Breaking News

ವಿನಯ್ ಕುಲಕರ್ಣಿ ಕ್ರೌರ್ಯಕ್ಕೆ ನಲುಗಿತ್ತು ಧಾರವಾಡ ಮುರುಘಾಮಠದ ಶಿವಯೋಗಿ ಶ್ರೀ ಹೃದಯ..!

Spread the love

ಸಣ್ಣ ವಯಸ್ಸಿನಲ್ಲಿ ಸಿಕ್ಕ ಪದವಿಯಿಂದ ಈ ಮನುಷ್ಯ ರಾಕ್ಷಸನಾಗಿ ಪರಿವರ್ತನೆಯಾಗಿದ್ದ. ಧಾರವಾಡದ ಮುರುಘಾ ಮಠದ ಶ್ರೇಷ್ಠ ಪರಂಪರೆಯ ಸರಳ‌ ಸಂತ ಶಿವಯೋಗಿ ಸ್ವಾಮೀಜಿ ವಿನಯ್ ಕುಲಕರ್ಣಿ ಎಂಬ ರಾಕ್ಷಸನ ಕೈಯಲ್ಲಿ‌ ಸಿಲುಕಿ ನರಳಿ ಹೋಗಿದ್ದರು.

ಮುರುಘಾ ಮಠದ ಹಿರಿಯ ಪೂಜ್ಯ ಶ್ರೀ ಮಹಾಂತ ಸ್ವಾಮೀಜಿ ಪಾದ ಕಮಲಗಳಿಂದ ಅರಳಿದ್ದ ಶಿವಯೋಗಿ ಶ್ರೀ ಮಗು ಮನಸ್ಸಿನಿಂದ ಭಕ್ತರ ಹೃಯದ ಗೆದ್ದಿದ್ದರು. ಆದರೆ ಅಧಿಕಾರ ಹಾಗೂ ಮಠದ ಆಸ್ತಿ ಮೇಲೆ ವಿನಯ್ ಕುಲಕರ್ಣಿ ಕಣ್ಣು ಬಿದ್ದ ನಂತರ ಸ್ವಾಮೀಜಿ ಹಾದಿ, ಬೀದಿಯಲ್ಲಿ ಅಲೆದಾಡಿದರು.

ಶಿವಯೋಗಿ ಶ್ರೀಗಳನ್ನು ಈ‌ ಮನುಷ್ಯ ನಿರಂತರ ಕಾಡಿದ. ಅವರ ಬದುಕಿನ ಕೊನೆ ಘಳಿಗೆಯಲ್ಲಿ ತುತ್ತು ಅನ್ನಕ್ಕಾಗಿ ಅಲೆದಾಡಿಸಿದ. ಮುರುಘಾ ಮಠದ ಶ್ರೇಷ್ಠ ಪರಂಪರೆಯಲ್ಲಿ ‌ಬೆಳೆದರೂ ಕೊನೆಗೆ ಯಾರೂ ಕೈ ಹಿಡಿಯದ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಇದೇ ವಿನಯ್ ಕುಲಕರ್ಣಿ. ‌

ಶಿವಯೋಗಿ ಶ್ರೀ ಸೌಮ್ಯ ಸ್ವಭಾವದ ವ್ಯಕ್ತಿ. ಮಠದ ಆಸ್ತಿ ಕುರಿತು ಎಂದೂ ವಿಚಾರ ಮಾಡಿದವರಲ್ಲ. ಕೇವಲ ಭಕ್ತರ ನೋವು, ನಲಿವು ಕೇಳುತ್ತಾ ಬದುಕು ಸಾಗಿಸಿದವರು‌. ಇಂದಿನ ಸ್ವಾಮೀಜಿಗಳಂತೆ ಹಣಕ್ಕೆ, ರಾಜಕೀಯ ವ್ಯಾಮೋಹಕ್ಕೆ‌ ಜೋತು ಬಿದ್ದವರಲ್ಲ. ಆದರೆ ಮಠದ ಆಸ್ತಿ ‌ಮೇಲೆ‌ ಕುಲಕರ್ಣಿ ಕಣ್ಣು ಬಿದ್ದಿತ್ತು.

ಯಾವಾಗ ಸ್ವಾಮೀಜಿ ಮುಗ್ಧ ಎಂದು‌ ತಿಳಿದ ಕುಲಕರ್ಣಿ ಅವರ ಮೇಲೆ ಮುಗಿಬಿದ್ದ. ಪ್ರತಿದಿನ ತನ್ನ ಬೆಂಬಲಿಗರನ್ನು ಕಳುಹಿಸಿ‌ ಹಿಂಸಿಸಿದ. ತನಗೆ ಬೇಕಾದವರನ್ನು ಪೀಠಕ್ಕೆ ತರುವುದೇ ಅವನ ಉದ್ದೇಶವಾಗಿತ್ತು.‌

ಒಂದು ದಿನ ಸ್ವಾಮೀಜಿ ಎದೆಗೆ ಒದ್ದ. ಮಠ ಬಿಡದಿದ್ದರೆ‌ ಕೊಲ್ಲುವ ಭಯ ಹುಟ್ಡಿಸಿದ. ಕುಲಕರ್ಣಿ ಕ್ರೌರ್ಯಕ್ಕೆ ನಲುಗಿ ಶಿವಯೋಗಿ ಶ್ರೀ‌ಮಠ ತೊರೆದರು. ಯಾವ ಸ್ವಾಮೀಜಿ ಆಶ್ರಯವೂ ಸಿಗಲಿಲ್ಲ. ತುತ್ತು ಅನ್ನಕ್ಕಾಗಿ ಅಂಗಲಾಚಿ ಕೊನೆಗೆ ಸ್ವಾಮೀಜಿ ಶಿವನ ಪಾದ ಸೇರಿದರು.

ಸ್ವಾಮೀಜಿ ಇಂದು ನಮ್ಮನ್ನು‌ ಅಗಲಿದ್ದಾರೆ. ಅವರು ಹಾಕಿಕೊಟ್ಟ ಸರಳ ಮಾರ್ಗದಲ್ಲಿ ಅಸಂಖ್ಯಾತ ‌ಭಕ್ತರು ನಡೆಯುತ್ತಿದ್ದಾರೆ. ಆದರೆ ಈ ಪೂಜ್ಯರಿಗೆ ವಿನಯ್ ಕುಲಕರ್ಣಿ ‌ಮಾಡಿದ ಸಮಾಚಾರದಿಂದ ಅವರ ಆತ್ಮ ಕೊರಗಿದೆ. ಅದೆಷ್ಟೋ ನರಳಾಡಿದೆ.

ಅಮಾಯಕರಿಗೆ ಮಾಡಿದ ಮೋಸವನ್ನು ಭಗವಂತ ಕ್ಷಮಿಸಲ್ಲ. ಬರೆದಿಟ್ಟುಕೊಳ್ಳಿ ವಾಮ ಮಾರ್ಗದಿಂದ ಧಾರವಾಡ ಮುರುಘಾ ಮಠ ಪ್ರವೇಶಿಸಿ ವಿಜೃಂಭಣೆಯಿಂದ ಮರೆಯುತ್ತಿರುವ ಕೆಲವರು ಇನ್ನೂ ಅನುಭವಿಸುತ್ತಾರೆ. ಶಿವಯೋಗಿ ಶ್ರೀಗಳು ಎಂದೂ ಕ್ಷಮಿಸಲ್ಲ.


Spread the love

About Laxminews 24x7

Check Also

ಸಾಲ ಪಡೆದಿದ್ದ ಹಣ ಮರಳಿ ಕೊಡದಿದ್ದಕ್ಕೆ ಸ್ವಂತ ಅಕ್ಕ, ಭಾವನಿಂದ ತಂಗಿ-ಮೈದುನನ ಕಿಡ್ನ್ಯಾಪ್

Spread the loveಬೆಂಗಳೂರು: ಸ್ವಂತ ಅಕ್ಕ-ಭಾವನಿಂದಲೇ ತಂಗಿ-ಮೈದುನನ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ ಆರೋಪ ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿ  ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ