Breaking News

ಸೋತರೂ ಆರ್‌ಸಿಬಿ ಟೇಬಲ್‌ ಟಾಪರ್‌ – ಮೊದಲ ಕ್ವಾಲಿಫೈಯರ್‌ಗೆ ಅರ್ಹತೆ

Spread the love

ಹೈದರಾಬಾದ್‌: ಕಳಪೆ ಫೀಲ್ಡಿಂಗ್‌, ಕಳಪೆ ಬೌಲಿಂಗ್‌ನಿಂದ ಸನ್‌ ರೈಸರ್ಸ್‌ ಹೈದರಾಬಾದ್‌  ವಿರುದ್ಧ ಸೋತರೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಮೊದಲ ಕ್ವಾಲಿಫೈಯರ್‌ ಪಂದ್ಯಕ್ಕೆ ಅರ್ಹತೆ ಪಡೆದಿದೆ.ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಹೈದರಾಬಾದ್‌ 4 ವಿಕೆಟ್‌ ನಷ್ಟಕ್ಕೆ 255 ರನ್‌ ಹೊಡೆಯಿತು. ಸವಾಲಿನ ಮೊತ್ತ ಇದಾಗಿದ್ದರೂ ಆರ್‌ಸಿಬಿ 166 ರನ್‌ಗಳಿಸಿದರೆ ಟಾಪ್‌ 2 ಅರ್ಹತೆ ಪಡೆಯುವ ಟಾರ್ಗೆಟ್‌ ಸಿಕ್ಕಿದ್ದರಿಂದ ಈ ಮೊತ್ತವನ್ನು ಆರ್‌ಸಿಬಿ ಬೆನ್ನಟ್ಟಿತ್ತು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 200 ರನ್‌ ಹೊಡೆದು ಸೋಲೊಪ್ಪಿಕೊಂಡಿತು.180 ರನ್‌ಗಳ ಗಡಿಯನ್ನು ದಾಟಿ 18 ಅಂಕದೊಂದಿಗೆ 0.783 ನೆಟ್‌ ರನ್‌ರೇಟ್‌ನಲ್ಲಿ ಹೊಂದಿದದ್ದರಿಂದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಿತು. ಮಂಗಳವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ಆರ್‌ಸಿಬಿ ಧರ್ಮಶಾಲಾದಲ್ಲಿ ಮೊದಲ ಕ್ವಾಲಿಫೈಯರ್‌ ಪಂದ್ಯ ನಡೆಯಲಿದೆ. 18 ಅಂಕ ಪಡೆದರೂ ಗುಜರಾತ್‌ 0.695 ನೆಟ್‌ರನ್‌ ಹೊಂದುವ ಮೂಲಕ ಎರಡನೇ ಸ್ಥಾನ, 0.524 ನೆಟ್‌ ರನ್‌ ರೇಟ್‌ ಪಡೆದಿರುವ ಹೈದರಾಬಾದ್‌ ಮೂರನೇ ಸ್ಥಾನ ಪಡೆದಿದೆ.

3 ವಿಕೆಟ್‌ ನಷ್ಟಕ್ಕೆ 94 ರನ್‌ಗಳಿಸಿದ್ದ ಜೊತೆಯಾದ ನಾಯಕ ರಜತ್‌ ಪಟಿದಾರ್‌ ಮತ್ತು ಕೃನಾಲ್‌ ಪಾಂಡ್ಯ 4ನೇ ವಿಕೆಟಿಗೆ 58 ಎಸೆತಗಳಲ್ಲಿ 84 ರನ್‌ ಜೊತೆಯಾಟವಾಡಿದರು. ರಜತ್‌ ಪಟಿದಾರ್ 56 ರನ್‌(39 ಎಸೆತ, 6 ಬೌಂಡರಿ, 1 ಸಿಕ್ಸ್‌) ಹೊಡೆದು ಔಟಾದರೆ ಕೃನಾಲ್‌ ಪಾಂಡ್ಯ ಅಜೇಯ 41 ರನ್‌(31 ಎಸೆತ, 5 ಬೌಂಡರಿ) ಟಿಮ್‌ ಡೇವಿಡ್‌ ಅಜೇಯ 15 ರನ್‌(7 ಎಸೆತ, 1 ಬೌಂಡರಿ, ಸಿಕ್ಸ್‌) ಹೊಡೆದರು.

ವೆಂಕಟೇಶ್ ಅಯ್ಯರ್‌ ಕೇವಲ 19 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 44 ರನ್ ಸಿಡಿಸಿ ಉತ್ತಮ ಆರಂಭ ನೀಡಿದರಾದರೂ ಇಶಾನ್ ಮಾಲಿಂಗ ಬೌಲಿಂಗ್‌ನಲ್ಲಿ ಔಟಾದರು. ಇಂದಿನ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಆಡಲು ವಿಫಲರಾದ ಕೊಹ್ಲಿ, ಸಾಕಿಬ್ ಹುಸೇನ್ ಎಸೆತದಲ್ಲಿ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ದೇವದತ್‌ ಪಡಿಕ್ಕಲ್‌ 14 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ನೆರವಿನಿಂದ 21 ರನ್ ಗಳಿಸಿ ಔಟಾದರು.

ಆರಂಭದಿಂದಲೇ ಆರ್‌ಸಿಬಿ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಎಸ್‌ಆರ್‌ಹೆಚ್ ಬ್ಯಾಟರ್‌ಗಳು ರನ್ ಮಳೆ ಹರಿಸಿದರು. ಅಭಿಷೇಕ್ ಶರ್ಮಾ ಕೇವಲ 22 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್‌ಗಳೊಂದಿಗೆ 56 ರನ್ ಚಚ್ಚಿ ಸ್ಫೋಟಕ ಆರಂಭ ನೀಡಿದರು. ಇಶಾನ್ ಕಿಶನ್ 46 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 79 ರನ್ ಸಿಡಿಸಿ ತಂಡದ ಗರಿಷ್ಠ ಸ್ಕೋರರ್ ಆದರು. ಆರ್‌ಸಿಬಿ ಬೌಲಿಂಗ್‌ ಧೂಳೀಪಟ ಮಾಡಿದ ಹೆನ್ರಿಚ್ ಕ್ಲಾಸೆನ್ 24 ಎಸೆತಗಳಲ್ಲಿ 5 ಸಿಕ್ಸರ್ ಸಹಿತ 51 ರನ್ ಚಚ್ಚಿದರು. ಕೊನೆಯಲ್ಲಿ ಬಿರುಸಿನ ಆಟವಾಡಿದ ನಿತೀಶ್ ಕುಮಾರ್ ರೆಡ್ಡಿ 12 ಎಸೆತಗಳಲ್ಲಿ 29 ರನ್ ಗಳಿಸಿ ಅಜೇಯರಾಗುಳಿದರು.

ಬೆಂಗಳೂರು ಪರ ರಸಿಖ್ ಸಲಾಮ್ 2 ವಿಕೆಟ್ ಪಡೆದರಾದರೂ 4 ಓವರ್‌ಗಳಲ್ಲಿ 52 ರನ್ ಬಿಟ್ಟುಕೊಟ್ಟರು. ಕೃನಾಲ್ ಪಾಂಡ್ಯ 1 ವಿಕೆಟ್ ಪಡೆದರು. ಜೋಷ್ ಹ್ಯಾಜಲ್‌ವುಡ್ ಹಾಗೂ ಭುವನೇಶ್ವರ್ ಕುಮಾರ್ ತಲಾ 50ಕ್ಕೂ ಹೆಚ್ಚು ರನ್ ನೀಡಿ ದುಬಾರಿಯಾದರು.


Spread the love

About Laxminews 24x7

Check Also

ಧಾರವಾಡ ಪ್ರತ್ಯೇಕ ಪಾಲಿಕೆಗಾಗಿ ಪ್ರತಿಭಟನಾ ಮೆರವಣಿಗೆ

Spread the loveಧಾರವಾಡ: ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಹಾಗೂ ದೀಪಕ ಚಿಂಚೋರೆ ಅಭಿಮಾನಿ ಬಳಗದ ವತಿಯಿಂದ ಕಾಂಗ್ರೆಸ್​ ಮುಖಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ