Breaking News

ತಕ್ಷಣವೇ ದಲಿತರ ಮೀಸಲಾತಿ ಹೆಚ್ಚಿಸಬೇಕು – ಛಲವಾದಿ ಆಗ್ರಹ

Spread the love

ಬೆಂಗಳೂರು: ಈ ಹಿಂದೆ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರ ಇದ್ದಾಗ ಏರಿಕೆ ಮಾಡಿದ್ದ ದಲಿತರ ಮೀಸಲಾತಿಯನ್ನು ಕಾಂಗ್ರೆಸ್ ಸರ್ಕಾರ ಕಡಿತಗೊಳಿಸಿದೆ. ತಕ್ಷಣವೇ ದಲಿತ ಸಮುದಾಯದ ಮೀಸಲಾತಿಯನ್ನು ಶೇ.15 ರಿಂದ ಶೇ. 17ಕ್ಕೆ ಹೆಚ್ಚಿಸಬೆಕೆಂದು ಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ  ಆಗ್ರಹಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್‌ಸಿ ಸಮುದಾಯದ ಮೀಸಲಾತಿ ಕಡಿತಗೊಳಿಸಿರುವ ಹಿನ್ನೆಲೆ ರಾಜ್ಯಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿತ್ತು. ಆದರಿಂದ ಆ ಸಮುದಾಯಕ್ಕೆ ಎಲ್ಲಾ ರೀತಿಯ ಸೌಲಭ್ಯ ಸಿಕ್ಕಿತ್ತು. ಈಗ ಕಾಂಗ್ರೆಸಿನವರು ಮೀಸಲಾತಿ ಕಡಿತ ಮಾಡಿದ್ದಾರೆ. ದಲಿತ ಪರ, ಅಂಬೇಡ್ಕರ್ ಪರ, ಸಂವಿಧಾನ ಪರ ಎನ್ನುವ ಕಾಂಗ್ರೆಸ್ ಈ ಮೂರಕ್ಕೂ ಎಳ್ಳು ನೀರು ಬಿಟ್ಟಿದೆ ಎಂದುಸರ್ಕಾರವನ್ನು ಲೇವಡಿ ಮಾಡಿದ್ದಾರೆ.

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬಹುದು. ಛತ್ತೀಸ್‌ಗಡದಲ್ಲಿ ಶೇ.58 ಮೀಸಲಾತಿ ಇದೆ. ತಮಿಳುನಾಡಿನಲ್ಲಿ ಶೇ.69 ಇದೆ. ಕಾಂಗ್ರೆಸ್ ಸರ್ಕಾರ ಶೆಡ್ಯೂಲ್ 9ಕ್ಕೆ ಸೇರಿಸಿ ಎಂದು ಹೇಳುವುದು ಯಾಕೆ? ನಾಗಮೋಹನ್ ದಾಸ್ ವರದಿ ಪ್ರಕಾರ, ಎಸ್‌ಟಿ ಸಮುದಾಯಕ್ಕೆ ಶೇ. 17 ಹಾಗೂ ಎಸ್‌ಸಿ ಸಮುದಾಯಕ್ಕೆ ಶೇ. 7 ಮೀಸಲಾತಿ ಕೊಡಬೇಕು. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಮೀಸಲಾತಿ ಹೆಚ್ಚಿಸಲು ಇಷ್ಟವಿಲ್ಲ. ಅಧಿವೇಶನದಲ್ಲಿ 17% ಮೀಸಲಾತಿ ಕೊಡುವುದಾಗಿ ಹೇಳಿ 15% ಮೀಸಲಾತಿ ನೀಡಿದೆ ಎಂದು ಆರೋಪಿಸಿದ್ದಾರೆ.

ಕೋರ್ಟ್ 50% ಮೀಸಲಾತಿ ಪ್ರಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಅಂತ ಹೇಳಿದರೂ ಕೂಡ ಸರ್ಕಾರ ಕೋರ್ಟ್‌ಗೆ ಸರಿಯಾದ ಮಾಹಿತಿ ನೀಡದೆ ತಪ್ಪು ಮಾಡಿದೆ. ಇಲ್ಲಿ ಸರ್ಕಾರದ್ದೇ ತಪ್ಪು ಎಂದಿದ್ದಾರೆ.


Spread the love

About Laxminews 24x7

Check Also

ಶಾಲಾ-ಕಾಲೇಜುಗಳಲ್ಲಿ ಹಿಜಬ್‌ಗೆ ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶ – ಕೇಸರಿ ಶಾಲಿಗಿಲ್ಲ ಅವಕಾಶ

Spread the loveಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ರಾಜ್ಯ ಸರ್ಕಾರ ಮತ್ತೆ ಅವಕಾಶ ಕಲ್ಪಿಸಿದೆ. ಎಲ್ಲಾ ಧರ್ಮಗಳ ಧಾರ್ಮಿಕ, ಸಾಂಪ್ರದಾಯಿಕ ವಸ್ತುಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ