Breaking News

ಪ್ರಸಕ್ತ ಸಾಲಿನ ಪದವಿ ಪೂರ್ವ ಕಾಲೇಜುಗಳ ಬಾಲಕ, ಬಾಲಕಿಯರ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯನ್ನು ನ.26 ರಿಂದ ಮಾಲಿನಿ ಸಿಟಿ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಎಸ್.ಎನ್.ದೇಸಾಯಿ ಹೇಳಿದರು.

Spread the love

ಬೆಳಗಾವಿ :ಪ್ರಸಕ್ತ ಸಾಲಿನ ಪದವಿ ಪೂರ್ವ ಕಾಲೇಜುಗಳ ಬಾಲಕ, ಬಾಲಕಿಯರ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯನ್ನು ನ.26 ರಿಂದ ಮಾಲಿನಿ ಸಿಟಿ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಎಸ್.ಎನ್.ದೇಸಾಯಿ ಹೇಳಿದರು.
ಸೋಮವಾರ ಬೆಳಗಾವಿ ವಾರ್ತಾ ಇಲಾಖೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಕ್ರೀಡಾಕೂಟವನ್ನು ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ, ಬೆಳಗಾವಿ ಮತ್ತು ಗೋವಿಂದರಾಮ ಸೆಕ್ಟೇರಿಯಾ ವಿಜ್ಞಾನ ಪದವಿ ಪೂರ್ವ ಕಾಲೇಜು, ಟಿಳಕವಾಡಿ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ಟೇಟಿಂಗ್ ಸ್ಪರ್ಧೆಯನ್ನು ಎಸ್.ಜಿ.ಎಫ್.ಐ ನಿಯಮದಂತೆ ಸಂಘಟಿಸಲಾಗುವುದು ಎಂದರು.
ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 100ಕ್ಕೂ ಹೆಚ್ಚು ಸೈಟ‌ರ್ಗಗಳು, ಪೋಷಕರು, ಸ್ವಯಂಸೇವಕರು ಮತ್ತು ಕಾಲೇಜಿನ ಸಿಬ್ಬಂದಿಗಳು ಸೇರಿರುತ್ತಾರೆ.ಆದ್ದರಿಂದ,
ದಿನಾಂಕ 26-11-2025 ರಂದು ಬೆಳಿಗ್ಗೆ 6.00 ರಿಂದ 9.30 ರವರೆಗೆ, ತದನಂತರ 10:30 ರಿಂದ 05:00 ಗಂಟೆಯವರೆಗೆ ಶಿವಗಂಗು ಸೈಟಿಂಗ್, ಸ್ಪೋರ್ಟ್ಸ್ ಕ್ಲಬ್. ಓಂ ನಗರ ರೋಡ ಬೆಳಗಾವಿಯಲ್ಲಿ ರಿಂಕ್ ರೇಸ್ ಸೇರಿದಂತೆ ಒಟ್ಟು 7 ರೀತಿಯ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದರು.
ನಾಗರಾಜ ಮರೆಣ್ಣವರ ಸೇರಿದಂತೆ ಇನ್ನಿತರರು ‌ಉಪಸ್ಥಿತರಿದ್ದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ