ಬಾಲ ಸಾಹಿತ್ಯ ಪ್ರತಿಭೆಗಳ ಅನಾವರಣ…
ಬೆಳಗಾವಿಯಲ್ಲಿ 25ನೇ ಮರಾಠಿ ಬಾಲ ಸಾಹಿತ್ಯ ಸಮ್ಮೇಳನಬಾಲ ಸಾಹಿತ್ಯ ಪ್ರತಿಭೆಗಳ ಅನಾವರಣ…ಬೆಳಗಾವಿಯಲ್ಲಿ 25ನೇ ಮರಾಠಿ ಬಾಲ ಸಾಹಿತ್ಯ ಸಮ್ಮೇಳನಗುರುವರ್ಯ ವಿ.ಗೋ.ಸಾಠೆ ಮರಾಠಿ ಪ್ರಬೋಧಿನಿಯ ವತಿಯಿಂದ ಆಯೋಜನೆ
ಹಲವಾರು ಬಾಲ ಸಾಹಿತಿಗಳು ಭಾಗಿ
ಬೆಳಗಾವಿಯಲ್ಲಿ ಗುರುವರ್ಯ ವಿ.ಗೋ.ಸಾಠೆ ಮರಾಠಿ ಪ್ರಬೋಧಿನಿಯ ವತಿಯಿಂದ 25ನೇ ಮರಾಠಿ ಬಾಲ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಇಂದು ಬೆಳಗಾವಿಯ ಗೋಗಟೆ ರಂಗ ಮಂದಿರದಲ್ಲಿ ಗುರುವರ್ಯ ವಿ.ಗೋ.ಸಾಠೆ ಮರಾಠಿ ಪ್ರಬೋಧಿನಿಯ ವತಿಯಿಂದ ಕಾಂಮ್ರೇಡ್ ಕೃಷ್ಣಾ ಮೇನಸೆ ಸಾಹಿತ್ಯ ನಗರಿಯಲ್ಲಿ 25ನೇ ಮರಾಠಿ ಬಾಲ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಮುಂಬೈನ ನಿವೃತ್ತ ಪ್ರಾಧ್ಯಾಪಕರಾದ ಮೃಣಾಲ್ ಪರ್ವತಕರ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಂಬೈನ ಉದ್ಯಮಿ ದೀಪಕ ಪರ್ವತಕರ ಅವರು ಸಮ್ಮೇಳನವನ್ನು ಉದ್ಘಾಟಿಸಿದರು. ಈ ವೇಳೆ ಬಾಲ ಸಾಹಿತಿಗಳು ತಮ್ಮ ಪ್ರತಿಭೆಯನ್ನು ಸಾದರಪಡಿಸಿದರು.
1957ರಲ್ಲಿ ಸ್ಥಾಪನೆಗೊಂಡ ಗುರುವರ್ಯ ವಿ.ಗೋ.ಸಾಠೆ ಮರಾಠಿ ಪ್ರಬೋಧಿನಿಯ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಲ್ಲಿ ಮರಾಠಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಮಕ್ಕಳಲ್ಲಿ ಓದು ಮತ್ತು ಬರಹದ ಜಾಗೃತಿ ಮೂಡಿಸಿ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು. ಈ ಕಾರ್ಯವನ್ನು ಮಾಡಿದ ಹಿನ್ನೆಲೆ ಇಂದು ಅನೇಕ ಬಾಲ ಸಾಹಿತ್ಯಕಾರರು ಬೆಳಕಿಗೆ ಬರುತ್ತಿದ್ದಾರೆ ಎಂದು ಗುರುವರ್ಯ ವಿ.ಗೋ.ಸಾಠೆ ಮರಾಠಿ ಪ್ರಬೋಧಿನಿಯ ಸದಸ್ಯರಾದ ಇಂದ್ರಜೀತ್ ಮೋರೆ ಇನ್ ನ್ಯೂಸ್’ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು. ಬೈಟ್
ಸಮ್ಮೇಳನವನ್ನು ಯಶಸ್ವಿಗೊಳಿಸಲು ಸುಭಾಷ್ ಓವುಳಕರ, ಜಯಂತ್ ನಾರ್ವೇಕರ, ಗುರುವರ್ಯ ವಿ.ಗೋ.ಸಾಠೆ ಮರಾಠಿ ಪ್ರಬೋಧಿನಿಯ ಕಾರ್ಯಕಾರಿ ಮಂಡಳವು ಶ್ರಮಿಸಿತು. ಇಂದಿನ ಸಮ್ಮೇಳನದಲ್ಲಿ ನೆರೆಯ ಮಹಾರಾಷ್ಟ್ರದ ಚಂದಗಢದ ಸುಮಾರು 7 ಶಾಲೆಯ ತಂಡಗಳು ಭಾಗಿಯಾಗಿದ್ಧವು.
Laxmi News 24×7