Breaking News

ಯಾರದ್ದೋ ಕೈಕಾಲು ಹಿಡಿದು ನಾ ಬಿಜೆಪಿಗೆ ಸೇರುವುದಿಲ್ಲ: ಯತ್ನಾಳ್‌

Spread the love

ನವದೆಹಲಿ: ಬಿಜೆಪಿ ಹೈಕಮಾಂಡ್ ನಾಯಕರ ಭೇಟಿಗೆಂದು ನಾನು ದೆಹಲಿಗೆ ಬಂದಿಲ್ಲ. ಯಾರದ್ದೋ ಕೈಕಾಲು ಹಿಡಿದು ಬಿಜೆಪಿ ಸೇರಲ್ಲ. ಬಿಜೆಪಿಗೆ ತಗೊಳ್ಳಿ ಅಂತಾ ಯಾರ ಬಳಿಯೂ ಹೋಗಲ್ಲ. ನಾವು ಸ್ವಾಭಿಮಾನದಿಂದ ಬದುಕಿರೋರು ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿ ದ್ದಾರೆ. ಬಿಜೆಪಿ ಸೇರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಭ್ರಷ್ಟ ಕುಟುಂಬದ ನೇತೃತ್ವವನ್ನು ನಾವು ಒಪ್ಪಲ್ಲ. ರಾಜ್ಯ ದಲ್ಲಿ ಭ್ರಷ್ಟ ಕುಟುಂಬ ಎಲ್ಲಿವರೆಗೆ ಇರುತ್ತೋ, ಅಲ್ಲಿವ ರೆಗೂ ಬಿಜೆಪಿ ಸೇರುವ ಪ್ರಶ್ನೆ ಇಲ್ಲ. ನಾನೇ ಪ್ರಾದೇಶಿಕ ಪಕ್ಷ ಮಾಡ್ತಿನಿ. 2028ಕ್ಕೆ ಸಿಎಂ ಆಗ್ತಿನಿ. ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು. ಮಗನ ಮದುವೆ ನಿಮಿತ್ತ ದೆಹಲಿಗೆ ಬಂದಿದ್ದೇನೆ ಹಳೆಯ ಸ್ನೇಹಿತರ ಭೇಟಿಗೆ ಬಂದಿದ್ದೇನೆ. ಯಾವ ಬಿಜೆಪಿಗರನ್ನೂ ಭೇಟಿ ಮಾಡಲ್ಲ, ಪಕ್ಷ ಸೇರುವ ಬಗ್ಗೆ ಚರ್ಚೆ ಮಾಡಲ್ಲ ಎಂದರು.


Spread the love

About Laxminews 24x7

Check Also

ನಮ್ಗೆ 1 ವೋಟು, ಅಂಬಾನಿಗೆ 1 ಲಕ್ಷ ವೋಟ್‌ ಇರುತ್ತಾ? – ವಿಪಕ್ಷಗಳಿಗೆ ತೇಜಸ್ವಿ ಸೂರ್ಯ ತರಾಟೆ

Spread the loveನವದೆಹಲಿ: ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸಲು ಕ್ಷೇತ್ರ ಪುನರ್‌ವಿಂಗಡಣೆಗಾಗಿ ಸಂವಿಧಾನ (131ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ