ರಾಮದುರ್ಗ: ವಿದ್ಯಾರ್ಥಿಗಳು ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಸದ್ಭಳಕೆ ಮಾಡಿಕೊಂಡು, ಆತ್ಮವಿಶ್ವಾಸದೊಂದಿಗೆ ಸ್ವಯಂ ಉದ್ಯೋಗ ಕೆಗೊಂಡದಲ್ಲಿ ನಿಶ್ಚಿತ ಗುರಿ ತಲುಪಲು ಸಾಧ್ಯ ಎಂದು ವಿರಕ್ತಮಠ ಟ್ರಸ್ಟ್ ಅಧ್ಯ ಪ್ರದಿಪಕುಮಾರ ಪಟ್ಟಣ ಹೇಳಿದರು.
ನಗರದ ಅರಮನೆ ಆವರಣದಲ್ಲಿರುವ ಕ್ಯಾಂಬ್ರೀಡ್ಜ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಈಚೆಗೆ ಉದ್ಘಾಟಿಸಿ ಮಾತನಾಡಿದರು.
ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ, ಯುವಕರು ಭವಿಷ್ಯ ರೂಪಿಸಿಕೊಳ್ಳಲು ಶಿಣದ ಪಾತ್ರ ಅಲ್ಲಗಳೆಯುವಂತಿಲ್ಲ. ಪಾಲಕರು ಮಕ್ಕಳ ಚಲನವಲನಗಳ ಬಗ್ಗೆ ನಿಗಾ ವಹಿಸಿ, ಮಾರ್ಗದರ್ಶನ ನೀಡಿ ಎಂದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಮುಳ್ಳೂರ ಅನ್ನದಾನೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯರು, ವಿದ್ಯಾರ್ಥಿಗಳು ಮೊಬೆಲ್, ಟಿವಿ ಬಳಕೆಯಿಂದ ದೂರವಿದ್ದು, ಓದಿನ ಕುರಿತು ಗಮನ ಹರಿಸಿ ಎಂದರು.
ವಿಜಯ ಸೇನಾ ಸಮಿತಿ ಸಂಸ್ಥಾಪಕ ಅಧ್ಯ ವಿಜಯ ನಾಯಕ, ಸಂಸ್ಥೆಯ ಅಧ್ಯ ಮಹಾಂತೇಶ ರೊಕ್ಕದಕಟ್ಟಿ ಮಾತನಾಡಿದರು. ಶಾಲೆಯ ವಾರ್ಷಿಕ ಕ್ರೀಡಾ ಕೂಟ ಹಾಗೂ ವಿವಿಧ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ ವಿದ್ಯಾರ್ಥಿಗಳಿಗೆ ಸಾಂಸತಿಕ ಕಾರ್ಯಕ್ರಮ ನಡೆದವು.
ಸಂಸ್ಥೆಯ ಆಡಳಿತಾಧಿಕಾರಿ ನಂದಿನಿ ಪಿ., ಮುಖ್ಯಶಿಕ್ಷಕಿ ಶಶಿಕಲಾ ರೊಕ್ಕದಕಟ್ಟಿ, ಪತ್ರಕರ್ತರಾದ ಮಲ್ಲಿಕಾರ್ಜುನರಡ್ಡಿ ಗೊಂದಿ, ಗೌಡಪ್ಪಗೌಡ ಪಾಟೀಲ ಇತರರಿದ್ದರು. ಶಿಕಿ ರಹೀಮಾ ದೇಸಾಯಿ ಸ್ವಾಗತಿಸಿದರು. ಅನುಪಮಾ ಬುಳ್ಳನ್ನವರ ನಿರೂಪಿಸಿದರು. ಶತಿ ಬೆಡಗೆ ವಂದಿಸಿದರು.
Laxmi News 24×7