Breaking News

ವಾಲ್ಮೀಕಿ ವಿವಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ – ಕಲಬುರಗಿ ಹೈಕೋರ್ಟ್ ತಡೆ

Spread the love

ರಾಯಚೂರು: ಜಿಲ್ಲೆಯ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಗೆ ಕೋರ್ಟ್  ತಡೆ ನೀಡಿದೆ.

ಸರ್ಕಾರದಿಂದ ಮಂಜೂರಾಗಿದ್ದ ವಿವಿಯ ಸಹಾಯಕ ಪ್ರಾಧ್ಯಾಪಕರ 24 ಹುದ್ದೆಗಳ ನೇಮಕಾತಿಗೆ ಕಲಬುರಗಿ ಹೈಕೋರ್ಟ್‌ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ. ಕರ್ನಾಟಕ ಸರ್ಕಾರ ನೇಮಕಾತಿಗೆ 16 ಏಪ್ರಿಲ್ 2026 ರಂದು ಮಂಜೂರಾತಿ ನೀಡಿತ್ತು.

ಸರ್ಕಾರದ ಕೆಲ ಮಾರ್ಗಸೂಚಿಗಳು ಯು.ಜಿ.ಸಿ ನಿಯಮಾವಳಿಗಳ ಉಲ್ಲಂಘಿಸಿವೆ ಅಂತ ಆರೋಪಿಸಿ ಸ್ಪರ್ಧಾಕಾಂಕ್ಷಿ ಶ್ರೀಧರ್ ಎಂಬುವವರು ಕಲಬುರಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ಪೀಠ ನೇಮಕಾತಿ ಪ್ರಕ್ರಿಯೆಗೆ ಮುಂದಿನ ಆದೇಶದವರೆಗೆ ತಡೆ ನೀಡಿದೆ. ಮೇ 7 ರಿಂದ ವಿವಿಯಲ್ಲಿ ನಡೆಯಬೇಕಿದ್ದ ನೇರ ನೇಮಕಾತಿ ಪ್ರಕ್ರಿಯೆ ಸದ್ಯ ಸ್ಥಗಿತವಾಗಿದೆ.


Spread the love

About Laxminews 24x7

Check Also

ಪಾಲಿಕೆಯಲ್ಲಿ ಕರ್ನಾಟಕ ಪರ ಗೋತ್ತುವಳಿ ಮಂಡನೆಗೆ ಆಗ್ರಹಿಸಿ 101 ಈಡುಗಾಯಿ ಒಡೆದು ಪ್ರತಿಭಟನೆ

Spread the loveಬೆಳಗಾವಿ: ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಆಗ್ರಹಿಸಿ ಕಳೆದ ನೂರು ದಿನಗಳಿಂದ ನಡೆದ ಕನ್ನಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ