Breaking News

ಹಳ್ಳಿಗಳಿಗೂ ಗ್ಯಾಸ್‌ ತಂದ್ರು, ಈಗ ಸಿಟಿಗಳಲ್ಲಿ ಸೌದೆ ಎಲ್ಲಿಂದ ತರೋದು: ಕೇಂದ್ರಕ್ಕೆ ಡಿಕೆಶಿ ಪ್ರಶ್ನೆ

Spread the love

ಬೆಂಗಳೂರು: ಸೌದೆ ಮುಕ್ತ ಭಾರತ ಮಾಡ್ತೀವಿ ಅಂತ ಎಲ್ಲಾ ಕಡೆ ಗ್ಯಾಸ್ (Gas) ತಂದ್ರು. ಹಳ್ಳಿಗಳಲ್ಲೂ ಗ್ಯಾಸ್‌ ಬಂತು. ಈಗ ಸಿಟಿಗಳಲ್ಲಿ ಸೌದೆ ಎಲ್ಲಿಂದ ತರೋದು? ಎಂದು ಡಿಸಿಎಂ ಡಿಕೆ ಶಿವಕುಮಾರ್‌  ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ  ಒಂದು ಪ್ರಶ್ನೆ ಹಾಕ್ತೀನಿ, ಎಲೆಕ್ಷನ್ ನಡೆಯುತ್ತಿದೆ, ಅಚ್ಚೇದಿನ್ ಅಂತ ಹೇಳಿದ್ರು, ಬಂತಾ? ಟೋಲ್ ದರ ಹೆಚ್ಚಳ ಆಗಿದೆ, 28.30 ಸಾವಿರ ಕೋಟಿ ಕಲೆಕ್ಟ್ ಮಾಡ್ತಿದ್ದಾರೆ. ಮೆಡಿಸಿನ್‌ಗೆ 12% ಜಿಎಸ್‌ಟಿ ಹಾಕಿದ್ದಾರೆ. ಪ್ಲಾಸ್ಟಿಕ್‌ ಗೂಡ್ಸ್‌ ಮೇಲೆ ಟನ್‌ಗೆ 7000 ರೂ. ಏರಿಸಿದ್ದಾರೆ, ಪಿವಿಸಿ ಫೈಪ್‌ಗಳಿಗೆ ಟನ್‌ಗೆ 4,000 ರೂ. ಮತ್ತು ಬಿಟುಮಿನ್ ಟನ್‌ಗೆ 6,000 ರೂ. ಬಿಂದ 6,500 ರೂ.ಗೆ ಏರಿಕೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಬೆಲೆ ಏರಿಕೆಯಿಂದ ರೋಡ್ ಕೆಲಸ ಸ್ಟಾಪ್ ಮಾಡಿಸಿದ್ದೇನೆ, ನಾವೇ ಬಿಟುಮಿನ್ ತಯಾರಿಗೆ ಸೂಚಿಸಿದ್ದೇನೆ. ಕಬ್ಬಿಣ, ಸಿಮೆಂಟ್ ಬೆಲೆ ಕೂಡ 5 ರಿಂದ 15% ಹೆಚ್ಚಳ ಆಗಿದೆ. ಒಂದೇ ಬಾರಿಗೆ ಇಷ್ಟು ಏರಿಸಿದ್ರೆ ಹೇಗೆ? ಜನ ಮತ್ತೆ ಸೌದೆಯಿಂದ ಅಡುಗೆ ಮಾಡುವ ಪರಿಸ್ಥಿತಿ ಬಂದಿದೆ. ಸೌದೆ ಮುಕ್ತ ಭಾರತ ಅಂತ ಮಾಡಿದ್ರು, ಎಲ್ಲಾ ಕಡೆ ಗ್ಯಾಸ್ ತಂದ್ರು. ಸಿಟಿ ಅಲ್ಲ ಹಳ್ಳಿಗಳಲ್ಲೂ ಗ್ಯಾಸ್‌ ಬಂದಿದೆ ಅಂದ್ರು. ಈಗ ಸಿಟಿಗಳಲ್ಲಿ ಸೌದೆ ಎಲ್ಲಿಂದ ತರೋದು? ಕಮರ್ಷಿಯಲ್ ಗ್ಯಾಸ್ ಎಲ್ಲಿಂದ ಏರಿಸೋದು? ಎಂದು ಪ್ರಶ್ನೆ ಮಾಡಿದ್ರು.

ಪೋಸ್ಟರ್ ಹಾಕೋಕೆ 36% ಟ್ಯಾಕ್ಸ್ ಹಾಕಿದ್ದಾರೆ. ಕೇಂದ್ರದಿಂದ ಜನರಿಗೆ ಏನು ಉಪಯೋಗವಿದೆ? ನಾನು ಬೇರೆ ರಾಜ್ಯದಲ್ಲಿ ಪ್ರವಾಸ ಮಾಡ್ದೆ ಚುನಾವಣೆಯಲ್ಲಿ ಏನು ಬರುತ್ತೆ ನೊಡೋಣ. ಜನರನ್ನ ಫೂಲ್ ಮಾಡುವ ಕೆಲಸ ಮಾಡ್ತಿದ್ದಾರೆ ನಾವು ಜನರ ಪರ ನಿಲ್ಲಬೇಕು ಎಂದು ಕರೆ ನೀಡಿದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ