Breaking News

ನಿಲಣ್ಣವರ್ ನಿಂದ ಐಶಾರಾಮಿ ಕಾರ್ ಗಿಪ್ಟ್ ಪಡೆದ ಕರವೇ ಜಿಲ್ಲಾಧ್ಯಕ್ಷನಿಗೆ ಸಿಐಡಿ ನೋಟಿಸ್

Spread the love

ಬೆಳಗಾವಿ:  ಹೆಚ್ಚಿನ ಬಡ್ಡಿ ನೀಡುವದಾಗಿ ಜನರಿಗೆ ಸಾವಿರಾರು ಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ಸಿಐಡಿ ವಶದಲ್ಲಿ ಇರುವ ಶಿವಂ ಅಸೋಶಿಯೇಟ್ ಮಾಲೀಕ ಶಿವಾನಂದ ನಿಲಣ್ಣವರ್ ಪ್ರಕರಣದಲ್ಲಿ ಕರವೇ ಜಿಲ್ಲಾಧ್ಯಕ್ಷ ಅಭಿಲಾಷ್ ಅವರಿಗೆ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ಕರವೇ ಜಿಲ್ಲಾಧ್ಯಕ್ಷನಿಗೆ ಶಿವಾನಂದ ನಿಲಣ್ಣವರ ಐಶಾರಾಮಿ ಕಾರು ಗಿಪ್ಟ್ ಕೊಟ್ಟಿರುವ ಕಾರಣ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಕರವೇ (ಪ್ರವೀಣ್ ಶೆಟ್ಟಿ ಬಣ) ಬೆಳಗಾವಿ ಜಿಲ್ಲಾಧ್ಯಕ್ಷ ಅಭಿಲಾಷ್‌ಗೆ ಶಿವಾನಂದ ನೀಲಣ್ಣವರ ಕಡೆಯಿಂದ ಐಶಾರಾಮಿ ಕಾರು ಗಿಫ್ಟ್ ನೀಡಲಾಗಿದೆ ಎಂದು ಸಿಐಡಿ ಅಭಿಲಾಷ್‌ಗೆ ನೋಟಿಸ್ ನೀಡಿದೆ.

ಬೆಳಗಾವಿ ನಗರದಲ್ಲಿ ಕನ್ನಡ ಹಬ್ಬ ಸಕ್ಸಸ್ ಆದ ಹಿನ್ನೆಲೆಯಲ್ಲಿ ಅಭಿಲಾಷ್‌ಗೆ ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಕಾರನ್ನು ಗಿಫ್ಟ್ ಆಗಿ ನಿಲಣ್ಣವರ ನೀಡಿದ್ದರು.‌ ಅಲ್ಲದೇ ಅಭಿಲಾಷ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾಗೂ ಶಿವಾನಂದ ನಿಲಣ್ಣವರ ಹೂಡಿಕೆ ಮಾಡಿದ್ದರು.‌

ಈಗಾಗಲೇ ಸಿಐಡಿ  ವಿಚಾರಣೆ ವೇಳೆ ಕಾರು ಖರೀದಿ ಹಾಗೂ ಸಿನಿಮಾಗೆ ಹೂಡಿಕೆ ಹಣ ಕೊಟ್ಟಿರುವುದಾಗಿ ಶಿವಾನಂದ ಹೇಳಿಕೊಂಡಿದ್ದಾರೆ.‌ ಜನರು ಹೂಡಿಕೆ ಮಾಡಿರುವ ಹಣವನ್ನೇ ಕಾರು ಖರೀದಿ, ಸಿನಿಮಾ ನಿರ್ಮಾಣಕ್ಕೆ ಕೊಟ್ಟಿದ್ದಾರೆ.  ಹಾಗಾಗಿ ಕರವೇ ಜಿಲ್ಲಾಧ್ಯಕ್ಷ ಅಭಿಲಾಷ್‌ಗೆ ನೋಟಿಸ್ ನೀಡಿದ್ದಾರೆ.‌


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ