Breaking News

ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳ ಮೆಡಿಸನ್‌ ಟೆಸ್ಟ್‌ಗೆ ಆರೋಗ್ಯ ಸಚಿವ ಸೂಚನೆ

Spread the love

ಬೆಂಗಳೂರು: ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳ ಮೆಡಿಸನ್‌ಗಳ ಪರೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕೇಂದ್ರದ ಪ್ರಧಾನ ಮಂತ್ರಿ ಜನೌಷಧಿ ಯೋಜನೆಯನ್ನ ರಾಜ್ಯ ಸರ್ಕಾರ ಟಾರ್ಗೆಟ್ ಮಾಡಿದೆಯೇ ಎಂಬ ಪ್ರಶ್ನೆ ಮೂಡಿದೆ.

ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಇದ್ದ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನ ತೆರವು ಮಾಡುವ ನಿರ್ಧಾರಕ್ಕೆ ಸಾಕಷ್ಟು ವಿವಾದ, ವಿರೋಧ ವ್ಯಕ್ತವಾಯಿತು. ಕೋರ್ಟ್ ಕೂಡ ತೆರವು ಮಾಡದಂತೆ ಸೂಚಿಸಿತು. ಇದಾದ ಬಳಿಕವೂ ರಾಜ್ಯ ಸರ್ಕಾರ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳ ವಿಚಾರದಲ್ಲಿ ಮತ್ತೊಂದು ನಿರ್ಧಾರ ಕೈಗೊಂಡು ವಿವಾದಕ್ಕೆ ಕಾರಣ ಆಗುತ್ತಿದೆ. ರಾಜ್ಯಾದ್ಯಂತ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನ ಮೆಡಿಸನ್‌ಗಳನ್ನ ಟೆಸ್ಟ್ ಮಾಡುವುದಕ್ಕೆ ಆರೋಗ್ಯ ಸಚಿವರು ಸೂಚನೆ ಕೊಟ್ಟಿದ್ದಾರೆ. ಕಾರಣ ಕರ್ನಾಟಕದ ಸ್ಟೇಟ್ ಫಾರ್ಮಾಸಿಸ್ಟ್ ಸಂಘಟನೆ ಒತ್ತಾಯಕ್ಕೆ ಮಣಿದು ಎಂಬುದು ಬಯಲಾಗ್ತಿದೆ.‌

ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳಲ್ಲಿ ಬ್ರಾಂಡೆಡ್ ಔಷಧಿಗಳನ್ನ ಮಾರಾಟ ಮಾಡ್ತಾ ಇದ್ದಾರೆ ಚೆಕ್ ‌ಮಾಡಿ ಅಂತಾ ಕರ್ನಾಟಕ ಫಾರ್ಮಾಸಿಸ್ಟ್ ಸಂಘ ಆರೋಗ್ಯ ಸಚಿವರಿಗೆ ಮನವಿ ಮಾಡಿದೆ. ಬ್ರಾಂಡೆಡ್ ಔಷಧಿ ಮಾರಾಟ ಮಾಡಿದ್ರೆ ಫಾರ್ಮಾಸಿಸ್ಟ್‌ರಿಗೆ ಲಾಸ್ ಆಗುತ್ತೆ ಎಂಬುದು ಫಾರ್ಮಾಸಿಸ್ಟ್ ಸಂಘಟನೆ ವಾದ. ಹೀಗಾಗಿ, ಟೆಸ್ಟ್‌ಗೆ ಸೂಚನೆ ಕೊಟ್ಟಿದ್ದೇವೆ ಅಂತಾರೆ ಆರೋಗ್ಯ ಸಚಿವರು.

ಜನೌಷಧಿ ಕೇಂದ್ರಗಳ ಔಷಧಿ ಟೆಸ್ಟ್ ಮಾಡ್ತಾ ಇದ್ದಾರೆ. ಪ್ರತಿ ಎರಡು ತಿಂಗಳು ಮಾಡ್ತಾರೆ ಮಾಡಲಿ, ತಪ್ಪು ಇದ್ದರೆ ತಿಳಿಸಲಿ. ಆದರೆ, ಚೆನ್ನಾಗಿ ನಡೆಯುತ್ತಿವೆ. ಸಮಸ್ಯೆ ಆಗೋದು ಬೇಡ ಎಂದು ‌ಕೇಂದ್ರದ‌ ಮಾಲೀಕರು ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ