Breaking News

ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ವ್ಹಿಸಿ ಸಜ್ಜನರ ಬಡ್ತಿ

Spread the love

ಸಮಾಜಘಾತಕರ ಹೃದಯದಲ್ಲಿ ಭಯ ಹುಟ್ಟಿಸುವ ಧೈರ್ಯಶಾಲಿ, ನ್ಯಾಯಕ್ಕಾಗಿ ನಿಂತ ನಿರ್ಭಯ ಯೋಧ, ನಮ್ಮ ಹೆಮ್ಮೆಯ ಕನ್ನಡಿಗರಾದ ಮಾನ್ಯ V.C. Sajjanar, IPS ಸರ್ ಅವರಿಗೆ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಹುದ್ದೆಗೆ ಬಡ್ತಿ ಲಭಿಸಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಕ್ಷಣ.
ಅವರ ಪ್ರತಿಯೊಂದು ಹೆಜ್ಜೆಯೂ ನ್ಯಾಯದ ದಾರಿಯಲ್ಲಿ, ಪ್ರತಿಯೊಂದು ನಿರ್ಧಾರವೂ ದೇಶಭಕ್ತಿಯ ನಾದದಲ್ಲಿ ಮೂಡಿದೆ. ಕಠಿಣ ಪರಿಸ್ಥಿತಿಗಳಲ್ಲೂ ತಲೆಬಾಗದೆ ನಿಂತ
ಅವರ ಆತ್ಮವಿಶ್ವಾಸ, ಶೌರ್ಯ ಮತ್ತು
ತ್ಯಾಗ ಇವೆಲ್ಲವೂ ನಮ್ಮ ಯುವ
ಪೀಳಿಗೆಗೆ ದಾರಿದೀಪವಾಗಿದೆ.
ಈ ಸಾಧನೆ ಕೇವಲ ಹುದ್ದೆಯ ಏರಿಕೆ
ಅಲ್ಲ ಇದು ಸತ್ಯ, ನ್ಯಾಯ ಮತ್ತು
ಧರ್ಮಕ್ಕೆ ಸಿಕ್ಕ ಗೌರವ.ನಮ್ಮ ನಾಡಿನ ಮಗನಾದಅವರು ದೇಶದ ಶ್ರೇಷ್ಠ
ಸ್ಥಾನದಲ್ಲಿ ಹೊಳೆಯುತ್ತಿರುವುದು
ನಿಜಕ್ಕೂ ಹೃದಯವನ್ನು ಸ್ಪರ್ಶಿಸುವ
ಸಂಗತಿ.ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಇನ್ನೂ ಹೆಚ್ಚಿನ ಶಿಖರಗಳನ್ನು ಅವರು ಏರಲಿ, ಅವರ ಸೇವೆಯ ಬೆಳಕು ಸದಾ ಸಮಾಜವನ್ನು ಬೆಳಗಿಸಲಿ ಎಂದು ಹೃದಯದಿಂದ ಹಾರೈಸುತ್ತೇವೆ.
ಜೈ ಹಿಂದ್.


Spread the love

About Laxminews 24x7

Check Also

ಭಟ್ಕಳದಲ್ಲಿ ಗಣಪತಿ ವಿಸರ್ಜನೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲು ತೂರಾಟ

Spread the loveಕಾರವಾರ: ತಾಲೂಕಿನ ತಲಾಂದ ಸಾರ್ವಜನಿಕ ಗಣೇಶೋತ್ಸವ  ಸಮಿತಿಯ ವತಿಯಿಂದ ಬುಧವಾರ ರಾತ್ರಿ ಆಯೋಜಿಸಲಾಗಿದ್ದ ಗಣೇಶ ವಿಸರ್ಜನಾ ಮೆರವಣಿಗೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ