Breaking News

ಬ್ಯಾಂಕ್ ಮುಷ್ಕರದ ಜಾಗೃತಿಗಾಗಿ ಬೆಳಗಾವಿಯಲ್ಲಿ ಮತ ಪ್ರದರ್ಶನ

Spread the love

ಬೆಳಗಾವಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಟಾಫ್ ಫೆಡರೇಶನ್ ಮೇ 25 ಮತ್ತು 26ರಂದು ಕರೆ ನೀಡಿರುವ ದೇಶವ್ಯಾಪಿ ಬ್ಯಾಂಕ್ ಮುಷ್ಕರ ಪ್ರಯುಕ್ತ ನಗರದಲ್ಲಿ ಶುಕ್ರವಾರ ಸಂಘಟನೆಯಿಂದ ಮತ ಪ್ರದರ್ಶನ ನಡೆಸಲಾಯಿತು.
ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ನೌಕರರು, ಮುಷ್ಕರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ತಮ್ಮ ಪ್ರಮುಖ ಬೇಡಿಕೆಗಳ ಪರವಾಗಿ ಘೋಷಣೆ ಕೂಗಿದರು.
ಮೆಸೆಂಜರ್‌ಗಳ, ಸಶಸ್ತ್ರ ಕಾವಲುಗಾರರ ನೇಮಕಾತಿಯಾಗಬೇಕು. ಎನ್‌ಪಿಎಸ್ ನೌಕರರಿಗೆ ಪೆನ್ಷನ್ ಫಂಡ್ ಮ್ಯಾನೇಜರ್ ಆಯ್ಕೆ ಬದಲಿಸಬೇಕು. 2019ರಿಂದ ಸೇರಿಕೊಂಡ ನೌಕರರಿಗೆ ಇಂಟರ್ ಸರ್ಕಲ್ ವರ್ಗಾವಣೆ ನೀಡಬೇಕು. ವೇತನ ತಾರತಮ್ಯದ ಸಮಸ್ಯೆ ಪರಿಹರಿಸಬೇಕು. ವೈದ್ಯಕೀಯ ಮರುಪಾವತಿ ಯೋಜನೆಯಲ್ಲಿ ಸುಧಾರಣೆಯಾಗಬೇಕು. ಸಿಬ್ಬಂದಿಯ ಸಮರ್ಪಕ ನೇಮಕಾತಿಯಾಗಬೇಕು ಎಂದು ಆಗ್ರಹಿಸಿದರು.
ಐಶ್ವರ್ಯ ಬೊಂಗಾಳೆ, ತುಕಾರಾಮ ರಜಪುತ, ಕಿರಣ ಬಾಗಲಕೋಟಿ, ಪ್ರಭಂಜನ ಶಿರಾಳಕರ, ಆರತಿ, ಸಂಪದಾ ಕಿರ್ಲೋಸ್ಕರ, ಸಮೀರ ಮೆನ್ಸೆ, ತೌಫಿಕ್ ಶೇಖ್, ರಾಹುಲ ಕುರ್ಲೆ ಇತರರಿದ್ದರು.

Spread the love

About Laxminews 24x7

Check Also

ಕುಡಿಯುವ ನೀರಿಗಾಗಿ 224 ಕೋಟಿ ಅನುದಾನ ಬಿಡುಗಡೆ – ಈಶ್ವರ್ ಖಂಡ್ರೆ

Spread the loveಬೆಂಗಳೂರು: ಕುಡಿಯುವ ನೀರಿಗಾಗಿ 224 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ