ಬೆಳಗಾವಿ: ಜಿಲ್ಲೆಯಲ್ಲಿ ಚಾಲಕರ ರ್ನಿಲಕ್ಷ$್ಯ ಮದ್ಯಸೇವನೆ ಮಾಡಿ ವಾಹನ ಚಲಾವಣೆ, ಅತಿಯಾದ ವೇಗ ಹೀಗೆ ವಿವಿಧ ಕಾರಣಗಳಿಂದ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಒಂದೇ ವರ್ಷದಲ್ಲಿ 800 ಜನ ಮೃತಪಟ್ಟಿದ್ದಾರೆ ಎಂದು ಎಸ್ಪಿ ಕೆ.ರಾಮರಾಜನ್ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ಅಪಘಾತ ತಡೆಗಟ್ಟಲು ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕೇಸ್ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಶಬ್ದಮಾಲಿನ್ಯ ತಡೆಗಟ್ಟಲು ಟ್ರಾಕ್ಟರ್ಗಳಲ್ಲಿನ ಸೌಂಡ್ ಸಿಸ್ಟಂ ಜಪ್ತಿ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಸಂಚಾರ ನಿಯಮ ಉಲ್ಲಂಸಿದ 300 ಟ್ರಾಕ್ಟರ್ ಮಾಲೀಕರು, ಚಾಲಕರ ವಿರುದ್ಧ ಕೇಸ್ ದಾಖಲಿಸಿ ಸೌಂಡ್ ಸಿಸ್ಟಂ ವಶಪಡಿಸಿಕೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಅಪರಾಧಗಳಲ್ಲಿ ಭಾಗಿಯಾಗುತ್ತಿರುವ ರೌಡಿಶೀಟರ್ಗಳನ್ನು ಗಡಿಪಾರು ಮಾಡುವುದು ಹಾಗೂ ಅನಗತ್ಯವಾಗಿ ಗುಂಪು ಕಟ್ಟಿಕೊಂಡು ಓಡಾಡಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಲಾಗಿದೆ. ಯರಗಟ್ಟಿ ಪಟ್ಟಣದ ಹೊರವಲಯದಲ್ಲಿ ರೌಡಿಶೀಟರ್ ಒಬ್ಬನ ಜನ್ಮದಿನ ಆಚರಣೆ ನೆಪದಲ್ಲಿ ಹೆದ್ದಾರಿ ತುಂಬ ವಾಹನ ಓಡಾಡಿಸಿ, ಸಾರ್ವಜನಿಕರಿಗೆ ಕಿರಿಕಿರಿ ನೀಡಿ, ಸಂಚಾರ ನಿಯಮ ಉಲ್ಲಂಸಿರುವ ಹಿನ್ನೆಲೆಯಲ್ಲಿ ಕೇಸ್ ದಾಖಲಿಸಿ ವಾಹನ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಬೈಲಹೊಂಗಲ ತಾಲೂಕಿನ ನಯಾನಗರ ಸಮೀಪ ಮಲಪ್ರಭಾ ನದಿಯಲ್ಲಿ ಪತ್ತೆಯಾಗಿರುವ ಮೂರು ಬೈಕ್ ಕಳವಾಗಿದ್ದವು. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನದಿಯಲ್ಲಿ ಬೈಕ್ ಎಸೆದಿರುವವರ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
Laxmi News 24×7