Breaking News

ರೇಣುಕಾಚಾರ್ಯರ ತತ್ವಗಳು ಸಮಾಜಕ್ಕೆ ಪ್ರೇರಣೆ: ಮುರುಂದ್ರ ಸ್ವಾಮೀಜಿ

Spread the love

ಸವದತ್ತಿ: ಸಮಾನತೆ, ಸಾಮರಸ್ಯ ಹಾಗೂ ಸಂಸ್ಕಾರಗಳ ಮಹತ್ವ ಸಾರಿದ ಜಗದ್ಗುರು ರೇಣುಕಾಚಾರ್ಯರ ತತ್ವಗಳು ಸಮಾಜಕ್ಕೆ ಪ್ರೇರಣೆಯಾಗಿವೆ ಎಂದು ಮುನವಳ್ಳಿ ಸೋಮಶೇಖರ ಮಠದ ಮುರುಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ತಹಸೀಲ್ದಾರ್​ ಕಚೇರಿಯಲ್ಲಿ ತಾಲೂಕಾಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ರೇಣುಕಾಚಾರ್ಯರ ಉಪದೇಶಗಳು ಶಾಂತಿ ಮತ್ತು ಸೌಹಾರ್ದ ಬಲಪಡಿಸುವಲ್ಲಿ ಮಾರ್ಗದರ್ಶಕವಾಗಿವೆ ಎಂದರು.
ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗನ್ನವರ, ಉದ್ಯಮಿ ಅಶ್ವತ್ಥ ವೈದ್ಯ ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟು ಮತ್ತು ಸೌಹಾರ್ದ ಬೆಳವಣಿಗೆಗೆ ರೇಣುಕಾಚಾರ್ಯರ ಸಂದೇಶಗಳು ಪ್ರಸ್ತುತವಾಗಿವೆ ಎಂದರು.
ಅಲ್ಲಮಪ್ರಭು ಪ್ರಭುನವರ, ಶ್ರೇಯಸ್​ ಮಾಮನಿ, ಕುಮಾರಸ್ವಾಮಿ ತಲ್ಲೂರಮಠ, ದೀಪಕ ಜಾನ್ವೇಕರ, ಐ.ಪಿ.ಪಾಟೀಲ, ಸೋಮಯ್ಯ ಗುದೈನವರಮಠ, ಬಿ.ಎನ್​.ಹಿರೇಮಠ, ಎಚ್​.ಪಿ.ಪಾಟೀಲ, ಸಿದ್ದಯ್ಯ ಕಾಡದೇವರಮಠ, ಈರಯ್ಯ ಕಾಂತಿಮಠ, ಸಿದ್ದಯ್ಯ ಹಿರೇಮಠ, ದುಂಡಯ್ಯ ರಾಮರಡ್ಡಿಮಠ, ಕುಮಾರ ಹಿರೇಮಠ ಇತರರಿದ್ದರು.

Spread the love

About Laxminews 24x7

Check Also

​ಹಿರೇಕುಂಬಿಯ ಶ್ರೀ ಅಮೋಘಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ!

Spread the love​ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನಮ್ಮ ಸಂಕಲ್ಪ. ಇಂದು ಕ್ಷೇತ್ರದ ಹಿರೇಕುಂಬಿ ಗ್ರಾಮದ ಪರಮ ಪವಿತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ