Breaking News

ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಅಶೋಕ ಪಟ್ಟಣ

Spread the love

ರಾಮದುರ್ಗ:ಸುರೇಬಾನ ಉಪ ಠಾಣೆಯನ್ನು 2018ರಲ್ಲಿಯೇ ಮೇಲ್ದರ್ಜೆಗೇರಿಸಿ, ಪೊಲೀಸ್ ಠಾಣೆಯಾಗಿ ಪರಿವರ್ತನೆ ಮಾಡಿಸಿದ್ದೇನೆ. ಈಗ ಮತ್ತೆ ಅದರ ಕಟ್ಟಡ ನಿರ್ಮಾಣ ಕಾಮಗಾರಿಗೂ ಸಹ ಅಧಿಕಾರದ ಅವಧಿಯಲ್ಲಿ ಚಾಲನೆ ನೀಡಿದ್ದೇನೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ತಾಲೂಕಿನ ಸುರೇಬಾನ ಪೊಲೀಸ್ ಠಾಣೆಗೆ 1.80 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪೊಲೀಸರು ಹೆಲ್ಮೆಟ್ ಹಾಕುವಂತೆ ಸೂಚಿಸಿದರೂ ಧರಿಸದೇ ವಾಹನ ಚಲಾಯಿಸುವುದು ಸರಿಯಲ್ಲ. ಕಾನೂನು ಪಾಲನೆಯಿಂದ ಅಮೂಲ್ಯವಾದ ಜೀವ ರಕ್ಷಣೆಯಾಗುತ್ತದೆ ಎಂದರು.
ಬೆಳಗಾವಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ ಮಾತನಾಡಿ, ಅಶೋಕ ಪಟ್ಟಣ ಅವರ ಪ್ರಯತ್ನದ ಲವಾಗಿ ಸುರೇಬಾನ ಪೊಲೀಸ್ ಠಾಣೆಗೆ ಸಿಬ್ಬಂದಿ ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ ಎಂದರು.
ಗುತ್ತಿಗೆದಾರ ಬಿ.ಎಂ.ಪಾಟೀಲ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಬಿ.ರಂಗನಗೌಡ್ರ, ಮುಖಂಡರಾದ ಪರಪ್ಪ ಜಂಗವಾಡ, ಜಿ.ಎಚ್.ಹಣಸಿ, ಸಿದ್ದಲಿಂಗಪ್ಪ ಸಿಂಗಾರಗೊಪ್ಪ, ಜಹೂರ್ ಹಾಜಿ, ಸುರೇಬಾನ  ಅಶ್ರ್ ಬಂದಗಿ, ವಿನಾಯಕ ಬಡಿಗೇರ, ಸುರೇಶ ಬೆಂಡೆಗುಂಬಳ, ಸವಿತಾ ಮುನ್ಯಾಳ, ಗುರುರಾಜ ಕಲಬುರಗಿ ಇತರರಿದ್ದರು.

Spread the love

About Laxminews 24x7

Check Also

ನಾರಾಯಣ ಪೇಟೆಯ ವಿಠ್ಠಲ ಪಾಂಡುರಂಗ ರುಕ್ಮಿಣಿ ದೇವರ ರಥೋತ್ಸವ

Spread the loveರಾಮದುರ್ಗ: ನಗರದ ನಾರಾಯಣ ಪೇಟೆಯ ವಿಠ್ಠಲ ಹರಿಮಂದಿರದಲ್ಲಿ ಸಪ್ತಾಹ ಮಹೋತ್ಸವ ಹಾಗೂ ಪಾಂಡುರಂಗ ದೇವರ ರಥೋತ್ಸವ ಭಕ್ತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ