Breaking News

ನಾನು 10 ವರ್ಷ ಪಟ್ಟ ಕಷ್ಟಕ್ಕೆ ನ್ಯಾಯ ಸಿಕ್ಕಿದೆ, ನ್ಯಾಯಾಲಯದ ತೀರ್ಪನ್ನು ಸ್ವಾಗತ ಮಾಡ್ತೀನಿ: ಯೋಗೀಶ್ ಗೌಡ ಪತ್ನಿ

Spread the love

ಧಾರವಾಡ: ನಾನು ಹತ್ತು ವರ್ಷ ಪಟ್ಟ ಕಷ್ಟಕ್ಕೆ ನ್ಯಾಯ ಸಿಕ್ಕಿದೆ. ನ್ಯಾಯಾಲಯದ ತೀರ್ಪನ್ನು ಸ್ವಾಗತ ಮಾಡುವೆ ಎಂದು ಯೋಗೀಶ್ ಗೌಡ ಪತ್ನಿ  ಮಲ್ಲಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ  ಶಾಸಕ ವಿನಯ್ ಕುಲಕರ್ಣಿ  ಸೇರಿದಂತೆ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಈ ಹಿನ್ನೆಲೆ ಇದೇ ಮೊದಲ ಬಾರಿಗೆ ‘ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಪತ್ನಿ ಮಲ್ಲಮ್ಮ, ನನಗೆ ಇದು ಸಮಾಧಾನ ತಂದಿಲ್ಲ. ನನ್ನ ಗಂಡನ ಸ್ಥಾನದಲ್ಲಿ ನನ್ನ ಮಗ ಬರಬೇಕು. ನಮ್ಮ ಕ್ಷೇತ್ರದ ಜನ ಮಗನನ್ನು ಮಡಿಲಲ್ಲಿ ಹಾಕಿಕೊಳ್ಳಬೇಕು. ಅವರ ತಂದೆಯಂತೆ ಮಗ ಬೆಳೆಯಬೇಕು. ಆಗ ನನ್ನ ಗಂಡನ ಆತ್ಮಕ್ಕೆ ಶಾಂತಿ ಸಿಗಲಿದೆ. ಹತ್ತು ವರ್ಷ ನಾನು ಹೇಗೆ ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದ್ದೆನೆ ನನಗೆ ಗೊತ್ತು. ನನ್ನ ಮೇಲೆ ಬಂದ ನಿಂದನೆ ಬಗ್ಗೆ ನಾನು ಏನು ಮಾತನಾಡಲ್ಲ. ನಾನು ಯಾಕೆ ಹಾಗೆ ಮಾಡಿದೆ ಅಂತ ಪತ್ನಿಯಾದ ಪ್ರತಿಯೊಂದು ಮಹಿಳೆಗೆ ಗೊತ್ತಾಗುತ್ತದೆ. ನನಗೆ ಯಾರು ಏನು ನಿಂದನೆ ಮಾಡಿದ್ರು ಇಂದಿಗೆ ಕ್ಷಮಿಸಿ ಬಿಡುವೆ ಎಂದರು.

ಎಚ್ಚರಿಕೆ ಕೊಟ್ಟರು, ಮೊದಲೇ ಕೊಟ್ಟಿದ್ದರೆ ನನ್ನ ಗಂಡ ಉಳಿಯುತ್ತಿದ್ದ. ಈಗ ಎಲ್ಲಾ ಕಷ್ಟ ಅನುಭವಿಸಿದ ನಮಗೆ ಎಲ್ಲರೂ ಎಚ್ಚರಿಕೆ ಕೊಟ್ಟರೆ ಉಪಯೋಗವೇನು. ನಮ್ಮದು ಪ್ರೇಮ ವಿವಾಹ, ಹೀಗಾಗಿ ನನ್ನ ಗಂಡನ ಮನೆಯವರು, ತವರು ಮನೆಯವರು ಯಾರು ನನ್ನ ಸಹಾಯಕ್ಕೆ ಬರಲಿಲ್ಲ. ನನ್ನ ಕ್ಷೇತ್ರದ ಜನರು ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ನನ್ನ ಗಂಡ 28 ಲಕ್ಷ ಸಾಲ ಮಾಡಿದ್ದರು. ಆ ಸಾಲ ತೀರಿಸಿಕೊಂಡು ನಾನು ಜೀವನ ನಡೆಸಿಕೊಂಡು ಹೋದರು. ನನ್ನ ಗಂಡನ ಕಡೆಯವರು, ತವರು ಮನೆಯವರು ಕೈ ಹಿಡಿದ್ದರೆ ನನ್ನ ಗಂಡ ಸಾಯುತ್ತಿರಲಿಲ್ಲಾ. ನಾನು ರಾಜಕೀಯ ಕ್ಷೇತ್ರಕ್ಕೆ ಬರುವುದಕ್ಕಿಂತ ನನ್ನ ಮಕ್ಕಳು ರಾಜಕೀಯಕ್ಕೆ ಬಂದರೆ ಸಂತಸ. ನನ್ನ ಪುತ್ರನನ್ನು ಜಿಲ್ಲಾಪಂಚಾಯಿತಿ ಚುನಾವಣೆ ನಿಲ್ಲಿಸುವ ಆಕಾಂಕ್ಷೆಯಿದೆ. ಅವನ ಪದವಿ ಮುಗಿದ ಬಳಿಕ ನನ್ನ ಕ್ಷೇತ್ರದ ಜನರು ನಿರ್ಧಾರ ಮಾಡಲಿ ಎಂದು ಹೇಳಿದರು.


Spread the love

About Laxminews 24x7

Check Also

ಕನಿಷ್ಠ ವೇತನ ಹೆಚ್ಚುವರಿ ಆದೇಶ ವಾಪಸ್ಸು ಪಡೆಯಲು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

Spread the loveಬೆಳಗಾವಿ : ರಾಜ್ಯ ಸರ್ಕಾರದ ಕನಿಷ್ಠ ವೇತನ ಹೆಚ್ಚಳದ ತಿದ್ದುಪಡಿ ಆದೇಶವನ್ನು ವಿರೋಧಿಸಿ ನಗರದಲ್ಲಿ  ವಿವಿಧ ವ್ಯಾಪಾರ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ