Breaking News

ಹಿಂದೂ ಧರ್ಮವನ್ನು ಒಗ್ಗೂಡಿಸಿ ಧರ್ಮ ಜಾಗೃತಿಯನ್ನು ನಿರಂತರವಾಗಿ ಮಾಡಬೇಕೆಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಕರೆ ನೀಡಿದರು.

Spread the love

ಹಿಂದೂ ಧರ್ಮವನ್ನು ಒಗ್ಗೂಡಿಸಿ ಧರ್ಮ ಜಾಗೃತಿಯನ್ನು ನಿರಂತರವಾಗಿ ಮಾಡಬೇಕೆಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಕರೆ ನೀಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಹಿಂದೂತ್ವನಿಷ್ಠ ಕಾರ್ಯಕರ್ತರ ಸಮಾವೇಶ ಮತ್ತು ಸ್ನೇಹಭೋಜನ ಕಾರ್ಯಕ್ರಮವನ್ನು ಧನಂಜಯ ಜಾಧವ ಮಿತ್ರ ಪರಿವಾರದ ನೇತೃತ್ವದಲ್ಲಿ ಬೆಳಗಾವಿ ತಾಲೂಕಿನ ಉಚಗಾಂವದ ಮಳೇಕರಣಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಭಯ ಪಾಟೀಲ, ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರ ಮಂಗೇಶ ಪವಾರ್, ಶ್ರೀರಾಮ ಸೇನಾ ಮುಖ್ಯಸ್ಥರಾದ ರವಿಕುಮಾರ್ ಕೋಕಿತ್ಕರ್, ಖಾನಾಪುರದ ಮುಖಂಡರಾದ ಸಂಜಯ್ ಕುಬಲ್, ಪಂಡಿತ್ ಓಗ್ಲೆ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಶಾಸಕ ಅಭಯ್ ಪಾಟೀಲ್ ಅವರು ಮಾತನಾಡಿ ಹಿಂದೂ ಧರ್ಮವನ್ನು ಒಗ್ಗೂಡಿಸಿ ಧರ್ಮ ಜಾಗೃತಿಯನ್ನು ನಿರಂತರವಾಗಿ ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಆಗಮಿಸಿದ್ದ ಅನಿಲ್ ಮಹಾರಾಜ್ ದೇವಳೇಕರ್ , ಧನಂಜಯ ಜಾಧವ ಪಂಡಿತ್ ಓಗ್ಲೆ, ಸಂಜಯ್ ಕುಬಳ್ ಮತ್ತು ಈರಣ್ಣ ಕಡಾಡಿ ಅವರು ಕೂಡ ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಕೋಮಲ್ ಗಾವಡೆ, ಪಂಕಜ್ ಘಾಡಿ, ಮಾನಸಿ ಮುಕುಂದ್ ಗೋಖಲೆ ಇನ್ನುಳಿದವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ