ಬೆಳೆ ಸಮೀಕ್ಷೆದಾರರ ಸಂಘದಿಂದ ಬೃಹತ್ ಪ್ರತಿಭಟನೆ: ಜೀವ ವಿಮೆ, ಸೌಲಭ್ಯಗಳಿಗೆ ಆಗ್ರಹ!
ಬೆಳೆ ಸಮೀಕ್ಷೆದಾರರಿಗೆ ಜೀವ ವಿಮೆ ನೀಡಲು ಆಗ್ರಹ.
ವೇತನ ಕೇವಲ 1 ರೂ. ಹೆಚ್ಚಳ; ತೀವ್ರ ಆಕ್ರೋಶ.
ಅರಣ್ಯದಲ್ಲಿ ವಿಷಜಂತು ಕಾಡು ಪ್ರಾಣಿಗಳು ರಕ್ಷಣೆಯಾರು?
ಬೇಡಿಕೆ ಈಡೇರದಿದ್ದರೆ ರಾಜ್ಯಮಟ್ಟದ ಹೋರಾಟ ಖಚಿತ.
ರೈತರ ಬೆಳೆ ಸಮೀಕ್ಷೆಯ ಬಹುಮುಖ್ಯ ಕೆಲಸ ಮಾಡುವ ಸಿಬ್ಬಂದಿಗಳು ಇಂದು ಬೀದಿಗೆ ಇಳಿದಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಡಿ ಕೆಲಸ ಮಾಡುವ ಈ ಸಮೀಕ್ಷೆದಾರರಿಗೆ ಕಳೆದ 8 ರಿಂದ 10 ವರ್ಷಗಳಿಂದ ಸರ್ಕಾರ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ. ತಮ್ಮ ಜೀವ ರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ಬೆಳೆ ಸಮೀಕ್ಷೆದಾರರ ಸಂಘವು ಇಂದು ಪ್ರತಿಭಟನೆ ನಡೆಸಿದ್ದು, ತಮ್ಮ ಬೇಡಿಕೆಗಳು ಈಡೇರದಿದ್ದರೆ ರಾಜ್ಯಮಟ್ಟದ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಕೃಷಿ ಮತ್ತು ತೋಟಗಾರಿಕೆ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಬೆಳೆ ಸಮೀಕ್ಷೆದಾರರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಕಳೆದ 8-10 ವರ್ಷಗಳಿಂದ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಅರಣ್ಯ ಪ್ರದೇಶದಲ್ಲಿ ಸಮೀಕ್ಷೆ ಮಾಡುವಾಗ ವಿಷ ಜಂತುಗಳ ಅಪಾಯ ಇರುವುದರಿಂದ ಕಡ್ಡಾಯವಾಗಿ ಜೀವ ವಿಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷರು ಮಾತನಾಡಿ, “ಒಂದು ತಿಂಗಳ ಕೆಲಸವನ್ನು ಒಂದು ವಾರದಲ್ಲಿ ಮುಗಿಸಲು ಅಧಿಕಾರಿಗಳು ಒತ್ತಾಯಿಸುತ್ತಾರೆ. ಆದರೆ, ನಮ್ಮ ವೇತನದಲ್ಲಿ ಯಾವುದೇ ಬದಲಾವಣೆ ಇಲ್ಲ. ಕೇವಲ ಒಂದು ರೂಪಾಯಿಯಷ್ಟೇ ಹೆಚ್ಚಳ ಮಾಡಿದ್ದು, ಇದು ಭಿಕ್ಷುಕ ಹಾಕುವ ಹಣವಿದ್ದಂತೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲೆಯ 15 ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು. ತಮ್ಮ ಬೇಡಿಕೆಗಳು ಶೀಘ್ರವಾಗಿ ಈಡೇರದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘವು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
Laxmi News 24×7