Breaking News

ರಂಜಾನ್​ ವೇಳೆ 1 ತಿಂಗಳ ಕಠಿಣ ಉಪವಾಸ ಮಾಡಿದ 10ವರ್ಷದ ಬಾಲಕ,6 ವರ್ಷದ ಬಾಲಕಿ!

Spread the love

ಘಟಪ್ರಭಾ: ಪವಿತ್ರ ರಂಜಾನ್ ಹಬ್ಬದ ಸಂದರ್ಭದಲ್ಲಿ ಒಂದು ಹನಿ ನೀರು ಕುಡಿಯದೆ ಮುಸ್ಲಿಂ ಬಾಂಧವರು ಕಟ್ಟುನಿಟ್ಟಾದ ಉಪವಾಸ ಪಾಲನೆ ಮಾಡುತ್ತಾರೆ.ಇಂತಹ ಕಠಿಣ ಉಪವಾಸ ಒಂದು ತಿಂಗಳವರೆಗೆ ಮಾಡೋದು ಕೆಲವೊಂದು ಸಲ ದೊಡ್ಡವರಿಗೂ ಕಷ್ಟವಾಗುತ್ತದೆ.ಆದರೆ,ಇಂತಹ ಕಠಿಣ ಉಪವಾಸವನ್ನು ಒಂದು ತಿಂಗಳವರೆಗೆ ಕಟ್ಟು ನಿಟ್ಟಾಗಿ ಆಚರಿಸುವ ಮೂಲಕ ಘಟಪ್ರಭಾ ಪಟ್ಟಣದಲ್ಲಿ ಇಬ್ಬರು ಸಹೋದರ,ಸಹೋದರಿ ಗಮನ ಸೆಳೆದಿದ್ದಾರೆ.

ಘಟಪ್ರಭಾ ಪಟ್ಟಣದ ಬಸವ ನಗರದದಲ್ಲಿರುವ ಫಾರೂಖ್ ಅತ್ತಾರ ಎಂಬುವರ ಮಕ್ಕಳಾದ 10ವರ್ಷದ ಪುತ್ರ ಫಹೀಮ್ ಹಾಗೂ 6ವರ್ಷದ ಪುತ್ರಿ ರೂಹಿ ಸೇರಿ ರಂಜಾನ್ ಹಬ್ಬದ ಪ್ರಯುಕ್ತ ಒಂದು ತಿಂಗಳದ ಉಪವಾಸವನ್ನು ಕೈಗೊಂಡಿದ್ದಾರೆ.

ನಾಲ್ಕನೇಯ ತರಗತಿಯಲ್ಲಿ ಓದುತ್ತಿರುವ ಫಹೀಮ್ ಹಾಗೂ ರೂಹಿ ಯುಕೆಜಿ ತರಗತಿಯಲ್ಲಿ ಓದುತ್ತಿದ್ದು,ಕಳೆದ ವರ್ಷವು ರಂಜಾನ್ ವೇಳೆ ಸ್ವಲ್ಫ ದಿ‌ನ ಉಪವಾಸ ಆಚರಿಸಿದ್ದರು.ಆದರೆ ಈ ಬಾರಿ ತಂದೆ ತಾಯಿ ಮುಂದೆ ಪಟ್ಟು ಹಿಡಿದು ರಂಜಾನ್ ಮೊದಲ ದಿನದಿಂದಲೂ ಹಿಡಿದು 30ದಿನಗಳ ಕಾಲ ಕಟ್ಟು ನಿಟ್ಟಾಗಿ ಉಪವಾಸಗಳನ್ನು ಆಚರಿಸಿದ್ದಾರೆ.ಶನಿವಾರದಂದು ರಂಜಾನ್ ಹಬ್ಬವಾದ್ದರಿಂದ ಉಪವಾಸ ಕೊನೆಗೊಳಿಸಲಿದ್ದಾರೆ.

ಪ್ರತಿದಿನ ನಸುಕಿನ ಜಾವ 4 ಗಂಟೆಗೆ ತಂದೆ-ತಾಯಿ ಜೊತೆಗೆ ಎದ್ದು ಇಬ್ಬರೂ ಮಕ್ಕಳು ಮನೆಯವರ ಜೊತೆ ಪ್ರಾರ್ಥನೆ ಸಲ್ಲಿಸುತ್ತಾರೆ.ಮಗ,ಮಗಳ ಉಪವಾಸ ಕಂಡು ಮನೆಯವರು ಸಹ ಹೆಮ್ಮೆಪಡುತ್ತಿದ್ದಾರೆ.ಕಠಿಣ ಉಪವಾಸಕ್ಕೆ ಸಮಾಜದವರು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಬಾಲಕ ಮತ್ತು ಬಾಲಕಿಯ ತಂದೆ ಫಾರೂಖ ಅತ್ತಾರ ಮಗನ,ಮಗಳ ಬಗ್ಗೆ ನನಗೆ ಮಾತ್ರವಲ್ಲ,ಇಡೀ ಕುಟುಂಬಕ್ಕೆ ಹೆಮ್ಮೆ ಇದೆ. ಇಡೀ ಬಡಾವಣೆ ಜನರೂ ನನ್ನ ಮಕ್ಕಳ ಬಗ್ಗೆ ಹೆಮ್ಮೆ ಪಡುತ್ತಿರುವುದು ಕಂಡು ಸಂತೋಷವಾಗುತ್ತದೆ ಎಂದಿದ್ದಾರೆ.
ಈ ಭಾರಿ ಹಲವಾರು ಚಿಕ್ಕ ಮಕ್ಕಳು ರಂಜಾನ್ ತಿಂಗಳ ಉಪವಾಸವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿದ್ದು ಕಂಡು ಬಂದಿದೆ.


Spread the love

About Laxminews 24x7

Check Also

ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅಭಿವೃದ್ಧಿಯ ಬಜೆಟ್: ಸಂಸದೆ ಪ್ರಿಯಂಕಾ ಜಾರಕಿಹೊಳಿ

Spread the loveಬೆಳಗಾವಿ: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಜನಪರವಾದ ಮತ್ತು ರಾಜ್ಯದ ಅಭಿವೃದ್ಧಿ ಯ ಬಜೆಟ್ ಆಗಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ