ಕಾರವಾರ: ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರದ್ಧಾನಂದ ಗಲ್ಲಿಯ ರಂಗನಾಥ ಮಡಗಾಂವಕರ ಕೊಲೆ ಆರೋಪಿತರಾದ ರಮೇಶ ಮಡಗಾಂವಕರನಿಗೆ ಜೀವಾವಧಿ ಶಿಕ್ಷೆ ಹಾಗೂ ರೂ.೨೫,೦೦೦ ದಂಡ, ೫೦,೦೦೦ ಪರಿಹಾರ ನೀಡುವಂತೆ ಹಾಗೂ ಎರಡನೇ ಆರೋಪಿ ಸಾವಿತ್ರಿ ಮಡಗಾಂವಕರಗೆ ೨,೦೦೦ ದಂಡ ವಿಧಿಸಿ, ದೂರುದಾರಳಾದ ಶಕೂ ಇವಳಿಗೆ ೨,೦೦೦ ಪರಿಹಾರ ನೀಡುವಂತೆ ಮತ್ತು ಹೆಚ್ಚಿನ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆಯುಬಹುದು ಎಂದು ಶಿರಸಿಯ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ, ಪೀಠಾಸೀನ ನ್ಯಾಯಾಧೀಶರಾದ ಕಿರಣ ಕಿಣಿ ತೀರ್ಪು ನೀಡಿದ್ದಾರೆ.
ಶಿರಸಿ ನಗರ ಠಾಣಾ ವ್ಯಾಪ್ತಿಯ ಶ್ರಧ್ಧಾನಂದಗಲ್ಲಿಯ ಆರೋಪಿಗಳಾದ ರಮೇಶ ಗಜಾನನ ಮಡಗಾಂವಕರ ಹಾಗೂ ಆತನ ತಾಯಿ ಸಾವಿತ್ರಿ ಗಜಾನನ ಮಡಗಾಂವಕರ ಇಬ್ಬರು ಸೇರಿ ಆಸ್ತಿ ವಿಚಾರಕ್ಕೆ ಸಂಬಂಧಿಸಿ ಗಲಾಟೆ ಮಾಡುತ್ತಾ ಬಂದಿದ್ದು, ದಿ.೭-೧೨-೨೦೧೫ ರಂದು ಶಕೂ ನಾರಾಯಣ ಮಡಗಾಂವಕರ ಇವರೊಂದಿಗೆ ಮನೆಯ ಹಿಂಬಾಗದಲ್ಲಿ ಕಸ ಸಲ್ಲಿರುವ ವಿಚಾರವಾಗಿ ಜಗಳ ತೆಗೆದು ಅವ್ಯಾಚ ಶಬ್ದಗಳಿಂದ ಬೈಯುತ್ತಿರುವಾಗ ಮೃತ ರಂಗನಾಥ ತನ್ನ ತಾಯಿಗೆ ಏಕೆ ಬೈಯತ್ತಿರೆಂದು ಪ್ರಶ್ನಿಸಿದಾಗ ರಮೇಶ ಮಡಗಾಂವಕರ ರಂಗನಾಥನನ್ನು ರಸ್ತೆಗೆ ಎಳೆದೊಯ್ದು, ಕೆಡವಿ ನೆಲಕ್ಕೆ ಬಿಳಿಸಿ ಆತನ ಎದೆ ಮತ್ತು ಹೊಟ್ಟೆಯಮೇಲೆ ಬಲವಾಗಿ ತುಳಿದು, ಗುದ್ದಿ ರಸ್ತೆಗೆ ಜಜ್ಜಿದ ಪರಿಣಾಮವಾಗಿ ರಂಗನಾಥ ಮಡಗಾಂವಕರ ಪ್ರಜ್ಞಾಹೀನನಾದ ಕೊಡಲೇ ಅರೋಪಿತರು ಮೃತನನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು, ಆಂಬುಲೇನ್ಸ್ ಸಹಾಯದಿಂದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತ ಹೊಂದಿದ್ದನು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ.
Laxmi News 24×7