Breaking News

ಸಾಯಿ ಸ್ಪೋರ್ಟ್ಸ್ ತಂಡಕ್ಕೆ ಸುಳೇಭಾವಿ ಚಾಂಪಿಯನ್ಸ್ ಟ್ರೋಫಿ

Spread the love

ಬೆಳಗಾವಿ : ಸುಳೇಭಾವಿ ಗ್ರಾಮದಲ್ಲಿ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ “ಸುಳೇಭಾವಿ ಚಾಂಪಿಯನ್ಸ್ ಟ್ರೋಫಿ” ಹಾಫ್ ಪಿಚ್ ಕ್ರಿಕೆಟ್ ಪಂದ್ಯಾವಳಿಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಪಂದ್ಯಾವಳಿಯ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ, ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಶ್ರೀ ಸಾಯಿ ಸ್ಪೋರ್ಟ್ಸ್, ಸುಳೇಭಾವಿ ತಂಡಕ್ಕೆ ಯುವ ಮುಖಂಡ ಮೃಣಾಲ ಹೆಬ್ಬಾಳಕರ್ ಭಾನುವಾರ ಸಂಜೆ ಪ್ರಶಸ್ತಿ ವಿತರಿಸಿದರು.

ದ್ವಿತೀಯ ಸ್ಥಾನ ಪಡೆದ ಸುಳೇಭಾವಿ ಈಗಲ್ಸ್ ಹಾಗೂ ತೃತೀಯ ಸ್ಥಾನ ಪಡೆದ ಚಂದನ್ ಸ್ಪೋರ್ಟ್ಸ್, ಮಾರಿಹಾಳ ತಂಡದವರಿಗೂ ಪ್ರಶಸ್ತಿ ನೀಡಿ, ಅಭಿನಂದಿಸಲಾಯಿತು.

ಕ್ರೀಡಾ ಸ್ಫೂರ್ತಿ ಮೆರೆದ ಎಲ್ಲಾ ಆಟಗಾರರಿಗೆ ಹಾಗೂ ಪಂದ್ಯಾವಳಿಯ ಯಶಸ್ಸಿಗೆ ಕಾರಣರಾದ ಲಕ್ಷ್ಮೀ ತಾಯಿ ಫೌಂಡೇಷನ್‌ನ ಪದಾಧಿಕಾರಿಗಳಿಗೆ ಅವರು ಧನ್ಯವಾದ ಸಲ್ಲಿಸಿದರು.


Spread the love

About Laxminews 24x7

Check Also

ಅಂತರರಾಷ್ಟ್ರೀಯ ರೋಬೋಟಿಕ್ಸ್ ಸ್ಪರ್ಧೆ ಗೆದ್ದ ಬೆಳಗಾವಿ ವಿದ್ಯಾರ್ಥಿಗಳು

Spread the love ಬೆಳಗಾವಿ : ನಗರದ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ಒಬ್ಬರು ವಿದ್ಯಾರ್ಥಿಗಳು ಇಂಡೋನೇಷ್ಯಾದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ