ದಾವಣಗೆರೆ | ಯಾರಿಗೆ ಟಿಕೆಟ್‌ ಕೊಟ್ಟರೂ ಬಿಜೆಪಿ ಗೆಲ್ಲಿಸ್ತೇವೆ – ಐವರು ಟಿಕೆಟ್ ಆಕಾಂಕ್ಷಿಗಳಿಂದ ಒಗ್ಗಟ್ಟು ಪ್ರದರ್ಶನ

Spread the love

ದಾವಣಗೆರೆ: ಶಾಮನೂರು ಶಿವಶಂಕರಪ್ಪ  ನಿಧನದ ಬಳಿಕ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ  ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಗೆಲ್ಲಿಸುತ್ತೇವೆ ಎಂದು ಐವರು ಟಿಕೆಟ್ ಆಕಾಂಕ್ಷಿಗಳು ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಬಿಜೆಪಿಯ  ಎರಡು ಬಣದ ನಾಯಕರು ಒಂದಾಗಿದ್ದಾರೆ. ಐವರು ಆಕಾಂಕ್ಷಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿ, ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಅಜಯ್ ಕುಮಾರ್, ಯಶವಂತರಾವ್ ಜಾದವ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ ಮತ್ತು ದೇವರಮನೆ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಭಾಗಿಯಯಾಗಿದ್ದರು. ಈ ವೇಳೆ ಯಾರಿಗೆ ಟಿಕೆಟ್ ಕೊಟ್ಟರು ಬಿಜೆಪಿ ಗೆಲ್ಲಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಆ ಬಣ ಈ ಬಣ ಅಂತ ಇಲ್ಲ ಎಲ್ಲವು ಸರಿ ಹೋಗಿದೆ ಎಂದು ಪರೋಕ್ಷವಾಗಿ ಬಿ.ಜಿ ವಿಜಯ್ ಕುಮಾರ್ ಅವರಿಗೆ ಇದೇ ವೇಳೆ ಟಾಂಗ್ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಮೀಟಿಂಗ್‌ನಲ್ಲಿ ಬಿ.ಜಿ ವಿನಯ್ ಕುಮಾರ್ ಹೆಸರು ಪ್ರಸ್ತಾಪವಾಗಿದೆ ಎನ್ನಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಅವರು ಸ್ಪರ್ಧಿಸಿದ್ದರು.


Spread the love

About Laxminews 24x7

Check Also

ಜಮೀರ್‌ ಬಳಿ ಕ್ಷಮೆ ಕೇಳದೇ ಇದ್ರೆ ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಎಫೆಕ್ಟ್ ಆಗುತ್ತೆ: ಮಲ್ಲಿಕಾರ್ಜುನ್‌ಗೆ ಸಿರಾಜ್ ಅಹ್ಮದ್‌ ವಾರ್ನಿಂಗ್‌

Spread the loveದಾವಣಗೆರೆ: ಜಮೀರ್ ಅಹ್ಮದ್‌ ಅವರ ಬಗ್ಗೆ ಏನಾದರೂ ಮಾತನಾಡಿದರೆ ಜನ ಸಹಿಸುವುದಿಲ್ಲ. ಕೂಡಲೇ ಜಮೀರ್‌ ಅವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ