Breaking News

ಯುಗಾದಿ ಸಂಭ್ರಮಕ್ಕೆ ‘ಕಾಯಕ ಕಟ್ಟೆ’ ಸಾಥ್: ಬೆಳಗಾವಿಯಲ್ಲಿ ಮಹಿಳಾ ಉದ್ಯಮಿಗಳ ಕರಕುಶಲ ವಸ್ತುಗಳ ಬೃಹತ್ ಪ್ರದರ್ಶನ

Spread the love

ಬೆಳಗಾವಿಯ ಲಿಂಗಾಯತ ಭವನದಲ್ಲಿ ಇಂದು ಮಹಿಳಾ ಶಕ್ತಿಯ ದರ್ಶನವಾಯಿತು. ಯುಗಾದಿ ಹಬ್ಬದ ನಿಮಿತ್ತ ‘ಕಾಯಕ ಕಟ್ಟೆ’ ಮಹಿಳಾ ಉದ್ಯಮಿಗಳ ಬಳಗ ಹಮ್ಮಿಕೊಂಡಿರುವ 5ನೇ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಸ್ಥಳೀಯ ಮಹಿಳಾ ಸಾಧಕಿಯರು ಸಿದ್ಧಪಡಿಸಿದ ವೈವಿಧ್ಯಮಯ ಉತ್ಪನ್ನಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಿಳಾ ಜಿಲ್ಲಾ ಘಟಕದ ಸಹಯೋಗದಲ್ಲಿ ಬೆಳಗಾವಿಯ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಈ ವಿಶೇಷ ಮೇಳವನ್ನು ಆಯೋಜಿಸಲಾಗಿದೆ. ದೇವಿ ಕಲೆಕ್ಟಿವ್ ಸಂಸ್ಥಾಪಕಿ ರೂಪಾ ಬಾಲಚಂದ್ರ ಬಾದಲ್ ಅವರು ದೀಪ ಬೆಳಗುವ ಮೂಲಕ ಮೇಳಕ್ಕೆ ಚಾಲನೆ ನೀಡಿದರು. ಈ ಪ್ರದರ್ಶನದಲ್ಲಿ ಸುಮಾರು 30ಕ್ಕೂ ಹೆಚ್ಚು ಮಳಿಗೆಗಳಿದ್ದು, ಮಹಿಳಾ ಉದ್ಯಮಿಗಳು ತಾವು ಮನೆಯಲ್ಲೇ ತಯಾರಿಸಿದ ಸಾಂಪ್ರದಾಯಿಕ ಉಡುಗೆ-ತೊಡುಗೆಗಳು, ಕರಕುಶಲ ವಸ್ತುಗಳು ಹಾಗೂ ತಿನಿಸುಗಳನ್ನು ಪ್ರದರ್ಶನಕ್ಕಿರಿಸಿದ್ದಾರೆ. ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಮೇಳವು ಸಾರ್ವಜನಿಕರಿಗೆ ಮುಕ್ತವಾಗಿದೆ.

ಯುಗಾದಿ ಹಬ್ಬದ ಪ್ರಯುಕ್ತ ಮಹಿಳೆಯರಿಗಾಗಿ ಈ ಬಾರಿ 5ನೇ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ತಳಮಟ್ಟದಿಂದ ಕಷ್ಟಪಟ್ಟು ಉದ್ಯೋಗವನ್ನು ಸ್ಥಾಪಿಸಿ ಸಾಧಿಸಿದ ಸಾಧಕಿಯರನ್ನು ಈ ಪ್ರದರ್ಶನದ ಉದ್ಘಾಟನೆಗೆ ಅತಿಥಿಗಳಾಗಿ ಆಹ್ವಾನಿಸಲಾಗುತ್ತದೆ. ಈ ಪ್ರದರ್ಶನದಲ್ಲಿ ಕರಕುಶಲ ಉತ್ಪನ್ನಗಳನ್ನು ಮಹಿಳೆಯರು ತೆಗೆದುಕೊಂಡು ಬಂದಿದ್ದು, ಸಾಂಪ್ರದಾಯಿಕ ಉಡುಗೆ ತೊಡುಗೆ, ತಿಂಡಿ-ತಿನಿಸಿಗಳ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಉದ್ಧೇಶವಾಗಿದೆ. ಸುಮಾರು 30 ಮಳಿಗೆಗಳು ಇದರಲ್ಲಿ ಭಾಗಿಯಾಗಿವೆ ಎಂದು ಕಾಯಕ ಕಟ್ಟೆಯ ಸಂಸ್ಥಾಪಕರಾದ ಆಶಾ ಯಮಕನಮರ್ಡಿ ಅವರು ಇನ್ ನ್ಯೂಸ್’ಗೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೂಪಾ ಬಾದಲ್ ಅವರು, ಕಾಯಕ ಕಟ್ಟೆ ಉದ್ಯಮಿ ಪ್ರದರ್ಶನದಲ್ಲಿ ಮನೆಯಲ್ಲಿಯೇ ತಯಾರಿಸಿದ ಕರಕುಶಲ ವಸ್ತುಗಳು ಮತ್ತು ತಿಂಡಿ ತಿನಿಸಿಗಳನ್ನು ಇರಿಸಲಾಗಿದೆ. ಅತ್ಯಂತ ಸುಂದರವಾದ ಪ್ರದರ್ಶನ ಇದಾಗಿದ್ದು, ಮಹಿಳೆಯರು ಸಬಲೀಕರಣಕ್ಕಾಗಿ ಇದು ಪೂರಕವಾಗಿದೆ ಎಂದರು.

ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಿಳಾ ಜಿಲ್ಲಾ ಘಟಕದ ಬೆಳಗಾವಿ ಜಿಲ್ಲಾಧ್ಯಕ್ಷರಾದ ರತ್ನಪ್ರಭ ವಿ. ಬೆಲ್ಲದ, ಕಾಯಕ ಕಟ್ಟೆಯ ಸಂಸ್ಥಾಪಕರು ಮತ್ತು ಪ್ರಧಾನ ಕಾರ್ಯ ನಿರ್ವಾಹಕರಾದ ಆಶಾ ಎಸ್. ಯಮಕನಮರಡಿ, ಹಾಗೂ ಕಾಯಕ ಕಟ್ಟೆಯ ನಿರ್ವಾಹಕ ಮಂಡಳಿಯ ಮುಖ್ಯ ನಿರ್ವಾಹಕಿಯರಾದ ಶೈಲಾ ಸಂಸುದ್ದಿ, ಸುಧಾ ಪಾಟೀಲ ಮತ್ತು ವಿದ್ಯಾ ಸವದಿ ಅವರು ಉಪಸ್ಥಿತರಿದ್ದರು. ಇವರೊಂದಿಗೆ ಕಾಯಕ ಕಟ್ಟೆಯ ಎಲ್ಲ ಉದ್ಯಮಿ ಸಹೋದರಿಯರು ಮತ್ತು ಸ್ಥಳೀಯ ಮಹಿಳಾ ಸಾಧಕಿಯರು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.


Spread the love

About Laxminews 24x7

Check Also

ಬೆಳಗಾವಿ ಕೆ.ಎಸ್.ಆರ್. ಸಿ ಬಿ ಎಸ್ ಸಿ ಶಾಲಾ ಮಕ್ಕಳಲ್ಲಿ ಆತ್ಮರಕ್ಷಣೆಯ ಕಲೆ: 150 ವಿದ್ಯಾರ್ಥಿಗಳಿಗೆ ಕರಾಟೆ ಬೆಲ್ಟ್ ವಿತರಣೆ

Spread the loveಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಮತ್ತು ಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಅಸೋಸಿಯೇಷನ ವತಿಯಿಂದ ಕೆ.ಎಸ್.ಆರ್. ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ