Breaking News

ಜನಗಣತಿಗೆ ಗೈರಾದ್ರೆ ಕಠಿಣ ಕ್ರಮ – 1 ಸಾವಿರ ದಂಡದೊಂದಿಗೆ 3 ವರ್ಷ ಜೈಲು

Spread the love

ಬೆಂಗಳೂರು: ಜನಗಣತಿಗೆ  ಗೈರಾದ್ರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಜಿಬಿಎ ಖಡಕ್ ಎಚ್ಚರಿಕೆ ನೀಡಿದೆ.

ಗೈರುಹಾಜರಾತಿಗೆ ಜಿಬಿಎಯಿಂದ 1,000 ರೂ ದಂಡ ಜೊತೆಗೆ 3 ವರ್ಷ ಕಾರಾಗೃಹ ಶಿಕ್ಷೆ ಎಂದು ಎಚ್ಚರಿಸಿದೆ. ಅಗತ್ಯವಿದ್ದಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಅಧಿಕಾರಿಗಳಿಗೆ ಆಯುಕ್ತರು ಎಚ್ಚರಿಕೆ ಕೊಟ್ಟಿದ್ದಾರೆ.

ಗಣತಿಗೆ ನಿಯೋಜಿಸಲ್ಪಟ್ಟಿರುವ ಗಣತಿ ಬ್ಲಾಕ್ ಹಾಗೂ ಸೂಪರ್ವೈಸರ್ ಸರ್ಕಲ್ ಗಳಲ್ಲಿ ಕರ್ತವ್ಯಕ್ಕೆ ಹಾಜರಾಗದ ಗಣತಿದಾರರು ಮತ್ತು ಸೂಪರ್ವೈಸರ್ಗಳ ವಿರುದ್ಧ ಜನಗಣತಿ ಕಾಯ್ದೆಯ 1948ರ ಸೆಕ್ಷನ್ 11ರ ನಿಯಮಗಳ ಪ್ರಕಾರ, ಯಾವುದೇ ಜನಗಣತಿ ಅಧಿಕಾರಿ ಅಥವಾ ಜನಗಣತಿ ಕಾರ್ಯದಲ್ಲಿ ಸಹಾಯ ಮಾಡಲು ಕಾನೂನಿನ ಪ್ರಕಾರ ಕರೆಯಲ್ಪಟ್ಟ ಯಾವುದೇ ವ್ಯಕ್ತಿ ಮೇಲೆ ಕ್ರಮ ಕೈಗೊಳ್ಳಲಾಗುವುದಾಗಿ ವಾರ್ನಿಂಗ್ ಮಾಡಿದೆ.

ಜನಗಣತಿಗೆ ಗೈರಾದರೆ ಶಿಕ್ಷೆ
* 1000ರೂ ದಂಡ ಜೊತೆಗೆ 3 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ
* ಗೈರುಹಾಜರಾತಿ ಅವಧಿಯನ್ನು ಡೈಸ್-ನಾನ್ ಎಂದು ಪರಿಗಣನೆ
* ಸೇವಾ ನಿಯಮಾವಳಿಯಂತೆ ಶಿಸ್ತು ಕ್ರಮ ಹಾಗೂ ಕಾನೂನು ಕ್ರಮ
* ಅಗತ್ಯವಿದ್ದಲ್ಲಿ ಮೊಕದ್ದಮೆ ದಾಖಲಿಸುವ ಎಚ್ಚರಿಕೆ


Spread the love

About Laxminews 24x7

Check Also

ಕೆಪಿಎ ಆಸರೆ ಯೋಜನೆಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ

Spread the loveಗೋಕಾಕ: ಅವಿಸ್ಮರಣೀಯ ನೆನಪು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಸದಾ ನೆನಪಿನಲ್ಲಿರುವಂತೆ ಮಾಡುವ ಛಾಯಾಗ್ರಾಹಕರಿಗೆ ಕೆಪಿಎ ಆಸರೆ ಯೋಜನೆ ಉಪಯುಕ್ತವಾಗಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ