ಬಳ್ಳಾರಿ: ನಗರದ ಬುಡಾ ಕಾಂಪ್ಲೆಕ್ಸ್ ಬಳಿ ನ.18 ರಂದು ನಡೆದಿದ್ದ ಕೊಲೆ ಕೇಸ್ ಭೇದಿಸುವಲ್ಲಿ ಬಳ್ಳಾರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ಆರೋಪಿ ರಾಂಪುರದ ಸತೀಶ್ (20) ಎಂಬಾತನನ್ನು ಬಂಧಿಸಲಾಗಿದೆ. ಬಳ್ಳಾರಿಯ ಅಂದ್ರಾಳು ನಿವಾಸಿಯಾಗಿದ್ದ ಶಿವು (21) ಕೊಲೆಯಾದ ಯುವಕ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಶಿವು ಹಾಗೂ ಸತೀಶ್ ಚಿಂದಿ ಆಯುವ ಕೆಲಸ ಮಾಡ್ತಿದ್ದು, ಕೊಲೆಯಾದ ದಿನದಂದು ಇಬ್ಬರು ಸೇರಿ 2 ಸಾವಿರ ಹಣ ದುಡಿದ್ದರು. 500 ಹಣದಲ್ಲಿ ಬುಡಾ ಕಾಂಪ್ಲೆಕ್ಸ್ನ ಮೇಲ್ಛಾವಣಿಯಲ್ಲಿ ಕುಳಿತು ಮದ್ಯ ಸೇವಿಸಿದ್ದರು. ಉಳಿದ 1,500 ರೂ. ಹಣದಲ್ಲಿ ಸತೀಶ್ ಪಾಲು ಕೇಳಿದ್ದ. ಆದರೆ, ಕುಡಿದ ಮತ್ತಿನಲ್ಲಿದ್ದ ಶಿವು ಹಣ ಕೊಡಲ್ಲ ಎಂದಿದ್ದ. ಇದರಿಂದ ಕುಪಿತಗೊಂಡ ಸತೀಶ್, ಶಿವು ತಲೆ ಹಾಗೂ ಮುಖದ ಭಾಗಕ್ಕೆ ಮದ್ಯದ ಬಾಟಲಿಯಿಂದ ಹಲ್ಲೆ ಮಾಡಿ, ಬಳಿಕ ನಾಲ್ಕು ಅಂತಸ್ತಿನಿಂದ ಕೆಳಗೆ ತಳ್ಳಿ ಯಾರಿಗೂ ಅನುಮಾನ ಬಾರದಂತೆ ಪಿಲ್ಲರ್ ಕೆಳಗೆ ಶವ ಎಸೆದು ಎಸ್ಕೆಪ್ ಆಗಿದ್ದ. ಕೃತ್ಯವೆಸಗಿದ ಬಳಿಕ ಬಳ್ಳಾರಿಯ ರೈಲು ನಿಲ್ದಾಣದಲ್ಲಿ ಮಲಗಿದ್ದ ಆರೋಪಿ ಸತೀಶ್‌ನನ್ನು ಎಪಿಎಂಸಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
Laxmi News 24×7