Breaking News

ಏರ್‌ಮೆನ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳ ಗ್ರಂಥಾಲಯ ಭೇಟಿ

Spread the love

ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯಕ್ಕೆ  ಸಾಂಬ್ರಾದ ಏರ್‌ಮೆನ್ ತರಬೇತಿ ಶಾಲೆಯ ತಾಂತ್ರಿಕೇತರ ವಿದೇಶಿ ಪ್ರಶಿಕ್ಷಣಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಶೈಕ್ಷಣಿಕ ಭೇಟಿ ನೀಡಿದರು.
ಗ್ರಂಥಾಲಯ ಇಲಾಖೆ ಉಪನಿರ್ದೇಶಲ ರಾಮಯ್ಯ, ಪ್ರಶಿಕ್ಷಣಾರ್ತಿಗಳ ತಂಡಕ್ಕೆ ಆಡಳಿತಾತ್ಮಕ ವಿಷಯಗಳ ಕುರಿತು ಹಾಗೂ ಸಹಾಯಕ ಗ್ರಂಥಪಾಲಕ ಪ್ರಕಾಶ ಇಂಚಲಕರಂಜಿ ಮತ್ತು ಮೇಲ್ವಿಚಾರಕಿ ಸರಸ್ವತಿ, ವಿವಿಧ ವಿಭಾಗಗಳ ಕಾರ್ಯನಿರ್ವಹಣೆ, ಗ್ರಂಥಾಲಯ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಏರ್‌ಮೆನ್ ತರಬೇತಿ ಶಾಲೆಯ ಸಾರ್ಜೆಂಟ್‌ರಾದ ಆಶಿಷಚಂದ್ರ, ಅಮಿತಕುಮಾರ, ನಂದನ ಶರ್ಮಾ ಹಾಗೂ ಶ್ರೀಲಂಕಾ, ಕೀನ್ಯಾ,ಫಿಲಿಪೈನ್ಸ್ ದೇಶಗಳ ಪ್ರಶಿಕ್ಷಣಾರ್ಥಿಗಳು, ಗ್ರಂಥಾಲಯ ಕಾರ್ಯನಿರ್ವಹಣೆ ಮತ್ತು ಸಾರ್ವಜನಿಕ ಸೇವೆಗಳ ಬಗ್ಗೆ ಮಾಹಿತಿ ತಿಳಿದುಕೊಂಡು, ಮಕ್ಕಳ ವಿಭಾಗ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಬಳಿಕ ರವೀಂದ್ರ ಕೌಶಿಕ ಇ-ಗ್ರಂಥಾಲಯಕ್ಕೂ ಭೇಟಿ ನೀಡಿದರು.
ನಗರ ಕೇಂದ್ರ ಗ್ರಂಥಾಲಯದ ಸಿಬ್ಬಂದಿ ಎಸ್.ಎಸ್.ಸೀಮಿಮಠ, ಸುಮಿತ ಕಾವಳೆ, ಅಂಬೇಕರ, ಆನಂದ ಮುತಗಿ, ಸುನಿಲಕುಮಾರ, ಎನ್.ವೈ.ಪಾಟೀಲ, ರಾಜು ಕಟ್ಟಿಮನಿ, ಲಕ್ಷ್ಮೀ, ರಾಜಶ್ರೀ ಇತರರಿದ್ದರು.

ಲೇಖಕರ ಬಗ್ಗೆ


Spread the love

About Laxminews 24x7

Check Also

ಕುಡಿಯುವ ನೀರಿಗಾಗಿ 224 ಕೋಟಿ ಅನುದಾನ ಬಿಡುಗಡೆ – ಈಶ್ವರ್ ಖಂಡ್ರೆ

Spread the loveಬೆಂಗಳೂರು: ಕುಡಿಯುವ ನೀರಿಗಾಗಿ 224 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ