Breaking News

ಏ ಇವನ್ಯಾವನೋ ಬಿಸಿಲಲ್ಲಿ ಎಳನೀರು ತರಬೇಕಲ್ವಾ – ನೀರು ಕೊಡಲು ಬಂದ ಅಧಿಕಾರಿ ಮೇಲೆ ಸಿಎಂ ಗರಂ

Spread the love

ಮೈಸೂರು: ಕಾಮಗಾರಿ ವೀಕ್ಷಣೆ ಮಾಡಲು ಹೋಗಿದ್ದಾಗ ನೀರು ಕೊಡಲು ಬಂದ ಅಧಿಕಾರಿ ಮೇಲೆ ಸಿಎಂ ಸಿದ್ದರಾಮಯ್ಯ  ಗರಂ ಆಗಿದ್ದಾರೆ. ಏ ಇವನ್ಯಾವನೋ ಬಿಸಿಲಲ್ಲಿ ಎಳನೀರು ತರಬೇಕಲ್ವಾ ಎಂದು ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಮೈಸೂರು ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಎಂಜಿನಿಯರ್ ಒಬ್ಬರು ನೀರು ಕೊಡಲು ಬಂದಿದ್ದು, ಆಗ ಸಿಎಂ ಏ ಜ್ಯೂಸ್ ಇಲ್ವೇನಯ್ಯ ಎಂದು ಕೇಳಿದ್ದಾರೆ. ಏ ಇವನ್ಯಾವನೋ ಬಿಸಿಲಲ್ಲಿ ಎಳನೀರು ತರಬೇಕಲ್ವಾ ಎಂದು ಗರಂ ಆಗಿದ್ದಾರೆ. ಜ್ಯೂಸ್‌ ಇಲ್ಲದ್ದಕ್ಕೆ ಕೊನೆಗೆ ಸಿಎಂ ನೀರನ್ನು ಕುಡಿಯದೇ ಹಾಗೇ ಮುಂದೆ ಸಾಗಿದ್ದಾರೆ. ಅಧಿಕಾರಿಗಳು ಕಾಮಗಾರಿ ವೀಕ್ಷಣೆಯ ಮುಂದಿನ ಸ್ಥಳದಲ್ಲಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.

ಬೆಳಿಗ್ಗೆ 11 ಗಂಟೆಯಿಂದ ಸಿಎಂ ಮೈಸೂರು ಸಿಟಿ ರೌಂಡ್ಸ್‌  ನಡೆಸುತ್ತಿದ್ದು, ನಗರದಲ್ಲಿ ಹಲವೆಡೆ ನಡೆಯುತ್ತಿರುವ ಯು.ಜಿ ಕೇಬಲಿಂಗ್, ವೈಟ್ ಟಾಪಿಂಗ್, ಬಿ ಮಹಾರಾಣಿ ಕಾಲೇಜು ಕಾಮಗಾರಿ ಹಾಗೂ ಹೊಸ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿಎಂಗೆ ಸ್ಥಳೀಯ ನಾಯಕರು ಸಾಥ್ ನೀಡಿದ್ದಾರೆ.


Spread the love

About Laxminews 24x7

Check Also

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್ – ಬಸ್‌ಪಾಸ್ ಶುಲ್ಕ ಮರುಪಾವತಿ; ಜೂ.29 ರಿಂದ ಅರ್ಜಿ ಪ್ರಕ್ರಿಯೆ ಶುರು

Spread the loveವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದು ಹೇಗೆ? ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಘೋಷಣೆ ಮಾಡಿದ್ದ ರಾಜ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ