮೊದಲು ಗುಜರಾತ್ ನಿಂದ ಶುರು ಮಾಡಲಿ. ರೂಪಾಯಿ ಮೌಲ್ಯ ಕುಸಿತಾ ಇದೆ, ಯೂರಿಯಾ ಕೊರತೆ ಎದುರಾಗಿದೆ ಕಳೆದ ಒಂದು ವರ್ಷದಿಂದ ಒಂದೇ ಒಂದು ವಿದೇಶಿ ಹೂಡಿಕೆ ಬಂದಿಲ್ಲ. ಒಂದೇ ಒಂದು ಕಾಮೆಂಟ್ ನಿಂದ ಕ್ರಾಕೋಚ್ ಜನತಾ ಪಾರ್ಟಿ ಬಂದಿದೆ. ರಾಜ್ಯ ಸರ್ಕಾರ ತೈಲ ಬೆಲೆ ತೆರಿಗೆ ಯಾಕೆ ಕಡಿಮೆ ಮಾಡಬೇಕು? ದರ ಏರಿಕೆ ಮಾಡಿದ್ದು ಅವರು ತೆರಿಗೆ ಕಡಿಮೆ ಮಾಡಬೇಕಾಗಿರುವುದು ನಾವಾ? ಅತ್ಯಂತ ಹೆಚ್ಚಿನ ಮಟ್ಟದ ತೆರಿಗೆಯನ್ನು ಕರ್ನಾಟಕದಿಂದಲೇ ಸಂಗ್ರಹ ಮಾಡಲಾಗುತ್ತಿದೆ. ತೆರಿಗೆಯಲ್ಲಿ ವಿನಾಯಿತಿ ನೀಡುವುದಿದ್ದರೆ ಬಿಜೆಪಿ ಆಡಳಿತ ರಾಜ್ಯಗಳಿಂದಲೇ ಆರಂಭವಾಗಲಿ ಗುಜರಾತ್ ಮಹಾರಾಷ್ಟ್ರ ಸೇರಿದಂತೆ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಿಂದ ತೆರಿಗೆ ವಿನಾಯಿತಿ ನೀಡಲಿ ಎಂದು ಒತ್ತಾಯಿಸಿದರು.
ಇದೇ ವೇಳೆ ಎಸ್‌ಐಆರ್ ಕುರಿತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿರುವ ವಿಚಾರವಾಗಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರದವರು SIR (ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ) ಅನ್ನು ಒಂದು ಆಯುಧವಾಗಿ ಬಳಕೆ ಮಾಡಿಕೊಳ್ತಿದ್ದಾರೆ. ಸಿಬಿಐ, ಇಡಿ, ಐಟಿ, ಎಲೆಕ್ಷನ್ ಕಮಿಷನ್ ಇವರನ್ನ ತೆಗೆದುಬಿಟ್ಟರೆ ಬಿಜೆಪಿ ಒಂದು ಪ್ರಾದೇಶಿಕ ಪಕ್ಷಕ್ಕಿಂತ ಕಡೆಯಾಗಿ ಸೋಲುತ್ತೆ. ನಾವು ಪತ್ರ ಬರೆದಿದ್ವಿ ಅಲ್ವಾ? ಎಲೆಕ್ಷನ್ ಕಮಿಷನ್‌ಗೆ ಯಾಕೆ ಉತ್ತರ ನೀಡಿಲ್ಲ. ಬಿಜೆಪಿಯವರು ಕೇಂದ್ರ ಚುನಾವಣಾ ಆಯೋಗದ ಆಯುಕ್ತರನ್ನ ಜೀತದಾಳಿನಂತೆ ದುಡಿಸಿಕೊಳ್ತಿದ್ದಾರೆ. ಜ್ಞಾನೇಶ್ ಕುಮಾರ್ ಅವರು ಅಧಿಕೃತವಾಗಿ ಗಣವೇಷ ಹಾಕಿಕೊಂಡು ಹೋಗುವುದೊಂದು ಬಾಕಿಯಿದೆ ಎಂದಿದ್ದಾರೆ.
Laxmi News 24×7