Breaking News

ಲಾಕ್‍ಡೌನ್ಮಾತಿಗಷ್ಟೆ ಎನ್ನುವಂತಾಗಿದೆ.ನೆಲಮಂಗಲ ಟೋಲ್‍ನಲ್ಲಿ ನಡೆಯುತ್ತಿಲ್ಲ ವಾಹನಗಳ ತಪಾಸಣೆ

Spread the love

ನೆಲಮಂಗಲ: ಲಾಕ್‍ಡೌನ್‍ಗೂ ಕ್ಯಾರೆ ಎನ್ನದೆ ವಾಹನಗಳು ಬೆಂಗಳೂರಿನತ್ತ ಹೆಚ್ಚು ವಾಹನಗಳು ಆಗಮಿಸುತ್ತಿದ್ದು, ಸಿಬ್ಬಂದಿ ಸಹ ತಪಾಸಣೆ ನಡೆಸದೆ ಬಿಡುತ್ತಿದ್ದಾರೆ. ಇದರಿಂದಾಗಿ ಎಂದಿನಂತೆ ನೆಲಮಂಗಲ ಟೋಲ್‍ನಲ್ಲಿ ವಾಹನ ಸಂಚಾರ ಜೋರಾಗಿಯೇ ನಡೆಯುತ್ತಿದೆ.

ನೆಲಮಂಗಲ ಟೋಲ್‍ನಲ್ಲಿ ವಾಹನಗಳ ತಪಾಸಣೆ ನಡೆಸಿ, ವಾಹನಗಳ ಸಂಚಾರಕ್ಕೆ ಸಿಬ್ಬಂದಿ ಹಾಗೂ ಪೊಲೀಸರು ಬ್ರೇಕ್ ಹಾಕಿಲ್ಲ. ಹೀಗಾಗಿ ಟೋಲ್‍ನಲ್ಲಿ ವಾಹನಗಳ ಸಂಚಾರ ಎಂದಿನಂತೆ ಜೋರಾಗಿದೆ. ಲಾಕ್‍ಡೌನ್ ಸಮಯದಲ್ಲೂ ಬರೋರು ಬರಬಹುದು, ಹೋಗೋರು ಹೋಗಬಹುದು ಎನ್ನವಂತಾಗಿದೆ. ಟೋಲ್‍ನ ಮುಖ್ಯರಸ್ತೆಗಳನ್ನು ಬಂದ್ ಮಾಡಿರುವುದನ್ನು ಬಿಟ್ರೆ ಪೊಲೀಸರು ಇನ್ನಾವುದೇ ರೀತಿಯ ತಪಾಸಣೆಯನ್ನು ನಡೆಸುತ್ತಿಲ್ಲ.

ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಓಪನ್ ಇರುವುದರಿಂದ ಹೆಚ್ಚುವ ವಾಹನಗಳು ಬೆಂಗಳೂರಿನತ್ತ ಆಗಮಿಸುತ್ತಿವೆ. ಕಾರ್, ಬೈಕ್, ಆಟೋ, ಟ್ರಕ್, ಗೂಡ್ಸ್ ಗಾಡಿಗಳ ಓಡಾಟ ಜೋರಾಗಿದ್ದು, ಪೊಲೀಸರು ಯಾವುದೇ ತಪಾಸಣೆ ನಡೆಸುತ್ತಿಲ್ಲ. ಲಾಕ್‍ಡೌನ್ ಜಾರಿಯಾದ ಮೇಲೆ ಯಾರು ಹೋಗೋ ಹಾಗಿಲ್ಲ, ಬರೋ ಹಾಗಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೆ ಅದೆಲ್ಲ ಮಾತಿಗಷ್ಟೆ ಎನ್ನುವಂತಾಗಿದೆ


Spread the love

About Laxminews 24x7

Check Also

ಸಣ್ಣ ಗುತ್ತಿಗೆದಾರರಿಂದ ಕಮಿಷನ್‌ – ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಶೇಗಜಿ ಅಮಾನತು

Spread the loveಬೆಂಗಳೂರು: ಗುತ್ತಿಗೆದಾರರಿಂದ ಕಮಿಷನ್‌ ಪಡೆದ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಜಗನ್ನಾಥ್ ಶೇಗಜಿ ಮತ್ತು ನಿರ್ದೇಶಕ ಚಿಂಚಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ