Breaking News

ಶಾಲೆಗಳಲ್ಲಿ ಅಶ್ಲೀಲ ಹಾಡು-ನೃತ್ಯಕ್ಕೆ ನಿಷೇಧ: ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ

Spread the love

ಬೆಂಗಳೂರು: ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಾಲೆಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಜೀವನದ ಮೌಲ್ಯಗಳು, ಶಿಸ್ತು ಶಾಲೆಯಿಂದಲೇ ವಿದ್ಯಾರ್ಥಿಗಳು ತಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಆದರೆ ಅಂತಹ ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಹೆಸರಲ್ಲಿ ಅಸಭ್ಯ, ಅಶ್ಲೀಲ ಹಾಡುಗಳನ್ನು ಹಾಕಿ ನೃತ್ಯ ಮಾಡಿದರೆ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀಳಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ನಿರ್ಧಾರ ಕೈಗೊಂಡಿದ್ದು, ಕರ್ನಾಟಕದ ಸರಕಾರಿ ಶಾಲೆಗಳು, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಈ ರೀತಿ ಅಶ್ಲೀಲ ಹಾಡುಗಳನ್ನು ಹಾಗೂ ನೃತ್ಯ ಮಾಡುವುದಕ್ಕೆ ನಿಷೇಧ ಹೇರಲಾಗಿದೆ.

ಕೆಲವು ಸಾಂಸ್ಕೃತಿಕ ತಂಡಗಳು ಈ ಕುರಿತು ಧ್ವನಿ ಎತ್ತಿದ ಫಲವಾಗಿ ಈ ಬದಲಾವಣೆಯನ್ನು ಮಾಡಲಾಗಿದೆ. ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅರ್ಥಹೀನ ಹಾಗೂ ಕೆಟ್ಟ ಅಸಭ್ಯ ಅರ್ಥಗಳನ್ನು ಹೊಂದಿರುವ ಹಾಡುಗಳನ್ನು ಬಳಸಬಾರದು. ಶಾಲೆಗಳು ಜ್ಞಾನದ ದೇವಾಲಯ ಇದ್ದಂತೆ, ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ವದ ಪಾತ್ರಹಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಕೆಲವು ಅಶ್ಲೀಲ ಅನಿಸುವ ಸಾಹಿತ್ಯವಿರುವ ಸಿನಿಮಾ ಹಾಡುಗಳು, ಇತರೆ ಹಾಡುಗಳನ್ನು ನೃತ್ಯಕ್ಕೆ ಬಳಸುವುದರಿಂದ ಮಕ್ಕಳ ನೈತಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳಲಿದೆ.

ಮಾರ್ಗಸೂಚಿಯಲ್ಲಿ ಏನೇನಿದೆ? :

*ಶಾಲಾ ಕಾರ್ಯಕ್ರಮಗಳಲ್ಲಿ ಆಯ್ಕೆ ಮಾಡುವ ಹಾಡುಗಳು, ಮೌಲ್ಯಗಳನ್ನು ಎತ್ತಿಹಿಡಿಯುವ, ರಾಷ್ಟ್ರೀಯ ಅಭಿಮಾನವನ್ನು ಮೂಡಿಸುವ ಹಾಗೂ ಉತ್ತಮ ಸಕಾರಾತ್ಮಕ ಸಾಹಿತ್ಯವಿರುವ ಸಂಗೀತಕ್ಕೆ ಆದ್ಯತೆ ಕೊಡಬೇಕು ಎಂದಿದೆ.

ಅಶ್ಲೀಲತೆಗೆ ಅವಕಾಶವಿಲ್ಲ, ಅಶ್ಲೀಲ ಸಾಹಿತ್ಯಗಳನ್ನು ಹೊಂದಿರುವ ಹಾಡುಗಳು , ದ್ವಂದ್ವಾರ್ಥ ನೀಡುವ ಹಾಡುಗಳು, ಸಮಾಜಕ್ಕೆ ತಪ್ಪು ಸಂದೇಶ ನೀಡುವ ಹಾಡುಗಳಿಗೆ ಮಕ್ಕಳ ನೃತ್ಯವನ್ನು ನಿಷೇಧಿಸಲಾಗಿದೆ.

ಮಕ್ಕಳ ಡ್ರೆಸ್‌‍ ಕೋಡ್‌ ಹೇಗಿರಬೇಕು? : ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಉಡುಪು ಕೂಡಾ ಸಭ್ಯವಾಗಿರಬೇಕು. ಅರೆಬರೆ ವಸ್ತ್ರಗಳನ್ನು ಧರಿಸುವ ಹಾಗಿಲ್ಲ.

ಸಕಾರಾತಕ ಸಾಹಿತ್ಯಗಳಿರುವ ಹಾಡುಗಳ ಬಳಕೆ : ಜಾನಪದ, ದೇಶಭಕ್ತಿಗೀತೆ, ಪರಿಸರ ಕಾಳಜಿಯ ಗೀತೆಗಳು, ರಾಷ್ಟ್ರಪ್ರೇಮ, ಹಾಗೂ ಸಮಾಜಮುಖಿ ಚಿಂತನೆಯ ಹಾಡುಗಳನ್ನು ಆಯ್ಕೆ ಮಾಡಬೇಕು.

ಈ ನಾಲ್ಕು ಅಂಶಗಳೊಂದಿಗೆ ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲನೆ ಮಾಡಬೇಕೆಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಇದನ್ನು ಪಾಲಿಸುವ ಜವಾಬ್ದಾರಿ ಶಾಲಾ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಗೆ ನೀಡಲಾಗಿದೆ. ನಿಯಮ ಮೀರಿ ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡಿಸಿದರೆ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಂಬಂಧಿಸಿದ ಶಿಕ್ಷಕರನ್ನೇ ನೇರ ಹೊಣೆ ಮಾಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.


Spread the love

About Laxminews 24x7

Check Also

25 ವರ್ಷಗಳ ಬಳಿಕ ಬೆಂಗಳೂರಲ್ಲಿ ದಾಖಲೆಯ ಮಳೆ – 170 ಮರಗಳು ಧರಾಶಾಹಿ, 68 ಕಡೆ ಜಲಾವೃತ

Spread the loveಬೆಂಗಳೂರು:  ಸುರಿದ ಭಾರೀ ಮಳೆಗೆ ನಡೆದ ಅವಾಂತರಗಳು ಒಂದಾ.. ಎರಡಾ..? ಬೇಸಿಗೆ ಮಳೆಗೆ ಇಡೀ ಸಿಲಿಕಾನ್ ಸಿಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ