Breaking News

Belagavi: ಮುರಘೇಂದ್ರಗೌಡ ಎಸ್. ಪಾಟೀಲ ಟೋಫಿ ಆರಂಭ

Spread the love

ಬೆಳಗಾವಿ : ಐಪಿಎಲ್‌ನಂತಹ ಮ್ಯಾಚ್‌ಗಳು ಬೆಳಗಾವಿಯಲ್ಲೂ ನಡೆಯುವ ರೀತಿಯಲ್ಲಿ ಇಲ್ಲಿನ ಸ್ಟೇಡಿಯಂ ಅಭಿವೃದ್ಧಿಯಾಗಬೇಕಿದೆ. ಇದಕ್ಕಾಗಿಯೇ ಈಚೆಗೆ ಏಷಿಯನ್ ಕ್ರಿಕೆಟ್ ಕೌನ್ಸಿಲ್ ಸದಸ್ಯ ಆಶೀಷ ಶೇಲಾರರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದೇನೆ. ಬೆಳಗಾವಿಗೆ ಐಪಿಎಲ್ ಮ್ಯಾಚ್‌ಗಳು ಬರುವವರೆಗೂ ನಮ್ಮ ಪ್ರಯತ್ನ ಮುಂದುವರೆಯುತ್ತದೆ ಎಂದು ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ನಗರದ ಸರ್ದಾರ ಮೈದಾನದಲ್ಲಿ ಎಂಪಿ ಫೌಂಡೇಶನ್ ವತಿಯಿಂದ ಆಯೋಜಿಸಿರುವ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಟುಗಳನ್ನು ಒಳಗೊಂಡಿರುವ ‘ಆಲ್ ಇಂಡಿಯಾ ಓಪನ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ-26’ ಶ್ರೀ ಮುರಘೇಂದ್ರಗೌಡ ಎಸ್.ಪಾಟೀಲ ಟ್ರೋಫಿಯ ಮೊದಲ ಸರಣಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಕೇವಲ ಕ್ರಿಕೆಟ್‌ಗಾಗಿ ಮಾತ್ರ ನಾವು ಸ್ಟೇಡಿಯಂ ಅಭಿವೃದ್ಧಿ ವಿಚಾರ ಮಾಡುತ್ತಿಲ್ಲ. ಒಂದು ಸಲ ಇಲ್ಲಿ ದೊಡ್ಡ ಪಂದ್ಯಗಳು ಆರಂಭಗೊಂಡಲ್ಲಿ ನಮ್ಮ ನಗರದ ವ್ಯಾಪಾರೋದ್ಯಮವೂ ಬೆಳೆಯುತ್ತದೆ. ಸಮಗ್ರವಾಗಿ ಬೆಳಗಾವಿಗೆ ಒಳ್ಳೆಯದಾಗುತ್ತದೆ ಎಂದರು.
ಪಂದ್ಯಾವಳಿಯ ಆಯೋಜಕ ಪ್ರತಿಷ್ಠಾನದ ಸಂಸ್ಥಾಪಕ ಮುರಘೇಂದ್ರಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಫೆ.22ರವರೆಗೆ ನಡೆಯುವ ಟೂರ್ನಿಯಲ್ಲಿ ಕರ್ನಾಟಕ ಮಾತ್ರವಲ್ಲದೆ ಉತ್ತರ ಪ್ರದೇಶ, ದೆಹಲಿ, ಗೋವಾದ ತಂಡಗಳು ಭಾಗಹಿಸುತ್ತಿವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಕೆಟ್ ಪಂದ್ಯಗಳಲ್ಲಿ, ರಣಜಿ, ಐಪಿಎಲ್‌ನಲ್ಲಿ ಆಡಿರುವ ಕ್ರಿಕೆಟಿಗರು ಒಂದೊಂದು ತಂಡದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಥಮ ತಂಡಕ್ಕೆ 5,27,127 ರೂ., ದ್ವಿತೀಯ ಸ್ಥಾನಕ್ಕೆ 2,51,127ರೂ. ನಗದು ಬಹುಮಾನ, ಸರಣಿ ಶ್ರೇಷ್ಠ ಕ್ರೀಡಾಪಟುವಿಗೆ ಬೈಕ್ ಸೇರಿದಂತೆ ವೈಯಕ್ತಿಕ ವಿಭಾಗದಲ್ಲಿ ವಿವಿಧ ಆಕರ್ಷಕ ಬಹುಮಾನಗಳಿವೆ ಎಂದು ವಿವರಿಸಿದರು.
ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅವಿನಾಶ ಪೋತದಾರ, ಯಲ್ಲಪ್ಪ ಕುರಬರ, ರವಿರಾಜ ಪಾಟೀಲ, ಶಿವಾಜಿ ಶಹಾಪುರಕರ, ದಾದಾಗೌಡ ಬಿರಾದಾರ, ಮಲ್ಲಪ್ಪ ಪಾಟೀಲ, ಸಿದ್ದಪ್ಪ ಸಾಬಣ್ಣವರ, ಎಫ್.ಎಸ್.ಸಿದ್ದನಗೌಡ, ಮಂಜುನಾಥ ಪಮ್ಮಾರ, ಹನುಮಂತ ಉಪ್ಪರ ಇತರರಿದ್ದರು. ತೇಜಸ್ವಿನಿ ತಮೋಚೆ ನಿರೂಪಿಸಿದರು.

Spread the love

About Laxminews 24x7

Check Also

ಬೆಳಗಾವಿ: ಒಂದೇ ವರ್ಷದಲ್ಲಿ ಅಪಘಾತಕ್ಕೆ 800 ಬಲಿ

Spread the loveಬೆಳಗಾವಿ: ಜಿಲ್ಲೆಯಲ್ಲಿ ಚಾಲಕರ ರ್ನಿಲಕ್ಷ$್ಯ ಮದ್ಯಸೇವನೆ ಮಾಡಿ ವಾಹನ ಚಲಾವಣೆ, ಅತಿಯಾದ ವೇಗ ಹೀಗೆ ವಿವಿಧ ಕಾರಣಗಳಿಂದ ರಸ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ