Breaking News

ಸಾಂಬ್ರಾ ವಿಮಾನ ನಿಲ್ದಾಣ| ಸೌಲಭ್ಯ ಒದಗಿಸಿದರೆ ಮೇಲ್ದರ್ಜೆಗೆ: ಶೆಟ್ಟರ್‌ಗೆ ಪತ್ರ

Spread the love

ಬೆಳಗಾವಿ: ‘ಅಗತ್ಯ ಸೌಲಭ್ಯ ಒದಗಿಸಿದರೆ, ತಾಲ್ಲೂಕಿನ ಸಾಂಬ್ರಾ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೆ ಏರಿಸಲು ಸಾಧ್ಯ’ ಎಂದು ಕೇಂದ್ರ ವಿಮಾನಯಾನ ಸಚಿವ ರಾಮಮೋಹನ ನಾಯ್ಡು ತಿಳಿಸಿದ್ದಾರೆ.

ಈ ಸಂಬಂಧ ಸಂಸದ ಜಗದೀಶ ಶೆಟ್ಟರ್‌ ಅವರಿಗೆ ಪತ್ರ ಬರೆದಿದ್ದಾರೆ.

ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸಲು ರನ್‌ವೇ ಉದ್ದಳತೆ, ಇನ್‌ಸ್ಟ್ರುಮೆಂಟ್‌ ಲ್ಯಾಂಡಿಂಗ್‌ ಸಿಸ್ಟಮ್‌, ಲೈಟಿಂಗ್‌ ವ್ಯವಸ್ಥೆ ಮತ್ತಿತರ ವಿಷಯ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ.

ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಬರೆದ ಪತ್ರಕ್ಕೆ ಪೂರಕವಾಗಿ ಸಂಸದ ಜಗದೀಶ ಶೆಟ್ಟರ್‌ ಅವರೂ ಪತ್ರ ಬರೆದು ಮೇಲ್ದರ್ಜೆಗೇರಿಸುವ ಬಗ್ಗೆ ಪ್ರಸ್ತಾಪಿಸಿದ್ದರು.


Spread the love

About Laxminews 24x7

Check Also

ಹೆಣ್ಣು ಮಗು ಹುಟ್ಟಿದಕ್ಕೆ 15 ದಿನದ ಹಸುಗೂಸಿಗೆ ವಿಷ ನೀಡಿ ಕೊಲೆ: ಪಾಪಿ ತಂದೆಯ ಬಂಧನ…!

Spread the loveಬೆಳಗಾವಿ: ಜಿಲ್ಲೆಯ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 15 ದಿನದ ನವಜಾತ ಶಿಶುವಿನ ಸಾವಿನ ಪ್ರಕರಣಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ