Breaking News

ಬಾಗಲಕೋಟೆ ಕಲ್ಲು ತೂರಾಟ ಕೇಸ್‌ | ಹಿಂದೂ ಯುವಕರ ಬಂಧನ ವೇಳೆ ಪೊಲೀಸರ ಅಡ್ಡಗಟ್ಟಿ ಪ್ರತಿಭಟಿಸಿದ ಮಹಿಳೆಯರು

Spread the love

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ  ವೇಳೆ ಮಸೀದಿಯಿಂದ ಕಲ್ಲು ಎಸೆತ  ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಯುವಕರನ್ನು ಬಂಧಿಸಲು ಮುಂದಾದ ಪೊಲೀಸರನ್ನು ಮಹಿಳೆಯರು ಅಡ್ಡಗಟ್ಟಿ ಪ್ರತಿಭಟಿಸಿದ್ದಾರೆ.

ಇಂದು ಪೊಲೀಸರು ಕಿಲ್ಲಾ ಓಣಿಯ ಯುವಕ ಮತ್ತು ಮಾಗಿಯನ್ನು ಬಂಧಿಸಿ ಕಾರಿನಲ್ಲಿ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರು ಮತ್ತು ಓಣಿಯ ಜನರು ಬಂಧಿಸದಂತೆ ತಡೆದಿದ್ದಾರೆ.

ಕಲ್ಲೆಸೆತ ಮಾಡಿದ ಕಿಡಿಗೇಡಿಗಳನ್ನು ಬಿಟ್ಟು ಅಮಾಯಕರನ್ನು ಬಂಧಿಸಿ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಮಹಿಳೆಯರು ಮಾಗಿಯನ್ನು ಮನೆಗೆ ಕಳುಹಿಸಿ ಇಲ್ಲದೇ ಇದ್ದರೆ ಠಾಣೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಕಿಲ್ಲಾಗಲ್ಲಿಗೆ ಆಗಮಿಸಿದ ಎಎಸ್‌ಪಿ ಜಗದೀಶ್ ಅವರ ಮುಂದೆ ಸಮಸ್ಯೆ ಹೇಳಿಕೊಂಡ ಮಹಿಳೆಯರು ಕಲ್ಲು ಎಸೆದವರನ್ನು ಬಿಟ್ಟು ನಮ್ಮ ಹುಡುಗರನ್ನು ಬಂಧಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಪೊಲೀಸರು ನಮ್ಮ ಬಟ್ಟೆ ಹಿಡಿದು ಎಳೆದಾಡಿದ್ದಾರೆ ಎಂದು ದೂರಿದರು.


Spread the love

About Laxminews 24x7

Check Also

ಪಿಯುಸಿ ಫಲಿತಾಂಶ: ರಾಜ್ಯ ಮಟ್ಟದಲ್ಲಿ ಬಿವಿವಿ ಸಂಘಕ್ಕೆ ಮೂರು ರ್ಯಾಂಕ್

Spread the loveಬಾಗಲಕೋಟೆ: ಪಿಯುಸಿ ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ ಮೂರು ರ್ಯಾಂಕ್ ಪಡೆಯುವುದರ ಮೂಲಕ ಬಿವಿವಿ ಸಂಘದ ವಿದ್ಯಾರ್ಥಿಗಳು ಉತ್ತಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ