ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ವಿದೇಶಾಂಗ ನೀತಿಯಿಂದ ದೇಶ ಹಾಳು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಬೇಕು ಎಂದು ರಾಜ್ಯಸಭೆ ವಿಪ ನಾಯಕರೂ ಆದ ಎಐಸಿಸಿ ಅಧ್ಯ ಮಲ್ಲಿಕಾರ್ಜುನ ರ್ಖಗೆ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಇಲಾಖೆಗಳ 1069.41 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ಮತ್ತು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಟ್ರಂಪ್ ಒಬ್ಬ ಡಿಕ್ಟೇಟರ್, ಮೋದಿ ಅವರ ಗುಲಾಮ. ರಷ್ಯಾದಿಂದ ಒಂದು ತಿಂಗಳ ಅವಧಿಗೆ ಮಾತ್ರ ತೈಲ ಖರೀದಿಗೆ ಅಮೆರಿಕ ಅನುಮತಿ ನೀಡಿದೆ. ಅಮೆರಿಕದವರು ಹೇಳಿದಂತೆ ಮೋದಿ ಕೇಳುತ್ತಿದ್ದಾರೆ. ಟ್ರಂಪ್ ಜತೆ ಸ್ನೇಹ ಬೆಳೆಸಿ ನಮ್ಮ ದೇಶವನ್ನು ಅಡವು ಇಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಧ್ಯಪ್ರಾಚ್ಯದಲ್ಲಿ ನಡೆದಿರುವ ಯುದ್ಧದ ಬಗ್ಗೆ ಪ್ರಸ್ತಾಪಿಸಿದ ರ್ಖಗೆ, ಮೋದಿ ಇಸ್ರೇಲ್ಗೆ ಹೋಗಿ ಬಂದ ನಂತರ ಅದು ಇರಾನ್ ಮೇಲೆ ಬಾಂಬ್ ಹಾಕಿತು. ದೇಶದ ಮುಖ್ಯಸ್ಥ ಖಮೇನಿಯನ್ನು ಅಮೆರಿಕ ಹತ್ಯೆ ಮಾಡಿತು. ದೇಶದ ಮುಖ್ಯಸ್ಥನನ್ನು ಹತ್ಯೆ ಮಾಡಿದರೆ ಅಲ್ಲಿನವರು ಶಾಂತಿಯಿಂದ ಇರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಭಾರತದ ಶೇ.65 ರೈತರು ಕೃಷಿ ಅವಲಂಬಿತರಾಗಿದ್ದರೆ, ಅಮೆರಿಕದದಲ್ಲಿ ಶೇ.3 ಇದ್ದಾರೆ. ನಮ್ಮ ದೇಶದ ಉತ್ಪನ್ನಕ್ಕೆ ಅಮೆರಿಕದಲ್ಲಿ ಟ್ಯಾಕ್ಸ್ ಇದೆ. ಆದರೆ ಅಮೆರಿಕದ ಉತ್ಪನ್ನಗಳಿಗೆ ನಾವು ತೆರಿಗೆ ಹಾಕುವಂತಿಲ್ಲ. ಟ್ರಂಪ್ ನನ್ನ ಸ್ನೇಹಿತ ಎನ್ನುತ್ತಾರೆ. ಆದರೆ ರಷ್ಯಾದಿಂದ ತೈಲ ಖರೀದಿಸಿದರೆ ನಿಮ್ಮ ಮೇಲೆ ಟ್ಯಾಕ್ಸ್ ಹಾಕುತ್ತೇನೆ ಎಂದು ಟ್ರಂಪ್ ಧಮ್ಕಿ ಹಾಕುತ್ತಾರೆ. ಟ್ರಂಪ್ ಜತೆ ನಿತ್ಯ ಮಾತನಾಡುವುದಾಗಿ ಮೋದಿ ಹೇಳುತ್ತಾರೆ. ಎಫ್ಟಿನ್ ಫೈಲ್ನಲ್ಲಿ ಯಾರ್ಯಾರು ಎಲ್ಲಿ ಹೋಗಿದ್ದರು ಎಂಬ ಮಾಹಿತಿ ಇದೆಯಂತೆ. ಅದನ್ನು ಇಟ್ಟುಕೊಂಡೇ ಟ್ರಂಪ್ ಮೋದಿಗೆ ಹೆದರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಟೀಕೆ ಬಿಟ್ಟು ಬಿಜೆಪಿಗಿಲ್ಲ ಅನ್ಯ ಕೆಲಸ
ಬಿಜೆಪಿಯವರಿಗಂತೂ ಕೆಲಸವೇ ಇಲ್ಲ. ಸೋನಿಯಾ, ರಾಹುಲ್, ನನಗೆ, ಪ್ರಿಯಾಂಕ್, ಸಿದ್ದರಾಮಯ್ಯ, ಶಿವಕುಮಾರ್ಗೆ ಬೈಯ್ಯುವುದೇ ಕೆಲಸ. ನಮ್ಮ ಸರ್ಕಾರ ಇದ್ದಾಗ ಮಾಡಿದ ಕೆಲಸಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ ಎಂದು ಮಲ್ಲಿಕಾರ್ಜುನ ರ್ಖಗೆ ಹೇಳಿದರು. ಕಲಬುರಗಿ ಏರ್ಪೋರ್ಟ್ಗಾಗಿ 1000 ಎಕರೆ ಜಮೀನು ನೀಡಿದ ಶ್ರೀನಿವಾಸ ಸರಡಗಿ ಗ್ರಾಮಸ್ಥರಿಗೆ ಇಲ್ಲಿಂದಲೇ ನಮಸ್ಕಾರ ಮಾಡುತ್ತೇನೆ. ಈ ವಿಮಾನ ನಿಲ್ದಾಣ ಮೂಲಕ ರ್ಖಗೆ ಜಾಸ್ತಿ ಓಡಾಡ್ತಾರೆ ಎಂದು ಬಂದ್ ಮಾಡಲಾಗಿದೆ. ನಾನೇನು ದಿನಾ ಬರ್ತೀನಾ ಎಂದು ಪ್ರಶ್ನಿಸಿದರು. ದೇಶದ ಯುವಕರ ಭವಿಷ್ಯ ಉಜ್ವಲವಾಗಬೇಕಾದರೆ ಯೋಜನೆಗಳು ಬರಬೇಕು. ಬಿಜೆಪಿ ಹಾಗೂ ಆರೆಸ್ಸೆಸ್ನ ಕೆಲವರು ಬ್ರಿಟಿಷರ ಕೆಳಗೆ ಕೆಲಸ ಮಾಡುತ್ತಿದ್ದವರು. ದೇಶ ಸ್ವಾತಂತ್ರ್ಯಕ್ಕಾಗಿ ಹನಿ ರಕ್ತ ಹರಿಸಿಲ್ಲ. ನಾನು ಯಾರಿಗೂ ಬೈಯುತ್ತಿಲ್ಲ. ನಮ್ಮನ್ನು ಟೀಕಿಸುವ ಬಿಜೆಪಿ ಮತ್ತು ಆರೆಸ್ಸೆಸ್ನವರಿಂದ ನೀವು ಎಚ್ಚರದಿಂದ ಇರಬೇಕು ಎಂದು ಹೇಳಿದರು. ಚಿತ್ತಾಪುರದ ಒಬ್ಬ ಶಾಸಕ ಇಡೀ ದೇಶದ ಜನರ ಸಮಸ್ಯೆ ಬಗ್ಗೆ ಧ್ವನಿ ಎತ್ತುವುದನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ ಎಂದು ಪುತ್ರ, ಸಚಿವ ಪ್ರಿಯಾಂಕ್ ಕಾರ್ಯವೈಖರಿಯನ್ನು ಕೊಂಡಾಡಿದರು.
Laxmi News 24×7