Breaking News

ಬೆಳಗಾವಿಯಲ್ಲಿ ಭೂ ದಾಖಲೆಗಳ ಪ್ರಾಯೋಗಿಕ ಕೃಪಿಡಿ ಕೃತಿ ಬಿಡುಗಡೆ

Spread the love

ಬೆಳಗಾವಿ : ಬೆಳಗಾವಿ ವಿಭಾಗದ ಮಾಜಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ, ಭೂ ದಾಖಲೆಗಳ ಪಾದೇಶಿಕ ಜಂಟಿ ನಿರ್ದೇಶಕಿ ಡಾ.ನಜ್ಮಾ ಪೀರಜಾದೆ ರಚನೆಯ ‘ಫ್ರಾಮ್ ಲ್ಯಾಂಡ್ ಟು ಲೇಔಟ್-ಪ್ರಾಕ್ಟಿಕಲ್ ಗೈಡ್‌ಲೈನ್ಸ್ ಫಾರ್ ರಿಯಲ್ ಎಸ್ಟೆಟ್’ ಕೃತಿ ಶುಕ್ರವಾರ ಜರುಗಿದ ಸಮಾರಂಭದಲ್ಲಿ ಬಿಡುಗಡೆಗೊಂಡಿತು.
ಪ್ರಾದೇಶಿಕ ಆಯುಕ್ತ ಕೆ.ಎಂ.ಜಾನಕಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಭೂದಾಖಲೆಗಳು, ಸರ್ವೆ ಪ್ರಕ್ರಿಯೆ ಹಾಗೂ ಕೃಷಿ ಭೂಮಿಯಿಂದ ಅನುಮೋದಿತ ಲೇಔಟ್‌ವರೆಗಿನ ಕಾನೂನು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸಂಬಂಧಿತ ಅಧಿಕಾರಿಗಳು ಅರ್ಥ ಮಾಡಿಕೊಳ್ಳಲು ಈ ಕೃತಿ ಅನುಕೂಲವಾಗಿದೆ ಎಂದು ಬಣ್ಣಿಸಿದರು.
ಲೇಖಕಿ ಡಾ.ನಜ್ಮಾ ಪೀರಜಾದೆ ಮಾತನಾಡಿ, ಈ ಕೃತಿಗೆ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪ್ರಭಾಕರ ಕೋರೆಯವರ ಆಶೀರ್ವಾದ ನುಡಿ, ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಮುನ್ನುಡಿ ಇದೆ. ಅನೇಕ ಹಿರಿಯ ಅಧಿಕಾರಿಗಳ ಮೌಲ್ಯಯುತ ಅಭಿಪ್ರಾಯ ದಾಖಲಿಸಲಾಗಿದೆ ಎಂದು ಹೇಳಿದರು.
ಭೂ ದಾಖಲೆಗಳ ಪ್ರಾದೇಶಿಕ ಜಂಟಿ ನಿರ್ದೇಶಕ ಉಮೇಶ, ಸಹಾಯಕ ನಿರ್ದೇಶಕರು, ತಹಸೀಲ್ದಾರರು, ಕಂದಾಯ ಅಧಿಕಾರಿಗಳು, ಸರ್ವೆಯರ್‌ಗಳು, ಕಂದಾಯ ಮತ್ತು ಸರ್ವೆ, ಭೂ ದಾಖಲೆಗಳ ಇಲಾಖೆಯ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

Spread the love

About Laxminews 24x7

Check Also

ಕುಡಿಯುವ ನೀರಿಗಾಗಿ 224 ಕೋಟಿ ಅನುದಾನ ಬಿಡುಗಡೆ – ಈಶ್ವರ್ ಖಂಡ್ರೆ

Spread the loveಬೆಂಗಳೂರು: ಕುಡಿಯುವ ನೀರಿಗಾಗಿ 224 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ